ಯಾದಗಿರಿ: ಮದುವೆಗೆ ಅಂತ ಸಿಟಿಗೆ ಬಂದ ಬೀಗರು ಈಗ ಪೊಲೀಸರ ಅಥಿತಿಗಳಾಗಿದ್ದಾರೆ. ಸದ್ಯ ಯಾದಗಿರಿ ಸಂಪೂರ್ಣ ಲಾಕ್‍ಡೌನ್ ಇದ್ದು, ಜನರ ಗುಂಪು ಪ್ರಯಾಣಕ್ಕೆ ನಿಷೇಧವಿದೆ. ಅಲ್ಲದೆ ಮದುವೆಗಳಿ 50 ಜನರಿಗೆ ಮಾತ್ರ ಅವಕಾಶವಿದೆ. ಹೀಗಿದ್ದರೂ ತೆರೆದ ವಾಹನದಲ್ಲಿ ಕುರಿ ಮಂದೆಗಳಂತೆ ಮದುವೆಗೆ ಶಹಪುರ ತಾಲೂಕಿನ ದೋರನಹಳ್ಳಿ ಗ್ರಾಮಸ್ಥರು ಹೊರಟಿದ್ದರು.
ಯಾದಗಿರಿಗೆ ಎಂಟ್ರಿ ಕೊಡುವಾಗ ಪೊಲೀಸರ ಮತ್ತು ತಹಶೀಲ್ದಾರರ ಕೈಯಲ್ಲಿ ತಗಲಾಕೊಂಡಿದ್ದಾರೆ. ಜನರ ಈ ನಿರ್ಲಕ್ಷ್ಯದಿಂದ ಕೆಂಡಾಮಂಡಲವಾದ ಅಧಿಕಾರಿಗಳು ಜನರ ಸಮೇತ ವಾಹನವನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋದರು.
ಇಷ್ಟಕ್ಕೆ ಸುಮ್ಮನಾಗದ ಜನ ಠಾಣೆಯ ಬಳಿ ವಾಹನ ನಿಲ್ಲುತ್ತಿದ್ದಂತೆ ವಾಹನದಿಂದ ಜಂಪ್ ಮಾಡಿ ಪ್ರಾಣಾಪಾಯ ಲೆಕ್ಕಿಸದೆ ಮುಳ್ಳು ಬೇಲಿ ಹಾರಿ ತಪ್ಪಿಸಿಕೊಂಡಿದ್ದಾರೆ. ಸದ್ಯ ವಾಹನವನ್ನು ಜಪ್ತಿ ಮಾಡಿರುವ ಪೊಲೀಸರು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.