ರಾಯಚೂರು: ಸಂಪೂರ್ಣ ಲಾಕ್‍ಡೌನ್ ಮಧ್ಯೆ ಇಂದು ರಾಯಚೂರಿನಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಈ ವೇಳೆ ಮದ್ಯ ಖರೀದಿಗಾಗಿ ನೂಕುನುಗ್ಗಲು ಆಗಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ಇದನ್ನೂ ಓದಿ: ಸಿದ್ದರಾಮಯ್ಯ, ಡಿಕೆಶಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ
Advertisement
ಜಿಲ್ಲೆಯಲ್ಲಿ ಪರವಾನಿಗೆ ಹೊಂದಿರುವ 140 ಬಾರ್ ಮಾಲೀಕರಿಗೂ ಲಾಕ್‍ಡೌನ್ ಸಡಿಲಿಕೆ ಇದ್ದಾಗಲೇ ಮದ್ಯ ಹಂಚಿಕೆ ಮಾಡಲಾಗುತ್ತಿದೆ. ಹೀಗಾಗಿ ಬಾರ್ ಮಾಲೀಕರು ಮದ್ಯ ಖರೀದಿಗೆ ಗೋದಾಮಿನಲ್ಲಿ ನೂಕು ನುಗ್ಗಲು ಮಾಡಿದ್ದಾರೆ. ಅಧಿಕಾರಿಗಳ ತಾರತಮ್ಯದಿಂದ ನಿಗದಿತ ಪ್ರಮಾಣದಲ್ಲಿ ಮದ್ಯ ಸಿಗದಿರುವ ಹಿನ್ನೆಲೆ ಮದ್ಯದಂಗಡಿ ಮಾಲೀಕರು ಸಹ ಕ್ಯೂ ನಿಂತು ಮದ್ಯಖರೀದಿಸಬೇಕಾಗಿದೆ. ಇದನ್ನೂ ಓದಿ: ಕೊರೊನಾ ಲಸಿಕೆ ಇಂಜೆಕ್ಷನ್‍ಗೆ ಹೆದರಿಕೊಂಡ್ರಾ ನಿರ್ದೇಶಕ ಪ್ರಶಾಂತ್ ನೀಲ್?
Advertisement
Advertisement
ಈಗಾಗಲೇ ಮದ್ಯದಂಗಡಿ ಮಾಲೀಕರು ಮೇಲಾಧಿಕಾರಿಗಳಿಗೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಹೀಗಾಗಿ ನೂಕುನುಗ್ಗಲು ಮಾಡಿಕೊಂಡು ಮದ್ಯ ಖರೀದಿಸುತ್ತಾರೆ. ಮದ್ಯ ಖರೀದಿ ಮಾಡಲು ದೊಡ್ಡ ದೊಡ್ಡ ಚೀಲಗಳನ್ನ ಹಿಡಿದು ಬೆಳಿಗ್ಗೆಯಿಂದಲೇ ಸಾಲಿನಲ್ಲಿ ನಿಂತಿರುತ್ತಾರೆ. ಹೆಚ್ಚು ಪ್ರಮಾಣದ ಮದ್ಯ ಖರೀದಿಸಿ ದುಬಾರಿ ಬೆಲೆಗೆ ಮಾರಾಟ ಮಾಡುವ ಜನರಿದ್ದಾರೆ. ಅಧಿಕಾರಿಗಳು ಏನೇ ಕ್ರಮ ಕೈಗೊಂಡರೂ ಲಾಕ್‍ಡೌನ್ ಸಮಯದಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಲು ಸಾಧ್ಯವಾಗಿಲ್ಲ.
Advertisement