ನವದೆಹಲಿ: 2ಜಿ, 3ಜಿ ಅವಧಿಯಲ್ಲಿ ದೇಶದಲ್ಲಿ ಮನೆ ಮಾತಾಗಿದ್ದ ಮೈಕ್ರೋಮ್ಯಾಕ್ಸ್ ಫೋನ್‌ಗಳು ಈಗ ಮತ್ತೆ ಮಾರುಕಟ್ಟೆಗೆ ಬರಲಿದೆ.
ಹೌದು. ಸದ್ಯ ಮಾರುಕಟ್ಟೆಯಲ್ಲಿ ಚೀನಿ ಕಂಪನಿಗಳ ಫೋನುಗಳದ್ದೇ ಅಬ್ಬರ. ಆದರೆ ಈಗ ಆತ್ಮನಿರ್ಭರ್ ಭಾರತ್ ಅಡಿ ಮೈಕ್ರೋಮ್ಯಾಕ್ಸ್ ಫೋನ್‌ಗಳು ಮಾರುಕಟ್ಟೆಗೆ ಎಂಟ್ರಿಕೊಡಲಿದೆ.
Advertisement
ತನ್ನ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ‘Back Soon’ ಎಂದು ಮೈಕ್ರೋಮ್ಯಾಕ್ಸ್ ಬರೆದಿದೆ. ಕಂಪನಿಯ ಸಹ ಸಂಸ್ಥಾಪಕ ರಾಹುಲ್ ಶರ್ಮಾ ಭಾರತ ಚೀನಾ ನಡುವಿನ ಉದ್ವಿಘ್ನ ಪರಿಸ್ಥಿತಿ ಸಮಯದಲ್ಲಿ ಮತ್ತೆ ಮಾರುಕಟ್ಟೆಗೆ ಫೋನ್ ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.
Advertisement
We're #INForIndia with #INMobiles! What about you? #IndiaKeLiye #BigAnnouncement #MicromaxIsBack #AatmanirbharBharat pic.twitter.com/eridOF5MdQ
— IN by Micromax – IN 2c (@Micromax__India) October 16, 2020
Advertisement
2019ರಲ್ಲಿ iOne ನೋಟ್ ಹೆಸರಿನಲ್ಲಿ ಕಂಪನಿ ಫೋನ್ ಬಿಡುಗಡೆ ಮಾಡಿತ್ತು. ಈಗ ಮತ್ತಷ್ಟು ಫೋನ್‌ಗಳನ್ನು ಆತ್ಮನಿರ್ಭರ ಭಾರತ ಯೋಜನೆ ಅಡಿ ತಯಾರಿಸಿ ಕ್ಸಿಯೋಮಿ, ರಿಯಲ್‌ಮೀ, ಒಪ್ಪೋ, ವಿವೋ ಕಂಪನಿಗಳಿಗೆ ಸ್ಪರ್ಧೆ ನೀಡಲು ಮುಂದಾಗಿದೆ.
Advertisement
Hello everyone, yeh hai meri aur micromax ki ek choti si kahaani. We are ready to comeback, India ke liye. Are you IN for India? #MicromaxIsBack #AatmaNirbharBharat #INMobiles https://t.co/8PvVf4rMnv
— Rahul Sharma (@rahulsharma) October 16, 2020
ಭಾರತದ ಕಂಪನಿಗಳು ಸೋತಿದ್ದು ಎಲ್ಲಿ?
ಭಾರತದಲ್ಲಿ 3ಜಿ ಜೊತೆಗೆ ಆಂಡ್ರಾಯ್ಡ್ ನಿಧಾನವಾಗಿ ಕ್ಲಿಕ್ ಆಗುತ್ತಿದ್ದಂತೆ ಡ್ಯುಯಲ್ ಸಿಮ್ ಫೋನ್‌ಗಳ ಬೇಡಿಕೆ ಜಾಸ್ತಿ ಆಗತೊಡಗಿತು. 3ಜಿ ಫೋನ್‌ಗಳು ಜನಪ್ರಿಯವಾಗುತ್ತಿದಂತೆ ಕ್ಯಾಮೆರಾ, ಸ್ಕ್ರೀನ್, ಬ್ಯಾಟರಿ, ಪ್ರೊಸೆಸರ್‌ಗಳ ಲೆಕ್ಕಾಚಾರ ಹಾಕಿ ಗ್ರಾಹಕರು ಫೋನ್ ಖರೀದಿಸಿಲು ಆರಂಭಿಸಿದರು. ಗ್ರಾಹಕರು ಈ ವಿಚಾರದ ಬಗ್ಗೆ ಗಮನ ನೀಡುತ್ತಿದ್ದಂತೆ ಭಾರತದ ಕಂಪನಿಗಳಿಗೆ ನಿಧಾನವಾಗಿ ಪೆಟ್ಟು ಬೀಳಲು ಆರಂಭವಾಯಿತು.
ಭಾರತದ ಕಂಪನಿಗಳ ಗುಣ ವೈಶಿಷ್ಟ್ಯವೇ ಸರಿ ಇರಲಿಲ್ಲ. 5.5 ಇಂಚಿನ ಎಚ್‌ಡಿ ಸ್ಕ್ರೀನ್ ಕೊಟ್ಟರೆ ಬ್ಯಾಟರಿ ಜಾಸ್ತಿ ಕೊಡಬೇಕು. ಆದರೆ 2,800 ಎಎಂಎಚ್ ಬ್ಯಾಟರಿಯಲ್ಲಿ ಬಿಡುಗಡೆ ಆದರೆ ಏನು ಲಾಭ? ಭಾರತದಲ್ಲಿ ಮೊಬೈಲ್ ಮೂಲಕ ಫಿಲ್ಮ್ ನೋಡುವವರ ಸಂಖ್ಯೆ ಜಾಸ್ತಿ. ಇದು ಚೈನಾದ ಟೆಕ್ ಪರಿಣಿತರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ಬ್ಯಾಟರಿ ಜಾಸ್ತಿ ಇರುವ ಫೋನ್ ಬಿಡುಗಡೆ ಮಾಡತೊಡಗಿದರು.
ಟೆಲಿಕಾಂ ಕಂಪನಿಗಳು 4ಜಿ ಸೇವೆ ವಿಸ್ತರಿಸುತ್ತಿದ್ದಂತೆ ದೇಶೀಯ ಫೋನ್ ಕಂಪನಿಗಳಿಗೆ ಬಲವಾದ ಹೊಡೆತ ಬೀಳಲು ಆರಂಭವಾಯಿತು. ಯಾಕೆಂದರೆ 3ಜಿ ತಂತ್ರಜ್ಞಾನಕ್ಕೆ ದೇಶಿ ಕಂಪನಿಗಳು ಕೋಟ್ಯಂತರ ರೂ.ಗಳನ್ನು ಹೂಡಿದ್ದವು. ದಿಢೀರ್ 4ಜಿ ಫೋನ್‌ಗಳನ್ನು ಮಾಡಲು ಸಾಧ್ಯವಾಗದ ಪರಿಣಾಮ ಮಾರುಕಟ್ಟೆಯಲ್ಲಿ ಹಿಂದಕ್ಕೆ ಹೋಯಿತು. ಪರಿಣಾಮ ಚೀನಾ ಕಂಪನಿಗಳ ಹಿಡಿತ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೆಚ್ಚಾಯಿತು.