ಹೈದರಾಬಾದ್: ಟಾಲಿವುಡ್ ನಟ ಮೆಗಾಸ್ಟಾರ್ ಚಿರಂಜೀವಿ ಲಾಕ್‍ಡೌನ್ ಸಮಯದಲ್ಲಿ ಜನರಿಗೆ ಮನೆಯಲ್ಲಿಯೇ ಇರುವಂತೆ ವಿನಂತಿಸಿ ಕೊಂಡಿದ್ದಾರೆ. ಈ ಕುರಿತಂತೆ ವೀಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಜನರಿಗೆ ಸಂದೇಶ ನೀಡಿದ್ದಾರೆ. ಜೊತೆಗೆ ಕೋವಿಡ್-19 ಸೋಂಕಿತರು ತಮ್ಮನ್ನು ಹೇಗೆ ನೋಡಿಕೊಳ್ಳಬೇಕು ಮತ್ತು ಯಾವಾಗ ಆಸ್ಪತ್ರೆಗೆ ದಾಖಲಾಗಬೇಕು ಎಂದು ವಿವರಿಸಿದ್ದಾರೆ.
ವೀಡಿಯೋದಲ್ಲಿ ಚಿರಂಜೀವಿಯವರು, ಕೊರೊನಾ ವೈರಸ್ ತೀವ್ರತೆಯನ್ನು ನಿಯಂತ್ರಿಸಿಲು ಕೈಗೊಂಡಿರುವ ಲಾಕ್ ಡೌನ್ ಬಗ್ಗೆ ಮಾತನಾಡಿದ್ದು, ಜನರು ಅನಗತ್ಯವಾಗಿ ಓಡಾಡಬಾರದು ಮತ್ತು ಸುರಕ್ಷಿತ ನಿಯಮಗಳನ್ನು ಪಾಲಿಸಬೇಕು. ಕೋವಿಡ್ ಸೋಂಕಿತರು ತಮ್ಮ ಕುಟುಂಬದಿಂದ ಪ್ರತ್ಯೇಕವಾಗಿರಬೇಕು. ರಾಜ್ಯಾದ್ಯಂತ ವ್ಯಾಕ್ಸಿನೇಷನ್ ಕೇಂದ್ರಗಳು ತೆರೆದಿದ್ದು, ಪ್ರತಿಯೊಬ್ಬರು ಲಸಿಕೆ ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವುದರಿಂದಾಗಿ ಕೋವಿಡ್-19 ತೀವ್ರತೆಯನ್ನು ಕಡಿಮೆ ಮಾಡಬಹುದು ಎಂದು ತಿಳಿಸಿದ್ದಾರೆ.
Advertisement
#Covid19IndiaHelp #StayHomeStaySafe #WearMask ???? #DontPanic #GetVaccinated #DonatePlasmaSaveLives ????????
Lets #DefeatCorona ???? pic.twitter.com/g1ysqxmPJR
— Chiranjeevi Konidela (@KChiruTweets) May 14, 2021
Advertisement
ಇಂದು ಈದ್ ಹಬ್ಬದ ಪ್ರಯುಕ್ತ ಮೆಗಾಸ್ಟಾರ್ ಚಿರಂಜೀವಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಲ್ಲರಿಗೂ ಈದ್ ಮುಬಾರಕ್, ಎಂದಿಗಿಂತಲೂ ಹೆಚ್ಚಾಗಿ ಈ ಸವಾಲಿನ ಸಂದರ್ಭದಲ್ಲಿ ಸರ್ವಶಕ್ತನು ಎಲ್ಲರಿಗೂ ಉತ್ತಮ ಆರೋಗ್ಯ, ಸಂತೋಷ ಮತ್ತು ಶಾಂತಿಯನ್ನು ನೀಡಲಿ, ಪ್ರಪಂಚದಾದ್ಯಂತ ಮಾನವೀಯತೆಯ ಎಲ್ಲಾ ದುಃಖವನ್ನು ದೂರವಾಗಲಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
#EidMubarak to ALL! More than ever, in these challenging times, May the Almighty grant good health, joy and peace to all and take away all the suffering of the humanity across the world!! #EidUlFitr pic.twitter.com/xeb6YB1D6x
— Chiranjeevi Konidela (@KChiruTweets) May 14, 2021