ವಿಕೆಂಡ್‍ಗೆ ರುಚಿರುಚಿಯಾಗಿ ಸರಳವಾಗಿ ಎನನ್ನಾದರೂ ತಿನ್ನಲು ನಾಲಿಗೆ ಚಪ್ಪರಿಸುವುದ ಸಹಜ. ಪ್ರತಿನಿತ್ಯ ಕೆಲಸ ಎಂದು ಸಮಯ ಕಳೆಯುವ ಎಷ್ಟೋ ಮಂದಿ ಹೋಟೆಲ್ ನಲ್ಲಿ ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ಈ ವಾರ ಮನೆಯಲ್ಲಿಯೆ ಸರಳವಾಗಿ ರುಚಿಯಾದ ಚಿಕನ್ ತವಾ ಫ್ರೈಯನ್ನು ಫಟಾ ಫಟ್ ಎಂದು ಮಾಡಿ ಸವಿಯಿರಿ.
Advertisement
ಬೇಕಾಗುವ ಸಾಮಗ್ರಿಗಳು
* ಚಿಕನ್- ಅರ್ಧ ಕೆಜಿ
* ಶುಂಠಿ ಬೆಳ್ಳುಳ್ಳಿ ಫೇಸ್ಟ್
* ಧನಿಯಾ ಪೌಡರ್ – 1 ಟೀ ಸ್ಪೂನ್
* ಅಚ್ಚ ಖಾರದ ಪುಡಿ – 1 ಟೀ ಸ್ಪೂನ್
* ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ -1 ಟೀ ಸ್ಪೂನ್
* ಜೀರಿಗೆ ಪುಡಿ – 1 ಟೀ ಸ್ಪೂನ್
* ಗರಂ ಮಸಾಲಾ ಪೌಡರ್- ಅರ್ಧ ಟೀ ಸ್ಪೂನ್
* ನಿಂಬೆಹಣ್ಣು
* ಮೊಸರು – ಅರ್ಧ ಕಪ್
* ಕಸೂರಿ ಮೇತಿ – 1 ಟೀ ಸ್ಪೂನ್
* ಅಡುಗೆ ಎಣ್ಣೆ – 1 ಕಪ್
* ರುಚಿಗೆ ತಕ್ಕಷ್ಟು ಉಪ್ಪು
Advertisement
Advertisement
ಮಾಡುವ ವಿಧಾನ :
* ಅರ್ಧ ಕೆಜಿ ಚಿಕನ್ ತೆಗೆದುಕೊಂಡು ಚೆನ್ನಾಗಿ ತೊಳೆದು ಒಂದು ಬೌಲ್‍ಗೆ ಹಾಕಬೇಕು.
* ನಂತರ ಚಿಕನ್ ಇರುವ ಬೌಲ್‍ಗೆ ಶುಂಠಿ-ಬೆಳ್ಳುಳ್ಳಿ ಫೇಸ್ಟ್ ಸ್ವಲ್ಪ ಹಾಕಿ ಚೆನ್ನಾಗಿ ಚಿಕನ್ ಜೊತೆ ಹೊಂದಿಕೊಳ್ಳುವಂತೆ ಮಿಶ್ರಣ ಮಾಡಬೇಕು.
* ನಂತರ 1 ಟೀ ಸ್ಪೂನ್ ಧನಿಯಾ ಪೌಡರ್, ಅಚ್ಚಖಾರದ ಪುಡಿ , ಕಾಶ್ಮೀರಿ ರೆಡ್ ಚಿಲ್ಲಿ ಪೌಡರ್ ಹಾಕಿ ಚಿಕನ್ ನೊಂದಿಗೆ ಮಿಶ್ರಣ ಮಾಡಬೇಕು. ಖಾರ ಜಾಸ್ತಿ ತಿನ್ನುವವರಾಗಿದ್ದರೆ ಖಾರದ ಪುಡಿಯನ್ನು ಸ್ವಲ್ಪ ಜಾಸ್ತಿ ಸೇರಿಸಿಕೊಳ್ಳಬೇಕು.
Advertisement
* ನಂತರ ಈ ಮಸಾಲೆಗೆ ಜೀರಿಗೆ ಪುಡಿ 1 ಟೀ ಸ್ಪೂನ್ ಹಾಕಬೇಕು. ಜೊತೆಯಲ್ಲಿ ಗರಂ ಮಸಾಲಾ ಪೌಡರ್ ಅರ್ಧ ಸ್ಪೂನ್ ಹಾಕಬೇಕು. ಮೊಸರು, ಕಸೂರಿ ಮೇತಿ ಹಾಗೂ ಕೊನೆಯಲ್ಲಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಬೇಕು
* ಚಿಕನ್‍ನ್ನು ಈ ಎಲ್ಲಾ ಮಸಾಲೆಯೊಂದಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.
* ಚಿಕನ್ ಮಸಾಲೆಯೊಂದಿಗೆ ಮಿಶ್ರಣವಾಗಬೇಕು ಹಾಗಾಗಿ ಅರ್ಧ ಗಂಟೆ ಮುಚ್ಚಳ ಮುಚ್ಚಿ ಅರ್ಧ ಗಂಟೆ ಎತ್ತಿಟ್ಟುಕೊಳ್ಳಿ.
* ನಂತರ ಸ್ಟೋ ಮೇಲೆ ಒಂದು ತವಾವನ್ನು ಇಟ್ಟು 4 ರಿಂದ 5 ಟೀ ಸ್ಪೂನ್ ಎಣ್ಣೆಯನ್ನು ಹಾಕಿ ಬಿಸಿ ಮಾಡಬೇಕು.
* ಎಣ್ಣೆ ಬಿಸಿ ಆಗುತ್ತಿದ್ದಂತೆ ಮಸಾಲೆಯಿಂದ ಮಿಶ್ರಣವಾದ ಚಿಕನ್ ಅನ್ನು ಬಿಸಿಯಾದ ಎಣ್ಣೆಗೆ ಹಾಕಬೇಕು.
* ಸಣ್ಣ ಉರಿ ಬೆಂಕಿಯಲ್ಲಿ 8 ರಿಂದ 10 ನಿಮಿಷಗಳ ಕಾಲ ಚಿಕನ್ ಬೇಯಿಸಬೇಕು. ಆಗಾಗ ಚಿಕನ್ ಪ್ಲಿಪ್ ಮಾಡ್ತಿರಬೇಕು.
* ಈಗ ರುಚಿ ರುಚಿಯಾದ ಚಿಕನ್ ತವಾ ಫ್ರೈ ಸವಿಯಸಲು ಸಿದ್ಧವಾಗುತ್ತದೆ.