ಬೆಂಗಳೂರು: ಸ್ಯಾಂಡಲ್‍ವುಡ್ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ನಿಧನಕ್ಕೆ ಸ್ಯಾಂಡಲ್‍ವುಡ್ ತಾರೆಯರು ಕಂಬನಿ ಮೀಡಿದು ಸೋಶಿಯಲ್ ಮೀಡಿಯಾದಲ್ಲಿ ಸಂತಾಪವನ್ನೂ ಸೂಚಿಸುತ್ತಿದ್ದಾರೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಇನ್ನಿಲ್ಲ
Advertisement
ಮತ್ತೆ ಹುಟ್ಟಿ ಬಾ ಗೆಳಯ ಎಂದು ನಟ, ನಿರ್ದೇಶಕ ರಿಶಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ನಿಮ್ಮ ನಿಧನವು ದೊಡ್ಡ ಆಘಾತವನ್ನು ತಂದುಬಿಟ್ಟಿದೆ. ಇದು ನಿರಾಶಾದಾಯಕವಾಗಿದೆ. ಕುಟುಂಬಕ್ಕೆ ಧರ್ಯ ಕೊಡಲಿ ಎಂದು ಸಂತಾಪ ಸೂಚಿಸಿ ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
Advertisement
THIS IS UNFAIR
ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ ,ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ???? ???? @SanchariVijay pic.twitter.com/asVYgzD0Pj
— Amulya (@nimmaamulya) June 14, 2021
Advertisement
ನೀವು ಮಾಡಿರುವ ಕೆಲಸವನ್ನು ಎಂದು ಮರೆಯಲು ಸಾಧ್ಯವಿಲ್ಲ. ನಾನು ನಿಮ್ಮ ಜೊತೆಗೆ ಕೆಲಸ ಮಾಡುವ ಅದೃಷ್ಟವನ್ನು ಪಡೆದಿದ್ದೆ. ಅತ್ಯಂತ ಅದ್ಭುತ ನಟರಲ್ಲಿ ನೀನು ಒಬ್ಬನು ಮತ್ತು ನಾನು ನಿನ್ನನ್ನು ಎಷ್ಟು ಮಿಸ್ ಮಾಕೊಳ್ಳುತ್ತಿದ್ದೇನು ಎನ್ನುವುದು ದೇವರಿಗೆ ತಿಳಿದಿದೆ. ಬಹಳಷ್ಟು ಪ್ರೀತಿ ಮತ್ತು ಅಪ್ಪುಗೆಗಳು ಸಂಚಾರಿವಿಜಯ್. ನಿಮ್ಮಂತಹ ಮನುಷ್ಯ ಈ ಮನುಷ್ಯರು ಜಗತ್ತಿನಲ್ಲಿ ಅಮರ ಎಂದು ಬರೆದುಕೊಂಡು ನಟಿ ಶ್ರುತಿ ಹರಿಹರನ್ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಲಾಕ್‍ಡೌನ್ ಮೊದಲು ಮಾತನಾಡಿದ್ದೆ, ಈಗ ಆಘಾತಗೊಂಡಿದ್ದೇನೆ: ಸುದೀಪ್
Advertisement
Your sudden demise has left a huge void, this is disheartening! Rest in peace Vijay. My deepest condolences to the family. pic.twitter.com/mobjpKyQ0c
— Rakshit Shetty (@rakshitshetty) June 14, 2021
ಇದು ಸರಿಯಲ್ಲ. ಅನಿರೀಕ್ಷಿತ ಅಪಘಾತದಿಂದ ಅಗಲಿದ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರು ನಿಧನರಾಗಿದ್ದಾರೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸ್ಯಾಂಡಲ್‍ವುಡ್ ನಟಿ ಅಮೂಲ್ಯ ಟ್ವೀಟ್ ಮಾಡಿದ್ದಾರೆ.
Gone too soon Sanchari Vijay, RIP.
— Puneeth Rajkumar (@PuneethRajkumar) June 14, 2021
ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
View this post on Instagram
ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಸಂಚಾರಿ ವಿಜಯ್ ಗೆ ಚಿಕಿತ್ಸೆ ಶುರುವಾಗಿ 36 ಗಂಟೆಗೆ ಆಗಿದೆ. ಆಸ್ಪತ್ರೆಗೆ ಬಂದಾಗ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಬಂದ ಕೆಲವೇ ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಸದ್ಯ ಅವರ ಬ್ರೈನ್ ಫೇಲ್ಯೂರ್ ಆಗಿದೆ. 36 ಗಂಟೆಯಾದ್ರೂ ವಿಜಯ್ ಸ್ಪಂದಿಸ್ತಿಲ್ಲ. ಎಷ್ಟೇ ಚಿಕಿತ್ಸೆ ಕೊಟ್ರು ಸ್ಪಂದಿಸ್ತಿಲ್ಲ. ಮೆದುಳು ಚಿಕಿತ್ಸೆಗೆ ಸ್ಪಂದಿಸ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ. ವಿಜಯ್ ಉಸಿರಾಟ ಕೂಡ ಕ್ಷೀಣವಾಗಿದೆ. ಚಿಕಿತ್ಸೆ ಕೊಟ್ರೂ ರಿಕವರಿ ಕಷ್ಟ ಎಂದಿದ್ದರು.