ನವದೆಹಲಿ: ಮತ್ತೆ ಗಡಿಯಲ್ಲಿ ಚೀನಾ ತನ್ನ ಪುಂಡಾಟವನ್ನು ಮುಂದುವರಿಸಿದ್ದು, ಅರುಣಾಚಲ ಪ್ರದೇಶದ ಗಡಿ ಭಾಗದಲ್ಲಿ ಮೂರು ಹೊಸ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿದೆ.
ಪಶ್ಚಿಮ ಅರುಣಾಚಲ ಪ್ರದೇಶದ ಭಾರತ, ಚೀನಾ ಮತ್ತು ಭೂತಾನ್ ನಡುವಿನ ತ್ರಿ-ಜಂಕ್ಷನ್‍ಗೆ ಸಮೀಪದಲ್ಲಿರುವ ಬಮ್ ಲಾ ಪಾಸ್‍ನಿಂದ ಸುಮಾರು 5 ಕಿಲೋಮೀಟರ್ ದೂರದಲ್ಲಿ ಚೀನಾ 3 ಗ್ರಾಮಗಳನ್ನು ನಿರ್ಮಿಸಿದೆ. ಈ ಪ್ರದೇಶದಲ್ಲಿ ಭಾರತ ಮತ್ತು ಚೀನಾಗೆ ಗಡಿ ವಿವಾದವಿದೆ. ಹೀಗಾಗಿ ಇಲ್ಲಿ ಗ್ರಾಮಗಳನ್ನು ನಿರ್ಮಾಣ ಮಾಡಿ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸುವ ಯೋಜನೆ ರೂಪಿಸಿದೆ.
Advertisement
Advertisement
ಈ ವಿಚಾರದ ಬಗ್ಗೆ ಮಾತನಾಡಿರುವ ಜಿಯೋಸ್ಟ್ರಾಟೆಜಿಸ್ಟ್ ಡಾ. ಬ್ರಹ್ಮ ಚೆಲ್ಲಾನಿ ಚೀನಾ ತನ್ನ ಪ್ರಾದೇಶಿಕ ಹಕ್ಕುಗಳನ್ನು ಬಲಪಡಿಸಲು ಮತ್ತು ಗಡಿಯಲ್ಲಿ ಒಳನುಸುಳುವಿಕೆಯನ್ನು ಹೆಚ್ಚಿಸಲು ಹಾನ್ ಚೈನೀಸ್ ಮತ್ತು ಟಿಬೆಟಿಯನ್ ಸದಸ್ಯರನ್ನು ಭಾರತದ ಗಡಿಯಲ್ಲಿ ನೆಲೆಸುವ ತಂತ್ರವನ್ನು ಬಳಸುತ್ತಿದೆ. ಈ ಹಿಂದೆಯೂ ಕೂಡ ದಕ್ಷಿಣ ಚೀನಾ ಸಮುದ್ರದಲ್ಲಿ ಮೀನುಗಾರರನ್ನು ಈ ತಂತ್ರಗಾರಿಕೆಗೆ ಬಳಸಿಕೊಂಡಿತ್ತು ಎಂದು ಹೇಳಿದ್ದಾರೆ.
Advertisement
Advertisement
ಸದ್ಯ ಲಭ್ಯವಾಗಿರುವ ಹೊಸ ಉಪಗ್ರಹ ಚಿತ್ರಗಳಲ್ಲಿ ಭೂತಾನ್ ಸಾರ್ವಭೌಮ ಭೂಪ್ರದೇಶದಲ್ಲಿ ಚೀನಾ ಗ್ರಾಮಗಳನ್ನು ನಿರ್ಮಾಣ ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ಈಗ ನಿರ್ಮಾಣವಾಗುತ್ತಿರುವ ಗ್ರಾಮಗಳು 2017ರಲ್ಲಿ ಭಾರತೀಯ ಮತ್ತು ಚೀನಾದ ನಡುವೆ ಗಲಾಟೆಯಾದ ಡೋಕ್ಲಾಮ್ ಸ್ಥಳದಿಂದ ಕೇವಲ ಏಳು ಕಿಲೋಮೀಟರ್ ದೂರದಲ್ಲಿದೆ. ಇದರ ಜೊತೆಗೆ ಪೂರ್ವ ಲಡಾಕ್‍ನಲ್ಲಿ ಇತ್ತೀಚೆಗೆ ಗಲಾಟೆಯಾದ ಸ್ಥಳದಲ್ಲೇ ಈ ಗ್ರಾಮಗಳನ್ನು ನಿರ್ಮಾಣ ಮಾಡಲಾಗುತ್ತಿದೆ.