ಲಕ್ನೋ: ತನ್ನ ವಿರೋಧದ ನಡುವೆಯೂ ಪ್ರೀತಿಯಲ್ಲಿ ಬಿದ್ದಿದ್ದ ಮಗಳನ್ನು ಹತ್ಯೆಗೈದು ಆಕೆಯ ತಲೆಯನ್ನು ತಂದೆಯೇ ಪೊಲೀಸ್ ಠಾಣೆಗೆ ತಂದು ಶರಣಾಗಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಈ ಮೂಲಕ ಮತ್ತೊಂದು ಮರ್ಯಾದಾ ಹತ್ಯೆ ಘಟನೆ ಬೆಳಕಿಗೆ ಬಂದಿದೆ.
ಸರ್ವೇಶ್ ಮಗಳನ್ನು ಕೊಲೆ ಮಾಡಿದ ತಂದೆಯಾಗಿದ್ದಾನೆ. 17 ವರ್ಷದ ಹುಡುಗಿ ಸೋದರ ಸಂಬಂಧಿ ಆದೇಶ್ ಎಂಬ ಯುವಕನೊಂದಿಗೆ ಪ್ರೇಮದಲ್ಲಿ ಬಿದ್ದಿದ್ದಳು. ಇದಕ್ಕೆ ಆಕೆಯ ಪೋಷಕರು ತೀವ್ರ ವಿರೋಧವನ್ನು ವ್ಯಕ್ತಪಡಿಸಿದ್ದರು. ಆದರೂ ಆಕೆ ತನ್ನ ಪ್ರೇಮ ಸಲ್ಲಾಪ ಮುಂದುವರೆಸಿದ್ದಳು. ಇದರಿಂದ ಕೋಪಗೊಂಡ ತಂದೆ ಮಗಳು ಮತ್ತು ಆತನ ಪ್ರಿಯಕರ ಇಬ್ಬರನ್ನೂ ಕೊಲೆ ಮಾಡಲು ಯೋಚಿಸಿದ್ದಾನೆ.
Rajasthan: A man killed his daughter for eloping with her lover after he married her off in Dausa. Police say, “She was married on Feb 16 but after returning home, she fled with her lover. Later, her father alleged her abduction, today he surrendered & said that he killed her.” pic.twitter.com/ywBfh04dU4
— ANI (@ANI) March 4, 2021
ಮಗಳು ಮನೆಯಲ್ಲಿ ಒಬ್ಬಂಟಿಯಾಗಿರುವುದನ್ನು ತಿಳಿದ ತಂದೆ ಬಾಗಿಲು ಮುಚ್ಚಿ ಆಕೆಯ ತಲೆ ಕತ್ತರಿಸಿದ್ದಾನೆ. ಬಳಿಕ ಕೈಯಲ್ಲಿ ಆಕೆಯ ರುಂಡ ಹಿಡಿದುಕೊಂಡು ಪೊಲೀಸ್ ಠಾಣೆಗೆ ಬರುತ್ತಿದ್ದನು. ಘಟನೆಯಿಂದ ಭಯಭೀತರಾದ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಗಳ ಕತ್ತರಿಸಿದ ತಲೆ ಹಿಡಿದು ಬರುತ್ತಿದ್ದ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ವ್ಯಕ್ತಿಯೊಬ್ಬನ ಜತೆ ಪುತ್ರಿ ಸಂಬಂಧ ಬೆಳೆಸಿದ್ದರಿಂದ ಕೋಪಗೊಂಡು ಹರಿತವಾದ ಆಯುಧದಿಂದ ತಲೆ ಕತ್ತರಿಸಿದ್ದೇನೆ. ಈ ಕೊಲೆಯನ್ನು ನಾನೇ ಮಾಡಿದ್ದು, ಬೇರೆ ಯಾರೂ ಇರಲಿಲ್ಲ. ಬಾಗಿಲು ಚಿಲಕ ಹಾಕಿ ತಲೆ ಕತ್ತರಿಸಿದೆ. ಮೃತದೇಹ ಕೊಠಡಿಯಲ್ಲಿದೆ ಎಂದು ಮೃತಳ ತಂದೆ ಸರ್ವೇಶ್ ಹೇಳಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅನುರಾಗ್ ವತ್ಸ್ ಹೇಳಿದ್ದಾರೆ.