Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮನೆ ಮನೆಗೆ ತೆರಳಿ ಮಾಹಿತಿ ನೀಡಿ, ಕೋವಿಡ್ ಪರೀಕ್ಷೆ, ಲಸಿಕೆ ಅಭಿಯಾನಕ್ಕೆ ಮನವೊಲಿಸಿ- ಬಿಜೆಪಿ ಕಾರ್ಯಕರ್ತರಿಗೆ ಡಿಸಿಎಂ ಸೂಚನೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Bengaluru City | ಮನೆ ಮನೆಗೆ ತೆರಳಿ ಮಾಹಿತಿ ನೀಡಿ, ಕೋವಿಡ್ ಪರೀಕ್ಷೆ, ಲಸಿಕೆ ಅಭಿಯಾನಕ್ಕೆ ಮನವೊಲಿಸಿ- ಬಿಜೆಪಿ ಕಾರ್ಯಕರ್ತರಿಗೆ ಡಿಸಿಎಂ ಸೂಚನೆ

Bengaluru City

ಮನೆ ಮನೆಗೆ ತೆರಳಿ ಮಾಹಿತಿ ನೀಡಿ, ಕೋವಿಡ್ ಪರೀಕ್ಷೆ, ಲಸಿಕೆ ಅಭಿಯಾನಕ್ಕೆ ಮನವೊಲಿಸಿ- ಬಿಜೆಪಿ ಕಾರ್ಯಕರ್ತರಿಗೆ ಡಿಸಿಎಂ ಸೂಚನೆ

Public TV
Last updated: April 17, 2021 9:31 pm
Public TV
Share
2 Min Read
dcm ashwat narayan
SHARE

– ಸೋಂಕಿತರು, ಆಸ್ಪತ್ರೆಗಳ ನಡುವೆ ಸಂಪರ್ಕಸೇತುವಾಗಿ ಕೆಲಸ ಮಾಡಿ
– ಕರಪತ್ರ ಹಂಚಿ, ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸಿ

ಬೆಂಗಳೂರು: ಕೋವಿಡ್ ಎರಡನೇ ಅಲೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಮಲ್ಲೇಶ್ವರ ವಿಧಾನಸಭೆ ಕ್ಷೇತ್ರದ ಜನರ ನೆರವಿಗೆ ಧಾವಿಸುವ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಶನಿವಾರ ತಮ್ಮ ಕ್ಷೇತ್ರದ ಬಿಜೆಪಿ ಮುಖಂಡರ ಸಭೆ ನಡೆಸಿದರು.

ಸಭೆಯಲ್ಲಿ ಕೊರೊನಾ ವಿಚಾರವಾಗಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಕರೆ ನೀಡಿದ್ದು, ಸಾರ್ವಜನಿಕರಿಗೆ ಪಕ್ಷದಿಂದ ನೆರವಿನ ಹಸ್ತ ಚಾಚುವುದು ಮಾತ್ರವಲ್ಲದೆ, ಕ್ಷೇತ್ರದಲ್ಲಿ ಜನರು ಮತ್ತು ಆಸ್ಪತ್ರೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕೆಲಸ ಮಾಡಬೇಕು. ಲಸಿಕೆ ಅಭಿಯಾನಕ್ಕೂ ಕೈಜೋಡಿಸಬೇಕು ಎಂದು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು.

WhatsApp Image 2021 04 17 at 8.46.58 PM 1

ಕ್ಷೇತ್ರದಲ್ಲಿ ಕೋವಿಡ್ ಸೋಂಕು ಹೆಚ್ಚಾಗುವುದನ್ನು ತಡೆಯಲು ಪಕ್ಷದಿಂದ ಎಲ್ಲ ಪ್ರಯತ್ನವನ್ನೂ ಮಾಡಬೇಕು. ಕಾರ್ಯಕರ್ತರು ಮನೆ ಮನೆಗೂ ಭೇಟಿ ನೀಡಿ ಕೆಮ್ಮು, ನೆಗಡಿ, ಶೀತ ಇತ್ಯಾದಿ ಯಾವುದೇ ರೋಗ ಲಕ್ಷಣಗಳಿದ್ದವರನ್ನು ಪತ್ತೆ ಹಚ್ಚಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸಬೇಕು. ಜೊತೆಗೆ ಎಲ್ಲರೂ ಲಸಿಕೆ ಪಡೆಯುವಂತೆ ಹೇಳಬೇಕು. ಸೋಂಕು ತಗುಲಿದ ಕೂಡಲೇ ಚಿಕಿತ್ಸೆ ಪಡೆಯಬೇಕು. ಉಲ್ಬಣ ಸ್ಥಿತಿಗೆ ರೋಗ ಬಂದಾಗ ಅದನ್ನು ನಿಯಂತ್ರಿಸುವುದು ಕಷ್ಟವಾಗುತ್ತದೆ. ಈ ಅಂಶವನ್ನು ಜನರಿಗೆ ಮನವರಿಕೆ ಮಾಡಿಕೊಡಿ ಎಂದರು.

