– ಇತ್ತ 2ನೇ ಪತ್ನಿಯಿಂದಲೂ ಪೊರಕೆ ಸೇವೆ
ಪಾಟ್ನಾ: ಎರಡನೇ ಮದುವೆಯಾಗಿ ಮನೆಗೆ ಬಂದ ಗಂಡನಿಗೆ ಪತ್ನಿ ಚಪ್ಪಲಿಯಿಂದ ಥಳಿಸಿರುವ ಘಟನೆ ಬಿಹಾರದ ಲಖಿಸರಾಯ ಪೊಲೀಸ್ ಠಾಣಾ ವ್ಯಾಪ್ತಿಯ ಅಮರಪುರ ಗ್ರಾಮದಲ್ಲಿ ನಡೆದಿದೆ.
ರೂಪೇಶ್ ಕುಮಾರ್ ಪತ್ನಿಯಿಂದರಿಂದ ಥಳಿತಕ್ಕೊಳಗಾದ ಗಂಡ. ಮೂರು ವರ್ಷಗಳ ಹಿಂದೆ ರೂಪೇಶ್ ಗೆ ಮದುವೆಯಾಗಿದ್ದು, ಒಂದು ಹೆಣ್ಣು ಮಗು ಸಹ ಇದೆ. ಕುಟುಂಬಸ್ಥರಿಗೆ ಯಾರಿಗೂ ತಿಳಿಸದೇ ಎರಡನೇ ಮದುವೆ ಆಗಿದ್ದಾನೆ. ಮದುವೆ ಬಳಿಕ ಮೊದಲ ಪತ್ನಿಯ ಮನೆಗೆ ಎರಡನೇ ಹೆಂಡ್ತಿ ಜೊತೆ ಬಂದು ಸ್ವಾಗತ ಮಾಡು ಎಂದು ಆದೇಶಿಸಿದ್ದಾನೆ.
ಪತಿ ಮದುವೆಯಾದ ವಿಷಯವನ್ನ ತನ್ನ ಸೋದರರಿಗೆ ತಿಳಿಸಿದ ಮೊದಲ ಪತ್ನಿ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ. ಇತ್ತ ಹೊಸ ಕನಸುಗಳೊಂದಿಗೆ ರೂಪೇಶ್ ಜೊತೆ ಸಾಂಸರಿಕ ಜೀವನಕ್ಕೆ ಕಾಲಿಟ್ಟಿದ್ದ ಯುವತಿಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಆಕೆಯೂ ಸಹ ಮನೆಯಲ್ಲಿದ್ದ ಪೊರಕೆಯಿಂದಲೇ ಗಂಡನಿಗೆ ಏಟು ನೀಡಿದ್ದಾಳೆ. ರೂಪೇಶ್ ನನ್ನು ಪತ್ನಿಯರು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಎರಡನೇ ಪತ್ನಿ ರೂಪೇಶ್ ಕಟ್ಟಿದ್ದ ಮಾಂಗಲ್ಯ ಕಿತ್ತು, ಸಿಂಧೂರ ಅಳಸಿ ಸೋದರರೊಂದಿಗೆ ಊರಿಗೆ ತೆರಳಿದ್ದಾಳೆ. ಕೊನೆಗೆ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆದಿದ್ದು, ಎರಡನೇ ಪತ್ನಿ ರೂಪೇಶ್ ನೊಂದಿಗೆ ಇರಲಾರೆ ಎಂದು ಹೇಳಿ ತನ್ನೂರಿಗೆ ಹೋಗಿದ್ದಾಳೆ. ಇತ್ತ ರೂಪೇಶ್ ಮೊದಲ ಪತ್ನಿಯ ಮನೆ ಸೇರಿಕೊಂಡಿದ್ದಾನೆ.