ಮುಂಬೈ: ಮಣ್ಣನ್ನು ಬಳಕೆ ಮಾಡಿಕೊಂಡು ಸ್ನಾನ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬುದು ಅನೇಕರ ನಂಬಿಕೆ. ಈ ಬಗ್ಗೆ ಆಯುರ್ವೇದದಲ್ಲೂ ಕೂಡ ಹೇಳಲಾಗಿದೆ. ಐರಾವತ ಚಿತ್ರದ ನಟಿ ಊರ್ವಶಿ ರೌಟೆಲ್ಲಾ ಈಗ ಮಣ್ಣಿನಿಂದ ಸ್ನಾನ ಮಾಡಿದ ಫೋಟೋ ವೈರಲ್ ಆಗಿದೆ.
ಮಣ್ಣಿನ ಸ್ನಾನದಿಂದ ದೇಹದಲ್ಲಿರುವ ಕಲ್ಮಶಗಳೂ ನಾಶವಾಗುತ್ತವೆ. ಚರ್ಮವನ್ನು ಮೃದುಗೊಳ್ಳುತ್ತದೆ, ರಕ್ತ ಸಂಚಾರ ಸುಧಾರಿಸುತ್ತದೆ ಮತ್ತು ನೋವು ನಿವಾರಕವಾಗಿ ಇದು ಕೆಲಸ ಮಾಡುತ್ತದೆ ಎಂದು ಬರೆದುಕೊಂಡು ಮಣ್ಣಿನ ಸ್ನಾನ ಮಾಡಿರುವ ಫೋಟೋವನ್ನು ಊರ್ವಶಿ ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ತಿಪಟೂರಿನಿಂದ ಧರ್ಮಸ್ಥಳಕ್ಕೆ ಸೈಕಲ್ ಪ್ರವಾಸ ಹೋಗ್ತಿದ್ರು ಸಂಚಾರಿ ವಿಜಯ್
View this post on Instagram
ನಟಿಮಣಿಯರು ಚರ್ಮದ ಆರೋಗ್ಯ ಕಾಪಾಡಿಕೊಳ್ಳೋಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ, ಧೂಳು, ಬಿಸಿಲಿಗೆ ದೇಹ ತಾಗದಂತೆ ನೋಡಿಕೊಳ್ಳುತ್ತಾರೆ. ಆದರೆ, ಊವರ್ಶಿ ಮಣ್ಣಿನಲ್ಲೇ ಸ್ನಾನ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಊರ್ವಶಿ ಲಾಕ್‍ಡೌನ್ ವೇಳೆ ಫಿಟ್ನೆಸ್ ಕಾಯ್ದುಕೊಳ್ಳೋಕೆ ಏನೆಲ್ಲ ಮಾಡಬೇಕು ಎನ್ನುವುದನ್ನು ಅಭಿಮಾನಿಗಳಿಗೆ ಟಿಪ್ಸ್ ನೀಡುತ್ತಿದ್ದರು.
View this post on Instagram
2013ರಲ್ಲಿ ತೆರೆಗೆ ಬಂದ ಹಿಂದಿಯ ಸಿಂಗ್ ಸಾಬ್ ದಿ ಗ್ರೇಟ್ ಚಿತ್ರದಲ್ಲಿ ಊರ್ವಷಿ ನಟಿಸಿದ್ದರು. ಇದಾದ ನಂತರ 2015ರಲ್ಲಿ ತೆರೆಗೆ ಬಂದ ಕನ್ನಡದ ಐರಾವತ ಚಿತ್ರದಲ್ಲಿ ದರ್ಶನ್‍ಗೆ ಜೊತೆಯಾಗಿ ನಟಿಸಿದರು. ಎ.ಪಿ. ಅರ್ಜುನ್ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ನಂತರ ಅವರು ಕನ್ನಡಕ್ಕೆ ಮರಳಲೇ ಇಲ್ಲ. ಸದ್ಯ, ಬ್ಲ್ಯಾಕ್ ರೋಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದು ಹಿಂದಿ, ತೆಲುಗು ಎರಡೂ ಭಾಷೆಯಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಮತ್ತು ತಮಿಳಲ್ಲಿ ಒಟ್ಟಿಗೆ ಸಿದ್ಧವಾಗುತ್ತಿರುವ ಚಿತ್ರದಲ್ಲೂ ಊರ್ವಶಿ ನಟಿಸುತ್ತಿದ್ದಾರೆ.