ಮಡಿಕೇರಿ: ಕರ್ನಾಟಕ – ಕೇರಳ ಗಡಿಭಾಗದ ಕರಿಕೆಯಲ್ಲಿ ನೂತನ ತಪಾಸಣಾ ಕೇಂದ್ರ ನಿರ್ಮಿಸಲಾಗಿದೆ. ಮಡಿಕೇರಿ ತಾಲೂಕಿನ ಕರಿಕೆ ಗ್ರಾ.ಪಂ ಅಧ್ಯಕ್ಷೆ ಕುದುಪಜೆ ಕಲ್ಪನಾ ಜಗದೀಶ್ ಈ ಕೇಂದ್ರವನ್ನು ಉದ್ಘಾಟಿಸಿದರು.
ಕೇರಳ ರಾಜ್ಯದಲ್ಲಿ ಕೋವಿಡ್ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಗಡಿಯಲ್ಲಿ ಹೆಚ್ಚಿನ ನಿಗಾ ವಹಿಸಲು ಅಗತ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಆದೇಶದ ಹಿನ್ನೆಲೆಯಲ್ಲಿ ನೂತನ ಕೇಂದ್ರವನ್ನು ತೆರೆಯಲಾಗಿದೆ. ಈಗಾಗಲೇ ಗಡಿಭಾಗದಲ್ಲಿ ಸರಿಯಾದ ರೀತಿಯಲ್ಲಿ ಕೇರಳದಿಂದ ಬರುವವರು ಕಳ್ಳಾಟ ಮಾಡಿಕೊಂಡು ಕೊಡಗು ಜಿಲ್ಲೆಯನ್ನು ಪ್ರವೇಶ ಮಾಡುತ್ತಿದ್ರು.
Advertisement
Advertisement
ಕೊಡಗಿನಲ್ಲಿ ಇಂದಿಗೂ ಪಾಸಿಟಿವ್ ಪ್ರಮಾಣದಲ್ಲಿ ಏರಿಳಿತ ಕಾಣುತ್ತಿರುವ ಹಿನ್ನೆಲೆಯಲ್ಲಿ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ತಪಾಸಣಾ ಕೇಂದ್ರ ಮಾಡಬೇಕು ಎಂದು ವಿರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ ಅವರು ಈ ಹಿಂದೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಸೂಚನೆ ಬಂದ ಕೊಡಲೇ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಕೇರಳ ಕೊಡಗು ಹೊಂದಿಕೊಂಡು ಇರುವ ಕೊಡಗಿನ ಮೂರು ಚೆಕ್ ಪೋಸ್ಟ್‌ಗಳಲ್ಲಿ ತಪಾಸಣೆ ಕೇಂದ್ರ ಮಾಡಲು ನಿರ್ಮಿತಿ ಕೇಂದ್ರದವರಿಗೆ ಸೂಚನೆ ನೀಡಿದ್ದರು. ಇದನ್ನೂ ಓದಿ: ಪ್ರಿಯಾಂಕಾ ಕಸ ಗುಡಿಸೋಕೆ ಲಾಯಕ್ಕು- ವೀಡಿಯೋ ವೈರಲ್‍ಗೆ ಯೋಗಿ ಪ್ರತಿಕ್ರಿಯೆ
Advertisement
Advertisement
ಇದೀಗ ಕೊಡಗಿನ ಮುಕುಟ್ಟ, ಕರಿಕೆಹಾಗೂ ಕುಟ್ಟ ಭಾಗದಲ್ಲಿ ತಪಾಸಣಾ ಕೇಂದ್ರ ಕೊಠಡಿ ನಿರ್ಮಾಣವಾಗಿದೆ. ಕೊಡಗು ನಿರ್ಮಿತಿ ಕೇಂದ್ರ ತಪಾಸಣಾ ಕೇಂದ್ರವನ್ನು ನಿರ್ಮಿಸಿದೆ. ಕರಿಕೆ ಗ್ರಾಮದಲ್ಲಿ ನಿರ್ಮಾಣಗೊಂಡ ತಪಾಸಣಾ ಕೇಂದ್ರದ ಉದ್ಘಾಟನೆ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷ ಎನ್.ಬಾಲಚಂದ್ರ ನಾಯರ್, ಸದಸ್ಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ, ಆರಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಆರೋಗ್ಯ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಹಾಜರಿದ್ದರು.