Corona 1

ಕೋವಿಡ್ ಪರೀಕ್ಷಾ ಕೇಂದ್ರಗಳು, ಲಸಿಕೆ ಹಾಕುವ ಕೇಂದ್ರಗಳ ಬಗ್ಗೆ ಜನರಿಗೆ ಕರಪತ್ರಗಳನ್ನು ಹಂಚುವ ಮೂಲಕ ಮಾಹಿತಿ ನೀಡಿ. ಜೊತೆಗೆ, ವಾರ್ಡ್ ವಾರು ವಾಟ್ಸಪ್ ಗ್ರೂಪ್‍ಗಳನ್ನು ಮಾಡಿಕೊಂಡು ಮಾಹಿತಿ ವಿನಿಮಯ ಮಾಡಿಕೊಳ್ಳಿ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಿ. ಜನರಿಗೆ ಅಗತ್ಯ ಮಾಹಿತಿ ಸಿಗುವಂತೆ ಎಲ್ಲ ಪ್ರಯತ್ನಗಳನ್ನೂ ಮಾಡಿ. ಕ್ಷೇತ್ರದಲ್ಲಿರುವ ಹಿರಿಯ ನಾಗರಿಕರು, ವಿಕಲಚೇತನರು, ದೈಹಿಕವಾಗಿ ಅಥವಾ ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ನೆರವಾಗಿ. ಅವರಿಗೆ ವೈದ್ಯಕೀಯ ಸೇವೆ, ಔಷಧ ಇತ್ಯಾದಿ ಸುಲಭವಾಗಿ ಸಿಗುವಂತೆ ಮಾಡಲು ಸಹಾಯ ಮಾಡಿ. ಕೋವಿಡ್ ಸೋಂಕು ಬಂದಾಗ ಲಾಕ್‍ಡೌನ್ ಇದ್ದ ಸಂದರ್ಭದಲ್ಲಿ ಅರ್ಪಣಾ ಮನೋಭಾವದಿಂದ ನಾವೆಲ್ಲರೂ ಕೆಲಸ ಮಾಡಿದ್ದೆವು. ಈಗಲೂ ಅದೇ ರೀತಿ ಜನರ ಸೇವೆ ಮಾಡಬೇಕು ಎಂದು ತಿಳಿಸಿದರು.

corona vaccine 1 medium

ಯಾವುದೇ ಕಾರಣಕ್ಕೂ ಕೋವಿಡ್‍ನಿಂದ ಪ್ರಾಣ ನಷ್ಟ ಆಗಬಾರದು. ಜನರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ, ಪಕ್ಷದಿಂದ ಆಗುವ ಎಲ್ಲ ನೆರವನ್ನೂ ಒದಗಿಸಬೇಕು ಎಂದು ತಿಳಿಸಿದರು. ಸಭೆಯಲ್ಲಿ ಪಕ್ಷದ ಉತ್ತರ ವಿಭಾಗದ ಉಪಾಧ್ಯಕ್ಷ ಡಾ.ವಾಸು, ಮಲ್ಲೇಶ್ವರ ಕ್ಷೇತ್ರದ ಮಂಡಲ ಅಧ್ಯಕ್ಷ ಕಾವೇರಿ ಕೇದಾರನಾಥ್ ಹಾಗೂ ಇತರರು ಪಾಲ್ಗೊಂಡಿದ್ದರು.

TAGGED:activistsAshwath NarayanbjpCorona VirusPublic TVಅಶ್ವಥ್ ನಾರಾಯಣ್ಕಾರ್ಯಕರ್ತರುಕೊರೊನಾ ವೈರಸ್ಪಬ್ಲಿಕ್ ಟಿವಿಬಿಜೆಪಿ
Share This Article
Facebook Whatsapp Whatsapp Telegram

Cinema news

Sarse Ninna Seraga Sarse song jogi prem
ಸರ್ಸೆ ಸೆರಗ ಸೆರ್ಸೆ ಹಾಡಿನಲ್ಲಿ ಅಶ್ಲೀಲತೆ ಆರೋಪ – ನಿರ್ದೇಶಕ ಪ್ರೇಮ್ ಸೇರಿ ಹಲವರಿಗೆ ಮಹಿಳಾ ಆಯೋಗ ನೋಟಿಸ್
Cinema Latest Main Post Sandalwood
Dhurandhar 2
ವಿಶ್ವದಾದ್ಯಂತ ‘ಧುರಂಧರ್‌ 2’ ರಿಲೀಸ್‌ – ರಣವೀರ್‌ ಸಿಂಗ್‌ ಕಮಾಲ್‌
Bollywood Cinema Latest Main Post
KD Vulgar Song Controversy I will write and release a new song Director Prem apologizes 1
ಹೊಸ ಹಾಡನ್ನು ಬರೆದು ಬಿಡುಗಡೆ ಮಾಡುತ್ತೇನೆ: ಕ್ಷಮೆ ಕೇಳಿದ ಪ್ರೇಮ್‌
Bengaluru City Cinema Districts Latest Main Post
KD The Devil Thanks for opposing the song Nora Fatehi Reacts To Vulgar Song Controversy
ಸಾಂಗ್‌ ವಿರೋಧಿಸಿದ್ದಕ್ಕೆ ಥ್ಯಾಂಕ್ಸ್‌ – ಕೆಡಿಯ ಸರ್ಸೆ ಸೆರಗ ಹಾಡಿಗೆ ನೋರಾ ಕಿಡಿ ಕಿಡಿ
Bollywood Cinema Latest Sandalwood

You Might Also Like

CJ Roy 1 3
Bengaluru City

ಮುಕ್ತಾಯ ಹಂತಕ್ಕೆ ತಲುಪಿದ ರಾಯ್ ಆತ್ಮಹತ್ಯೆ ಕೇಸ್ ತನಿಖೆ – ಮುಂದಿನ ವಾರ ವರದಿ ಸಲ್ಲಿಕೆ

Public TV
By Public TV
4 minutes ago
Bengaluru BMTC
Bengaluru City

ಕುಡಿದು ಬಿಎಂಟಿಸಿ ಬಸ್‌ ಚಾಲನೆ – ಪ್ರಶ್ನಿಸಿದ ಮಹಿಳೆ ಜೊತೆ ಚಾಲಕನ ರಂಪಾಟ

Public TV
By Public TV
11 minutes ago
Kalabairaveshwara Temple kalasa 1
Chikkamagaluru

ಯುಗಾದಿ ದಿನವೇ ಕಾಲಭೈರವನ ಸನ್ನಿಧಿ ಮುಂದೆ ವಾಮಾಚಾರ – ಸ್ಥಳೀಯರ ಆತಂಕ

Public TV
By Public TV
23 minutes ago
atanu chakraborty hdfc bank
Latest

ಜಸ್ಟ್‌ ಒಂದು ರಾಜೀನಾಮೆಗೆ ಕರಗಿತು 1 ಲಕ್ಷ ಕೋಟಿ!

Public TV
By Public TV
26 minutes ago
Yadagiri murder case
Crime

ಮಗನಿಂದ್ಲೇ ತಂದೆ ಹತ್ಯೆ ಕೇಸ್‌ಗೆ ಟ್ವಿಸ್ಟ್‌ – 75 ವಯಸ್ಸಾಗಿದ್ರೂ ಕಾಮದಾಟಕ್ಕೆ ಮಹಿಳೆಯರ ಜೊತೆ ಸಂಬಂಧ, ಐವರು ಅರೆಸ್ಟ್‌

Public TV
By Public TV
1 hour ago
Rishabh Pant Arjun Tendulkar
Cricket

ನಾನ್ಯಾಕೆ ಈ ಬ್ಯಾಟ್‌ ಬಳಸೋದು ಗೊತ್ತಾ? – ಅಪ್ಪನ ಗುಟ್ಟು ಬಿಚ್ಚಿಟ್ಟ ಅರ್ಜುನ್ ತೆಂಡೂಲ್ಕರ್!

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?