– ಮಗಳಿಗಾಗಿ ಪೋಷಕರ ಕಣ್ಣೀರು
ಪಾಟ್ನಾ: ಮನೆಗೆ ನುಗ್ಗಿದ ಕಳ್ಳರು ನಗದು, ಚಿನ್ನಾಭರಣ ಕದ್ದು, ಮಲಗಿದ್ದ ಬಾಲಕಿಯನ್ನ ಕರೆದುಕೊಂಡು ಹೋಗಿರುವ ಘಟನೆ ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪೋಷಕರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮಗಳನ್ನ ಹುಡುಕಿಕೊಡುವಂತೆ ಕಣ್ಣೀರು ಹಾಕುತ್ತಿದ್ದಾರೆ.
ಮರಿಗಂಜ್ ವ್ಯಾಪ್ತಿಯ ಸವರೇಜಿ ಗ್ರಾಮದ ಮನೆಗೆ ನುಗ್ಗಿದ ಕಳ್ಳರು ಬೆಲೆ ಬಾಳುವ ವಸ್ತುಗಳನ್ನ ದೋಚಿದ್ದಾರೆ. ಹೋಗುವ ವೇಳೆ ಕೊಠಡಿಯಲ್ಲಿ ಮಲಗಿದ್ದ ಅಪ್ರಾಪ್ತೆಯನ್ನ ಅಪಹಸಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಇದೊಂದು ಪ್ರೇಮ ಪ್ರಸಂಗ ಎಂದು ಅನುಮಾನಗಳು ವ್ಯಕ್ತವಾಗಿವೆ. ಪೋಷಕರು ಸಹ ಕಳ್ಳತನ ಅಂತ ದೂರು ನೀಡಿದ್ದಾರೆ. ಆದ್ರೆ ಮನೆಯಲ್ಲಿಯ ಚಿನ್ನಾಭರಣಗಳ ಜೊತೆ ಅಪ್ರಾಪ್ತೆ ಪ್ರಿಯಕರನೊಂದಿಗೆ ಹೋಗಿರುವ ಸಾಧ್ಯತೆಗಳಿವೆ. ನೆರೆ ಮನೆಯ ಯುವಕನೇ ಕಳ್ಳತನ ಮಾಡಿದ್ದಾನೆ ಎಂಬ ಆರೋಪಗಳು ಕೇಳಿ ಬಂದಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ಠಾಣೆ ಅಧಿಕಾರಿ ಶಶಿರಂಜನ್ ಕುಮಾರ ಹೇಳಿದ್ದಾರೆ.