ಬೆಂಗಳೂರು: ಪಬ್ಲಿಕ್ ಟಿವಿಯ ಮನೆಯ ಮಂತ್ರಾಲಯಕ್ಕೆ ಕರೆ ಮಾಡಿ ಮಹಿಳೆಯೊಬ್ಬರು ಸಹಾಯ ಕೇಳಿದ್ದರು. ಮಹಿಳೆಯ ಸಹಾಯಕ್ಕೆ ಟಿ.ದಾಸರಹಳ್ಳಿಯ ರಾಜಗೋಪಾಲ ನಗರದ ಸಮಾಜ ಸೇವಕ ಎನ್. ನಾರಾಯಣ ಸ್ವಾಮಿ ನೆರವಿಗೆ ಧಾವಿಸಿದ್ದಾರೆ.
ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಗೀತಾ ಲಾಕ್‍ಡೌನ್ ನಿಂದಾಗಿ ಮನೆಯಲ್ಲಿರುವಂತಾಗಿತ್ತು. ಒಂದು ಹೊತ್ತಿನ ಊಟಕ್ಕಾಗಿ ಗೀತಾ ಅವರ ಕುಟುಂಬ ಪರದಾಡುತ್ತಿತ್ತು. ಮನೆಯೇ ಮಂತ್ರಾಲಯ ಕಾರ್ಯಕ್ರಮಕ್ಕೆ ಕರೆ ಮಾಡಿದ್ದ ಗೀತಾ, ದಿನಸಿಯ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಕಾರ್ಯಕ್ರಮ ನೋಡಿದ್ದ ಎನ್. ನಾರಾಯಣ ಸ್ವಾಮಿ ಮಹಿಳೆ ನೆರವಿಗೆ ಧಾವಿಸಿ 20 ದಿನಕ್ಕೆ ಬೇಕಾಗಿವ ಎಲ್ಲಾ ತರಹದ ದಿನಸಿ ಸಾಮಾಗ್ರಿಗಳು ಸೇರಿದಂತೆ ತರಕಾರಿಗಳನ್ನ ನೀಡಿದ್ದಾರೆ.
ಪಬ್ಲಿಕ್ ಟಿವಿಯ ಕಾರ್ಯಕ್ರಮ ಸ್ಪೂರ್ತಿಯಾಗಿ ಇದೆ ಕೆಲಸವನ್ನ ನಿರಂತರವಾಗಿ ಮಾಡುವುದಾಗಿ ನಾರಾಯಣ ಸ್ವಾಮಿ ತಿಳಿಸಿದ್ದಾರೆ. ಗೀತಾ ಅವರು ಸಹ ಪಬ್ಲಿಕ್ ಟಿವಿ ತಂಡಕ್ಕೆ ಧನ್ಯವಾದಗಳನ್ನ ತಿಳಿಸಿ ನೆರವು ನೀಡಿದ ಸೇವಕರಿಗೆ ಕೃತಜ್ಞತೆ ತಿಳಿಸಿದ್ದಾರೆ.