ಬಿಗ್‍ಬಾಸ್‍ಮನೆಯಲ್ಲಿ ವೈಷ್ಣವಿ ಗೌಡ ಮೊದಲಿನಿಂದಲೂ ತಾವೂ ಒಂದೇ ರೀತಿಯಲ್ಲಿ ಗುರುತಿಸಿಕೊಂಡಿರುವ ಕಂಟೆಸ್ಟಂಟ್ ಆಗಿದ್ದಾರೆ. ಆದರೆ ಮನೆಯಲ್ಲಿರುವ ಸ್ಪರ್ಧಿಗಳು ಮಾತ್ರ ವೈಷ್ಣವಿ ನಾವು ಅಂದುಕೊಂಡಂತೆ ಇಲ್ಲ ಎಂದು ಮನೆ ಮಂದಿ ವಾರಾತ್ಯಂದ ಕಾರ್ಯಕ್ರಮಲ್ಲಿ ಸುದೀಪ್ ಮುಂದೆ ಹೇಳಿದ್ದಾರೆ.
ಎಸ್ ಆರ್ ನೋ ಆಟದಲ್ಲಿ ಮನೆಯ ಸ್ಪರ್ಧಿಗಳಿಗೆ ಒಂದು ವಾರದಲ್ಲಿ ನಡೆದಿರುವ ವಿಚಾರಗಳನ್ನು ಇಟ್ಟುಕೊಂಡು ಸುದೀಪ್ ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ವೇಳೆ ಸುದೀಪ್ ಅವರು ಮನೆಯಲ್ಲಿ ಹೆಣ್ಣು ಮಕ್ಕಳಲ್ಲಿ ಹೆವಿ ತರ್ಲೆ ಎಂದರೆ ವೈಷ್ಣವಿ ಎಂದಿದ್ದಾರೆ. ಈ ವೇಳೆ ಮನೆಯಲ್ಲಿ ಬಹುತೇಕ ಮಂದಿ ಎಸ್ ಎಂದು ಹೇಳಿದ್ದಾರೆ. ಯಾಕೆ ಎಂದು ಸುದೀಪ್ ಕೇಳಿದಾಗ ಮನೆ ಮಂದಿ ಕೊಟ್ಟಿರುವ ಕಾರಣವನ್ನು ಕೇಳಿ ಬಿದ್ದಿ ಬಿದ್ದು ನಕ್ಕಿದ್ದಾರೆ.
ವೈಷ್ಣವಿಯವರ ಜೋನ್ ಅಲ್ಲಿ ನಾವು ಇದ್ದರೆ ಹೇವಿ ತರ್ಲೆ ಆಗಿರುತ್ತಾರೆ. ಅವರು ಏನು ಹೇಳಿದ್ದಾರೆ, ಏನು ಮಾಡಿದ್ದಾರೆ ಎಂದು ಪಕ್ಕದಲ್ಲಿ ಇರುವವರಿಗೂ ಗೊತ್ತು ಆಗಲ್ಲ ಎಂದು ರಘು ಹೇಳಿದ್ದಾರೆ. ಶಮಂತ್ ಹೌದು ಸರ್, ನಾನು ಹಸಿವಾಗಿದೆ ಏನಾದರೂ ಕೊಡಿ ಎಂದು ಕೇಳಿದಾಗ ನನ್ನನ್ನು ತುಂಬಾ ಆಟವಾಡಿಸಿ ಒಂದು ಚಿಕ್ಕ ಇರುಳ್ಳಿ ಪೀಸ್ ಕೊಡುತ್ತಾರೆ ಎಂದು ಹೇಳಿದ್ದಾರೆ.
ನಾನು ತುಂಬಾ ಮುಗ್ಧೆ ಸರ್ ನನಗೆ ತರ್ಲೆ ಮಾಡೋಕೆ ಬರಲ್ಲ. ನಾನು ನನ್ನ ಪಾಡಿಗೆ ಇರುತ್ತೇನೆ. ಅದನ್ನೆ ಅವರು ತರ್ಲೆ ಅಂದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಸುದೀಪ್ ಅವರು ಅಯ್ಯೋ.. ವೈಷ್ಣವಿಯವರು ತುಂಬಾ ಮುಗ್ಧೆ ಅಯ್ಯೋ ಯಾಕೋ ಬಿಡ್ತೀರಾ ಚಪ್ಪಾಳೆ ತಟ್ಟಿ ಎಂದು ಹೇಳಿ ನಕ್ಕಿದ್ದಾರೆ.
ನಾವು ನೋಡಿದ್ದು ಸುಳ್ಳಾ, ನಮ್ಮ ಕ್ಯಾಮೆರಾ ಮೆನ್‍ಗಳು ಸೆರೆ ಹಿಡಿದಿದ್ದು ಸುಳ್ಳಾ ಹಾಗಾದರೆ. ಎಲ್ಲಾ ಶೂನ್ಯ..ಶೂನ್ಯ.. ಎಂದು ವೈಷ್ಣವಿ ಅವರ ಡೈಲಾಗ್‍ಅನ್ನು ಸುದೀಪ್ ಹೇಳಿದ್ದಾರೆ. ಈ ವೇಳೆ ಮನೆ ಮಂದಿ ನಕ್ಕಿದ್ದಾರೆ.