ಉಡುಪಿ: ಜಿಲ್ಲೆಯಲ್ಲಿ ಸದ್ಯಕ್ಕೆ ಲಾಕ್‍ಡೌನ್ ಅಗತ್ಯವಿಲ್ಲ. ಜನಜೀವನ ಈಗಷ್ಟೇ ಚೇತರಿಸಿಕೊಳ್ಳುತ್ತಿದೆ. ಮತ್ತೆ ಲಾಕ್‍ಡೌನ್ ಮಾಡಿದರೆ ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬೀಳಲಿದೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದರು.
ಜಿಲ್ಲೆಯ ಒಳಗಡೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಕಷ್ಟವಲ್ಲ. ಹೊರ ಜಿಲ್ಲೆಯಿಂದ ಬರುತ್ತಿರುವ ಸೋಂಕಿತರೇ ಜಿಲ್ಲೆಗೆ ಬಹಳ ದೊಡ್ಡ ಸವಾಲಾಗಿದ್ದಾರೆ. ಜಿಲ್ಲೆಯ ಗಡಿ ಭಾಗಗಳನ್ನು ಸೀಲ್‍ಡೌನ್ ಮಾಡಲು ಸಲಹೆ ನೀಡಿದ್ದೇನೆ. ಹೊರ ಜಿಲ್ಲೆಯಿಂದ ಬರುತ್ತಿರುವವರನ್ನು ಸ್ಟ್ರಿಕ್ಟ್ ಹೋಂ ಕ್ವಾರಂಟೈನ್ ಮಾಡಬೇಕು. ಆಗ ಸೋಂಕು ಹರಡುವುದು ನಿಯಂತ್ರಣಕ್ಕೆ ಬರುತ್ತದೆ. ನಾನು ನನ್ನ ಸಲಹೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದೇನೆ ಎಂದು ಹೇಳಿದರು.
ಉಳಿದ ನಾಲ್ವರು ಶಾಸಕರು, ಅಧಿಕಾರಿಗಳು ಜಿಲ್ಲಾ ಪಂಚಾಯತ್ ಅಧ್ಯಕ್ಷರು ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಿದ್ದೇವೆ. ಜಿಲ್ಲೆಯಲ್ಲಿ ಸದ್ಯ ಚಾಲ್ತಿಯಲ್ಲಿ 300 ಪ್ರಕರಣ ಇದೆ. ಅವರೆಲ್ಲ ಗುಣಮುಖ ಆಗುತ್ತಿದ್ದಾರೆ. ಗಡಿ ಸೀಲ್ ಆದ್ರೆ ಒಂದು ಹಂತಕ್ಕೆ ಕೊರೊನಾ ಹತೋಟಿ ಸಾಧ್ಯ ಎಂದರು.