ಮನೆಯೊಡತಿ ಜೊತೆ ಜೋಶ್‍ನಲ್ಲಿ ಕುಣಿದ ಎಮ್ಮೆಯ ವೀಡಿಯೋ ವೈರಲ್

Public TV
1 Min Read
buffalo final

– ಎಮ್ಮೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ

ಶಿಮ್ಲಾ: ಕೋಣದ ಮುಂದೆ ಕಿನ್ನರಿ ಬಾರಿಸಿದರೆ ಪ್ರಯೋಜನವಿಲ್ಲ ಎಂಬ ಗಾದೆ ಮಾತೊಂದಿದೆ. ಆದರೆ ಈ ವೀಡಿಯೋ ಗಾದೆಯನ್ನು ಸುಳ್ಳಾಗಿಸಿದೆ.

ಹೌದು. ಮನೆಯೊಡತಿಯ ಜೊತೆಗೆ ಎಮ್ಮೆಯೊಂದು ತಾನು ಕುಣಿದು ಕುಪ್ಪಳಿಸುವ ಮೂಲಕ ನೆಟ್ಟಿಗರ ಮನಸೆಳೆದಿದೆ. ಹಿಮಾಚಲಪ್ರದೇಶದ ಗ್ರಾಮವೊಂದರಲ್ಲಿ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಎಮ್ಮೆ ಬಹಳ ಜೋಶ್ ನಿಂದಲೇ ಕುಣಿಯುವುದನ್ನು ನಾವು ಕಾಣಬಹುದಾಗಿದೆ. ಮನೆಯ ಒಡತಿ ಎಮ್ಮೆಯ ಮುಂದೆ ಹಾಡಿನೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಅಲ್ಲದೆ ಎಮ್ಮೆಯನ್ನು ಕೂಡ ಕುಣಿಯುವಂತೆ ಪ್ರೇರೇಪಿಸಿದ್ದಾರೆ.

BUFFALO 1

ಹಟ್ಟಿಯಲ್ಲಿ ಎಮ್ಮೆಯನ್ನು ಕಟ್ಟಿ ಹಾಕಲಾಗಿದೆ. ಅಲ್ಲದೆ ಅದರ ಮೇಲೆ ಕಂಬಳಿ ಕೂಡ ಹೊದಿಸಲಾಗಿದೆ. ಮಹಿಳೆಯ ಹಾಡು ಹೇಳಿ, ಡ್ಯಾನ್ಸ್ ಮಾಡುತ್ತಿದ್ದಂತೆಯೇ ಎಮ್ಮೆ ಕೂಡ ಕುಣಿಯಲು ಆರಂಭಿಸಿದೆ. ಈ ವೇಳೆ ಅಲ್ಲೆ ಇದ್ದ ಪುಟ್ಟ ಮಕ್ಕಳು ಜೋರಾಗಿ ನಗುತ್ತಿರುವುದು ಕೇಳುತ್ತಿದೆ. ಡ್ಯಾನ್ಸ ಮಾಡುವ ರಭಸದಲ್ಲಿ ಎಮ್ಮೆ ಮೇಲಿದ್ದ ಕಂಬಳಿ ಕೂಡ ಕೆಳಗೆ ಬಿದ್ದಿದೆ.

ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದ್ದು, ಎಮ್ಮೆಯ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಅಲ್ಲದೆ ಮೆಚ್ಚುಗೆಯ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *