ಬೆಳಗಾವಿ: ಮಗಳನ್ನ ಹುಡುಕಿಕೊಡಿ, ಆಕೆಯ ಮೊಬೈಲ್ ಸಹ ಸ್ವಿಚ್ಛ್ ಆಫ್ ಆಗಿದೆ. ಆಕೆ ಜೀವ ಆಪಾಯದಲ್ಲಿದೆ ಎಂದು ಸಿಡಿ ಪ್ರಕರಣದಲ್ಲಿ ಕೇಳಿ ಬಂದಿರುವ ಯುವತಿಯ ತಾಯಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.
ವೀಡಿಯೋ ಮೂಲಕ ಯುವತಿಯ ತಾಯಿ, ತಂದೆ ಮತ್ತು ಸೋದರರು ಪೊಲೀಸರ ಬಳಿ ಮನವಿ ಮಾಡಿದ್ದಾರೆ. ವೀಡಿಯೋದಲ್ಲಿ ಮಾತನಾಡಿರುವ ಯುವತಿ ತಾಯಿ, ಮೊಬೈಲ್ ನಲ್ಲಿ ಮಗಳದ್ದು ಎನ್ನಲಾದ ವೀಡಿಯೋ ನೋಡಿ ಕರೆ ಮಾಡಿದೆ. ನಿನ್ನ ಹಾಗೆ ಕಾಣುವ ಫೋಟೋ ಟಿವಿಯಲ್ಲಿ ಬರುತ್ತಿರುವ ವಿಷಯ ಹೇಳಿದೆ. ಆಕೆಗೆ ವೀಡಿಯೋ ಕಳಿಸಿ ಊರಿಗೆ ಬರುವಂತೆ ಹೇಳಿದೆ. ನನ್ನ ಜೀವಕ್ಕೆ ಅಪಾಯವಿದ್ದು, ಸುರಕ್ಷಿತ ಸ್ಥಳದಲ್ಲಿದ್ದೇನೆ ಎಂದು ಹೇಳಿ ಊರಿಗೆ ಬರಲು ಒಪ್ಪಲಿಲ್ಲ ಎಂದರು.
ಕಳೆದ ಮೂರು ವರ್ಷಗಳಿಂದ ಬೆಳಗಾವಿಯಲ್ಲಿ ವಾಸವಾಗಿದ್ದೇವೆ. ಹಾಗಾಗಿ ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿ, ಮಗಳನ್ನ ಹುಡುಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದೇವೆ. ಮೆಸೇಜ್ ಮಾಡಿ ಅಂತ ಹೇಳಿದಳ ಮೊಬೈಲ್ ಆಫ್ ಆಗಿದ್ದರಿಂದ ಆತಂಕ ಮನೆ ಮಾಡಿದೆ. ದಯವಿಟ್ಟು ವೀಡಿಯೋ ಹಿಂದಿರುವವರನ್ನ ಪತ್ತೆ ಮಾಡಿ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಯುವತಿ ಕುಟುಂಬ ಒತ್ತಾಯಿಸಿದೆ. ಇದನ್ನೂ ಓದಿ: ಸಿಡಿ ಗ್ಯಾಂಗ್ – ವಿಚಾರಣೆಗೆ ಒಳಪಟ್ಟವರು ಯಾರು? ಆರೋಪ ಏನು?
ಮಾರ್ಚ್ 2ರಿಂದ ಮಗಳು ಕಾಣೆಯಾಗಿದ್ದು, ನಕಲಿ ಸಿಡಿ ಮಾಡಿ ತೇಜೋವಧೆ ಮಾಡಲಾಗುತ್ತಿದೆ. ಮಗಳನ್ನ ಬೆಂಗಳೂರಿನಲ್ಲಿ ಅಪಹರಣ ಮಾಡಲಾಗಿದ್ದು, ಕಿರುಕುಳ ನೀಡುತ್ತಿದ್ದಾರೆ ಎಂದು ಯುವತಿಯ ತಂದೆ-ತಾಯಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪೋಷಕರ ದೂರಿನ ಅನ್ವಯ ಐಪಿಸಿ 363, 368, 343, 346,354, 506 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ಬೆಳಗಾವಿ ಡಿಸಿಪಿ ವಿಕ್ರಂ ಹೇಳಿದ್ದಾರೆ. ಇದನ್ನೂ ಓದಿ: ಸಿಡಿ ಕೇಸ್ – ಮಹಾನಾಯಕ ಆಯ್ತು, ಈಗ ಮಹಾನಾಯಕಿಯನ್ನು ಎಳೆದು ತಂದ ಬಿಜೆಪಿ