ಭುವನೇಶ್ವರ: ಸಿಟ್ಟಿನಿಂದ ಮರದ ಹಲಗೆಯಿಂದ ತನ್ನ ತಮ್ಮನ ತಲೆಗೆ ಹೊಡೆದು ಕೊಂದಿರುವ ಅಣ್ಣನನ್ನು ಬಂಧಿಸಿರುವ ಘಟನೆ ಮನಕಪುರ ಗ್ರಾಮದಲ್ಲಿ ನಡೆದಿದೆ.
ತಮ್ಮನನ್ನ ಕೊಂದ ಅಣ್ಣ ರವೀಂದ್ರ ಕುಮಾರ್(30) ಆಗಿದ್ದಾನೆ. ಈತ ತನ್ನ ಕಿರಿಯ ಸಹೋದರನನ್ನು ಹೊಡೆದು ಕೊಂದು ಹಾಕಿದ್ದಾನೆ. ಈ ಸಂಬಂಧ ಪೊಲೀಸರು ಈತನನ್ನು ಬಂಧಿಸಿದ್ದಾರೆ.
Advertisement
Advertisement
ಒಂದು ದಿನ ಅಣ್ಣ ಮತ್ತು ತಮ್ಮನ ಮಧ್ಯೆ ವಿಪರೀತ ಜಗಳವಾಗಿದೆ. ಕೋಪದಲ್ಲಿದ್ದ ಅಣ್ಣ ಅಲ್ಲೇ ಹತ್ತಿರದಲ್ಲಿದ್ದ ಮರದ ಹಲಗೆಯನ್ನು ತೆಗೆದುಕೊಂಡು ತಮ್ಮನ ತಲೆಗೆ ಹೊಡೆದಿದ್ದಾನೆ. ಈ ವೇಳೆ ಸಹೋದರನ ತಲೆಗೆ ಗಂಭೀರ ಗಾಯವಾಗಿದೆ. ತೀವ್ರ ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
Advertisement
Advertisement
ಸಹೋದರರಿಬ್ಬರ ಮಧ್ಯೆ ಯಾವ ವಿಚಾರಕ್ಕಾಗಿ ಗಲಾಟೆಯಾಯಿತ್ತು ಎಂಬ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ. ಮೃತ ವ್ಯಕ್ತಿ ಶವವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಲ್ಲೆಗೆ ಉಪಯೋಗಿಸಿದ ಮರದ ಹಲಗೆಯನ್ನು ವಶಪಡಿಸಿಕೊಂಡಿದ್ದೇವೆ. ಈ ಕುರಿತಾಗಿ ತನಿಖೆ ನಡೆಸುತ್ತೇವೆ ಎಂದು ಕೇಂದ್ರಪರಾ ಪಟ್ಟಣದ ಐಐಸಿ ಜ್ಯೋತಿರಂಜನ್ ಸಮಂತ್ರೇ ಹೇಳಿದ್ದಾರೆ.