ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿಮಾಡಿದ್ದ ವೀಕೆಂಡ್ ಲಾಕ್‍ಡೌನ್ ಇಂದು ಬೆಳಗ್ಗೆ 6 ಗಂಟೆಗೆ ಅಂತ್ಯವಾಗಿದೆ. ಬೆಳಗ್ಗೆ 6ರಿಂದ ಯಥಾಸ್ಥಿತಿಗೆ ಅಂದ್ರೆ ಹಾಫ್ ಲಾಕ್‍ಡೌನ್‍ಗೆ ರಾಜ್ಯ ಮರಳಿದೆ. ರಾಜ್ಯಾದ್ಯಂತ ಕೆಎಸ್‍ಆರ್ ಟಿಸಿ ಬಸ್ ಸಂಚಾರ ಆರಂಭಗೊಂಡಿದೆ. ಬೆಂಗಳೂರಲ್ಲಿ ಬಿಎಂಟಿಸಿ ಬಸ್ ಸಂಚಾರ, ಮೆಟ್ರೋ ಸಂಚಾರ ಎಂದಿನಂತೆ ಆರಂಭಗೊಂಡಿದೆ.
Advertisement
ಕೊರೋನಾ ಸೋಂಕಿನ ಚೈನ್ ಲಿಂಕ್ ಕಟ್ ಮಾಡಲು ಕೇವಲ ವೀಕೆಂಡ್ ಅಲ್ಲ, ವಾರ ಪೂರ್ತಿ ಲಾಕ್‍ಡೌನ್ ಮಾಡಲಾಗುತ್ತೆ ಎಂಬ ಸುದ್ದಿ ಹಬ್ಬಿದೆ. ಇದಕ್ಕೆ ಪೂರಕವಾಗಿ ಇಂದು ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ಕೂಡ ನಡೆಯಲಿದೆ. ಈ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ಅದರ ಹಿಂದಿನ ಎರಡು ದಿನ ಜಾರಿಯಾಗಿದ್ದ ಹಾಫ್ ಲಾಕ್‍ಡೌನ್‍ನಿಂದ ಆಗಿರುವ ಲಾಭ ನಷ್ಟಗಳೇನು ಎಂಬ ಬಗ್ಗೆ ತಜ್ಞರೊಂದಿಗೆ ಚರ್ಚೆ ನಡೆಸಿ ಮುಂದೆ ಏನು ಮಾಡಬೇಕೆಂಬ ಬಗ್ಗೆ ಸಿಎಂ ಯಡಿಯೂರಪ್ಪ ನಿರ್ಣಯ ತೆಗೆದುಕೊಳ್ಳುತ್ತಾರೆ ಎನ್ನಲಾಗಿದೆ. ದೆಹಲಿ ಮಾದರಿಯಲ್ಲಿ ಲಾಕ್‍ಡೌನ್ ಮಾಡಲಾಗುತ್ತಾ ಎಂಬ ಚರ್ಚೆಗಳು ನಡೆದಿವೆ.
Advertisement
Advertisement
ಕ್ಯಾಬಿನೆಟ್‍ನಲ್ಲಿ ಏನಾಗಬಹುದು?
ಕಳೆದ 4 ದಿನಗಳಿಂದ ಚೈನ್ ಲಿಂಕ್ ಕಟ್ ಆಗಿದ್ಯಾ? ಇಲ್ವಾ ಎಂಬ ವರದಿ ಪರಿಶೀಲನೆ ನಡೆಸಲಾಗುತ್ತದೆ. ವಾರಾಂತ್ಯದ ಕರ್ಫ್ಯೂನಲ್ಲೇ ಚೈನ್‍ಲಿಂಕ್ ಕಟ್ಟಾಗ್ತಿದೆ ಎಂದಿದ್ರೆ ಈಗಿನ ರೂಲ್ಸ್ ಮುಂದುವರಿಕೆಯಾಗುವ ಸಾಧ್ಯತೆಗಳಿವೆ. ವಾರಾಂತ್ಯದ ಕರ್ಫ್ಯೂ ಜೊತೆ ಇಡೀ ವಾರ ಲಾಕ್‍ಡೌನ್ ಬೇಕು ಎಂದರೇ, ಅದರ ಮೇಲೆ ಚರ್ಚೆ ನಡೆಯಬಹುದು.
