ಬೆಂಗಳೂರು: ಪ್ರತಿದಿನ ತೈಲ ಬೆಲೆ ಏರಿಕೆಯಿಂದ ಕಂಗಾಲಾಗಿರುವ ವಾಹನ ಸವಾರರಿಗೆ ಇಂದು ಮತ್ತೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಕಾಣುವುದರ ಮೂಲಕ ಗ್ರಾಹಕರ ಜೇಬಿಗೆ ಕತ್ತರಿ ಪ್ರಯೋಗವಾಗಿದೆ.
Advertisement
ಇಂದು ಪೆಟ್ರೋಲ್ ದರ ಲೀಟರ್ ಗೆ 89.53 ರೂಪಾಯಿ ಆಗಿದೆ. ಬುಧವಾರ ಲೀಟರ್ ಗೆ 89.21 ರೂಪಾಯಿ ಇತ್ತು. ಈ ಮೂಲಕ ಬರೋಬ್ಬರಿ 23 ಪೈಸೆ ಹೆಚ್ಚಳ ಕಂಡಿದೆ. ಹಾಗೆ ಡೀಸೆಲ್ ದರವೂ ಮತ್ತೆ ಹೆಚ್ಚಳ ಕಂಡು ಬಂದಿದ್ದು ಡೀಸೆಲ್ ಲೀಟರ್ ಗೆ ಇಂದು 81.44 ರೂಪಾಯಿ ಆಗಿದೆ. ನಿನ್ನೆ ಡೀಸೆಲ್ 81.10 ರೂಪಾಯಿ ಇತ್ತು. ಇದೀಗ 34 ಪೈಸೆ ಡೀಸೆಲ್ ದರ ಹೆಚ್ಚಳವಾಗುದರೊಂದಿಗೆ ಮತ್ತಷ್ಟೂ ದುಬಾರಿಯಾಗಿದೆ ನಿತ್ಯ ಹೀಗೆ ಬೆಲೆ ಏರಿಕೆ ಕಾಣುತ್ತಿದರೆ ಇತ್ತ ವಾಹನ ಸವಾರರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಪೆಟ್ರೋಲ್ ಡೀಸೆಲ್‍ನೊಂದಿಗೆ ಅಡುಗೆ ಅನಿಲದ ಬೆಲೆಯಲ್ಲೂ ಏರಿಕೆ ಕಂಡಿದು ನಿನ್ನೆ 697 ರೂಪಾಯಿ ಇದ್ದ ಬೆಲೆ ಇಂದು 722 ರೂಪಾಯಿಯೊಂದಿಗೆ 25 ರೂಪಾಯಿ ಹೆಚ್ಚಳಗೊಂಡಿದೆ.
Advertisement
Advertisement
ಇನ್ನೂ ಪ್ರತಿ ದಿನ ಬೆಲೆ ಏರಿಕೆಯಿಂದಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿ ಜತೆ ದರದ ಬಗ್ಗೆ ಗ್ರಾಹಕರು ಅಸಮಾಧಾನ ಹೊರಹಾಕುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ನಾವು ವಾಹನ ಒಡಿಸುದಾದರೂ ಹೇಗೆ ಎಂಬ ಪ್ರಶ್ನೆ ಸವಾರರಲ್ಲಿ ಕಾಡ ತೊಡಗಿದೆ.
Advertisement