ನವದೆಹಲಿ: ಪ್ರದಕ್ಷಿಣೆ ವೇಳೆ ತಪ್ಪು ಮಾರ್ಗವಾಗಿ ಹೊರಟಿದ್ದ ಪತಿಯನ್ನ ವಧು ಎಚ್ಚರಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೀಡಿಯೋ ನೋಡಿದ ನೆಟ್ಟಿಗರು ನಕ್ಕು ನಕ್ಕು ಶೇರ್ ಮಾಡಿಕೊಂಡು, ಮದ್ವೆಯಾದ ಗಳಿಗೆಯಿಂದಲೇ ಪತಿಯನ್ನ ಸರಿ ಮಾರ್ಗದಲ್ಲಿರುವ ಪತ್ನಿ ಎಂದು ಬರೆದುಕೊಳ್ಳುತ್ತಿದ್ದಾರೆ.
ಗುರುದ್ವಾರದಲ್ಲಿ ತಲೆ ಬಾಗಿಸಿ ನಮಸ್ಕರಿಸಿ ಎದ್ದು ಜೋಡಿ ನಿಂತಿದ್ದರು. ಈ ವೇಳೆ ಗುರುದ್ವಾರದಲ್ಲಿ ಸುತ್ತು ತೆಗೆದುಕೊಳ್ಳುವಾಗ ವರ ವಿರುದ್ಧ ದಿಕ್ಕಿನಿಂದ ಹೊರಟಿದ್ದನು. ಎಚ್ಚೆತ್ತ ವಧು ವರನ ಕುರ್ತಾ ಎಳೆದು ಈ ಕಡೆಯಿಂದ ಸುತ್ತು ಆರಂಭಿಸಬೇಕೆಂದು ಸನ್ನೆ ಮಾಡಿದ್ದಾಳೆ. ಈ ವೀಡಿಯೋ ಮಾಡುತ್ತಿದ್ದ ಕೆಲವರು ಜೋರಾಗಿ ನಕ್ಕಿದ್ದಾರೆ.
ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಇಂದು ಬೆಳಗ್ಗೆ ಈ ವೀಡಿಯೋ ಅಪ್ಲೋಡ್ ಮಾಡಿಕೊಂಡಿದ್ದು, ನಿಜವಾದ ಜೀವನ ಸಂಗಾತಿ. ನಿಮ್ಮ ಸದಾ ಸರಿಯಾದ ಮಾರ್ಗ ತೋರಿಸುತ್ತಿರಲಿ ಎಂದು ಬರೆದುಕೊಂಡಿದ್ದರು. ವೀಡಿಯೋ 27 ಸಾವಿರಕ್ಕೂ ಅಧಿಕ ವ್ಯೂವ್ ಪಡೆದುಕೊಂಡಿದ್ದು, 3.7 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.
सच्ची जीवनसाथी आपको हमेशा सही राह दिखाती हैं ????????.
(Wait till 14th Second) pic.twitter.com/yRJxM2jT4i
— Dipanshu Kabra (@ipskabra) December 14, 2020