Advertisement
ಲಾಕ್ ಅನಿವಾರ್ಯ ಎಂದಾದರೇ ಮಂಗಳವಾರದಿಂದ 10ರಿಂದ 12 ದಿನಗಳ ಕಾಲ ಬಿಗಿ ಕ್ರಮಕ್ಕೆ ಮುಂದಾಗಬಹುದು. ‘ಲಾಕ್’ಗೆ ಕ್ಯಾಬಿನೆಟ್ ಒಪ್ಪಿಗೆ ಸಿಕ್ಕರೆ ವೀಕೆಂಡ್ ಕರ್ಫ್ಯೂ ಮಾದರಿ ರೂಲ್ಸ್ ಮುಂದುವರಿಕೆ ಮಾಡಿ ಅಗತ್ಯ ವಸ್ತುಗಳ ಖರೀದಿಗೆ ವೀಕೆಂಡ್‍ನಂತೆಯೇ ಬೆಳಗ್ಗೆ 6ರಿಂದ 10ರ ಸಮಯ ನಿಗದಿಯಾಗುವ ಸಾಧ್ಯತೆಗಳಿವೆ.
ಬೆಂಗಳೂರಿನಿಂದ ಬೇರೆ ಜಿಲ್ಲೆಗಳಿಗೆ ಓಡಾಟಕ್ಕೂ ನಿರ್ಬಂಧ ಹಾಕಬಹುದು. ಬೆಂಗಳೂರು ಸೋಂಕು ಗ್ರಾಮೀಣ ಭಾಗಕ್ಕೆ ಹಬ್ಬುವುದನ್ನು ತಡೆಯಲು ಈ ನಿರ್ಬಂಧ ಸಾಧ್ಯತೆ ಇದೆ.18 ವರ್ಷ ಮೇಲ್ಪಟ್ಟ ಸರ್ವರಿಗೂ ಫ್ರೀ ವ್ಯಾಕ್ಸಿನ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.
ಸಚಿವರು ಹೇಳಿದ್ದೇನು?: ರಾಜ್ಯದಲ್ಲಿ ವೀಕೆಂಡ್ ಮಾತ್ರವಲ್ಲ. ಉಳಿದ ದಿನಗಳಲ್ಲಿಯೂ ಕರ್ಫ್ಯೂ ಹೇರಿಕೆ ಬಗ್ಗೆ ಚರ್ಚೆ ನಡೆದಿದೆ. ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುತ್ತೆ ಎಂದು ಹಿರಿಯ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಮೇ 4ರವರೆಗೆ ಕಠಿಣ ನಿಯಮ ಇರಲಿದೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ ಎಂದಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತ್ರ, ವಾರಪೂರ್ತಿ ವೀಕೆಂಡ್ ಮಾದರಿಯ ಕರ್ಫ್ಯೂ ಮುಂದುವರೆಸುವ ಚಿಂತನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ. ಸಿಎಂ ಸಭೆಯಲ್ಲಿ ವೀಕೆಂಡ್ ಕರ್ಫ್ಯೂ ವಿಸ್ತರಣೆ ಬಗ್ಗೆ ಚರ್ಚೆಯಾಗಿಲ್ಲ. ಯಾವುದೇ ಊಹಾಪೋಹ ಬೇಡ. ಸದ್ಯಕ್ಕೆ ಈಗಿರುವ ಮಾರ್ಗಸೂಚಿಗಳೇ ಮುಂದುವರಿಯಲಿವೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ನಂಗೇನು ಗೊತ್ತಿಲ್ಲ.ಟ ವಾರಪೂರ್ತಿ ಕರ್ಫ್ಯೂ ವಿಧಿಸೋದನ್ನು ಅಥ್ವಾ ಬಿಡೋದನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಕೇಂದ್ರ ಮಂತ್ರಿ ಡಿವಿ ಸದಾನಂದಗೌಡ ತಿಳಿಸಿದ್ದಾರೆ.