ಉಡುಪಿ: ಜಿಲ್ಲೆಯಲ್ಲಿ ಕಳೆದ ಏಳು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದ್ದು ಜಿಲ್ಲೆಯಾದ್ಯಂತ ಅಲ್ಲಲ್ಲಿ ಮರಗಳು ಉರುಳಿ ಬೀಳುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರ್ಭಟ ಜೋರಾಗಿದೆ. ಕಳೆದ ಐದು ದಿನಗಳಿಂದ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ರಾತ್ರಿ-ಹಗಲು ನಿರಂತರ ಮಳೆ ಸುರಿಯುತ್ತಿದೆ. ಭಾರೀ ಮಳೆಗೆ ಭೂಮಿ ತೇವಗೊಂಡು ಬೃಹತ್ ಮರಗಳು ಧರೆಗೆ ಉರುಳುತ್ತಿವೆ.
ಕಾಪು ತಾಲೂಕಿನ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಮುಂಭಾಗದಲ್ಲಿದ್ದ 150 ವರ್ಷಗಳ ಹಿಂದಿನ ಮರ ಕಳೆದ ರಾತ್ರಿ ಧಾರಾಶಾಹಿಯಾಗಿದೆ. ದೇವಸ್ಥಾನದ ಮುಂಭಾಗದಲ್ಲಿದ್ದ ಕೆ. ವೆಂಕಟರಮಣ ಶೆಣೈ ಎಂಬವರ ಮನೆಯ ಮೇಲೆ ಹಾಳೆ ಮರ ಉರುಳಿದೆ. ರಾತ್ರಿ ಸುಮಾ 8ಗಂಟೆಗೆ ವಿಪರೀತ ಗಾಳಿ ಮಳೆ ಸುರಿದಿದ್ದು, ಈ ಸಂದರ್ಭ ಮರ ಬಿದ್ದಿದೆ. ಮನೆಯ ಒಳಗೆ ನಾನು ಮತ್ತು ನನ್ನ ಹೆಂಡತಿ ಇದ್ದೆವು. ಗಾಳಿ ಮಳೆಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಈ ಸಂದರ್ಭ ಭಾರೀ ದೊಡ್ಡ ಶಬ್ದ ಕೇಳಿಸಿತು. ನಮ್ಮ ಮನೆಯ ಚಾವಡಿಯ ಮೇಲೆ ಮರದ ಗೆಲ್ಲು ಬಿದ್ದಿದೆ. ಇದನ್ನೂ ಓದಿ: ಉಡುಪಿಯ ಕ್ರೆಡಿಲ್ ಎಂಜಿನಿಯರ್ ಮನೆ ಮೇಲೆ ಎಸಿಬಿ ದಾಳಿ – ಮಹತ್ವದ ದಾಖಲೆ ವಶಕ್ಕೆ
ಟೆರೇಸ್ ಮನೆ ಆಗಿರುವ ಕಾರಣ ನಾವು ಬಚಾವ್ ಆಗಿದ್ದೇವೆ. ಹಂಚಿನ ಮನೆಯಾಗಿದ್ದರೆ ಬಹಳ ಕಷ್ಟ ಇತ್ತು. ಮನೆ ಮುಂದಿಯೇ ವಿದ್ಯುತ್ ತಂತಿ ಬಿದ್ದಿದ್ದು ಭಯ ಹುಟ್ಟಿಸುತ್ತಿದೆ. ಬೆಳಗ್ಗೆ ಮೆಸ್ಕಾಂ ಅಧಿಕಾರಿಗಳು, ಪಂಚಾಯತ್ ಅಧಿಕಾರಿಗಳು, ಸಾರ್ವಜನಿಕರು ಕೆಲಸ ಮಾಡುತ್ತಿದ್ದಾರೆ. ದೊಡ್ಡ ಮಟ್ಟದಲ್ಲಿ ಆಗುತ್ತಿದ್ದ ಅಪಾಯದಿಂದ ನಾವು ಪಾರಾಗಿದ್ದೇನೆ. ದೇವರೇ ನಮ್ಮನ್ನು ರಕ್ಷಿಸಿದ್ದು ಎಂದು ಮನೆಯ ಮಾಲೀಕ ಕೆ.ವೆಂಕಟರಮಣ ಶೆಣೈ ಹೇಳಿದರು.