Connect with us

ಸಿದ್ದರಾಮಯ್ಯ, ಡಿಕೆಶಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

ಸಿದ್ದರಾಮಯ್ಯ, ಡಿಕೆಶಿ ಕುತಂತ್ರ ರಾಜಕಾರಣ ಮಾಡ್ತಿದ್ದಾರೆ: ಕೆ.ಎಸ್.ಈಶ್ವರಪ್ಪ

ರಾಯಚೂರು: ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ದ್ವಂದ್ವ ಹೇಳಿಕೆ ನೀಡುವ ಮೂಲಕ ಕುತಂತ್ರ ರಾಜಕಾರಣ ಮಾಡುತ್ತಿದ್ದಾರೆ. ಇಬ್ಬರು ಒಂದೊಂದು ಹೇಳಿಕೆ ನೀಡುವ ಮೂಲಕ ಡಬಲ್ ಗೇಮ್ ಆಡುತ್ತಿದ್ದಾರೆ. ಇವರ ಆಟ ಬಿಜೆಪಿಯ ಮುಂದೆ ನಡೆಯುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ರಾಯಚೂರಿನಲ್ಲಿ ಹೇಳಿದ್ದಾರೆ.

ಕೋವಿಡ್ ನಿಯಂತ್ರಣ ಹಾಗೂ ಇಲಾಖೆ ಪ್ರಗತಿ ಪರಿಶೀಲನ ಸಭೆಗಾಗಿ ಜಿಲ್ಲೆಗೆ ಆಗಮಿಸಿದ್ದ ಸಚಿವ ಈಶ್ವರಪ್ಪ ಸಿಎಂ ಬದಲಾವಣೆ ವಿಚಾರದಲ್ಲಿ ಯಡಿಯೂರಪ್ಪ ಈಗಾಗಲೇ ಸ್ಪಷ್ಟ ಉತ್ತರ ನೀಡಿದ್ದಾರೆ. ಕೇಂದ್ರದ ನಾಯಕರು ಕೇಳಿದರೆ ರಾಜೀನಾಮೆ ಕೊಡಲು ಸಿದ್ದ ಅಂತ ಹೇಳುವ ಮೂಲಕ ಶಿಸ್ತಿನ ಪಕ್ಷದ ಶಿಸ್ತಿನ ನಾಯಕ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬಿಜೆಪಿಯಲ್ಲಿ ಬಿಎಸ್‍ವೈ ಬಿಟ್ಟರೆ ಸಿಎಂ ಆಗಲು ಬೇರೆ ನಾಯಕರಿಲ್ಲ ಎನ್ನುವ ಕಾಂಗ್ರೆಸ್ ಹೇಳಿಕೆಗಳೇ ಈಗ ಬದಲಾಗಿವೆ. ಬಿಜೆಪಿಯಲ್ಲಿ ಬಹಳಷ್ಟು ಜನರಿಗೆ ಸಿಎಂ ಆಗುವ ಶಕ್ತಿ ಇದೆ. ಡಿಕೆಶಿ ಡಬಲ್ ಗೇಮ್ ಆಡುವುದು ಬೇಡ ಎಂದು ಎಚ್ಚರಿಸಿದ್ದಾರೆ. ಇದನ್ನು ಓದಿ: ಮಾನ, ಮರ್ಯಾದೆ ಇರುವ ಎಂಪಿ ಹೀಗೆ ಮಾಡಲ್ಲ, ಐಎಎಸ್ ಅಧಿಕಾರಿಗಳ ಕಿತ್ತಾಟದ ಬಗ್ಗೆ ತನಿಖೆ ಆಗಬೇಕು: ಸಿದ್ದರಾಮಯ್ಯ

ಯಡಿಯೂರಪ್ಪನವರ ಹೇಳಿಕೆಗಳು ಡಿಕೆಶಿ ಮತ್ತು ಸಿದ್ದರಾಮಯ್ಯಗೆ ಉತ್ತರ ಕೊಟ್ಟಾಗಿದೆ. ಇಡೀ ರಾಜ್ಯದ ಕಾರ್ಯಕರ್ತರಿಗೆ ಬಿಎಸ್‍ವೈ ಹೇಳಿಕೆ ತೃಪ್ತಿ ಆಗಿದೆ. ಇದನ್ನ ಕಾಂಗ್ರೆಸ್ ನವರು ಗಮನಿಸಬೇಕು ಎಂದರು. ಶಾಸಕರ ಸಹಿ ಸಂಗ್ರಹ ವಿಚಾರ ಬಗ್ಗೆ ಅಂತೆ-ಕಂತೆ ಶುರುವಾಗಿದೆ. ಸಹಿ ಬಗ್ಗೆ ನಾನು ನೋಡಿಲ್ಲ, ಹಿಂದೆ ಯಾವುದಕ್ಕೋ ಮಾಡಿದ ಸಹಿ ಸಂಗ್ರಹವಾಗಿದೆ. ಸಹಿ ಸಂಗ್ರಹ ಬಿಜೆಪಿಯ ಪದ್ಧತಿ ಅಲ್ಲ, ಯಾರು ಪರ-ವಿರುದ್ಧ ಸಹಿ ಸಂಗ್ರಹ ಮಾಡಕೂಡದು. ಕಾಂಗ್ರೆಸ್‍ನ ಡಿಕೆಶಿ ಮತ್ತು ಸಿದ್ದರಾಮಯ್ಯ ಕುತಂತ್ರ ರಾಜಕಾರಣ ನಿಲ್ಲಿಸಬೇಕು ಎಂದು ಹೇಳಿದ್ದಾರೆ.

ಮೋದಿ ವ್ಯಾಕ್ಸಿನ್ ಪಡೆಯಬೇಡಿ ಅಂತ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಿದರು. ಯುಟಿ ಖಾದರ್ ಲಸಿಕೆ ಹಾಕಿಸಿಕೊಂಡರೆ ಪುರಷತ್ವ ಹೋಗುತ್ತೆ ಎಂದರು. ವ್ಯಾಕ್ಸಿನ್ ಹಾಕಿಸಿಕೊಳ್ಳಬೇಡಿ ಎಂದಿದ್ದ ಕಾಂಗ್ರೆಸ್ ನಾಯಕರು ಇವತ್ತು ಕ್ಯೂ ನಿಂತಿದ್ದಾರೆ ಅಂತ ಕಿಡಿಕಾರಿದ್ದಾರೆ. ಇದನ್ನು ಓದಿ: ಬಿಎಂಟಿಸಿ ಪ್ರಯಾಣ ದರ ಏರಿಕೆ ಸದ್ಯಕ್ಕಿಲ್ಲ: ಸವದಿ

ಗ್ರಾಮೀಣ ಭಾಗದಲ್ಲಿ ಟಾಸ್ಕ್ ಫೋರ್ಸ್ ರಚಿಸಿ ಸೋಂಕಿತರ ಸಂಖ್ಯೆ ಕಡಿಮೆ ಮಾಡಿದ್ದೇವೆ. ಗ್ರಾಮೀಣ ಭಾಗದ ಜನ ಸ್ಪಂದನೆ ನೀಡಿದ್ದರಿಂದ ಹಳ್ಳಿಗಳಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

Advertisement
Advertisement