ಬೆಂಗಳೂರು: ಚಿರಂಜೀವಿ ಸರ್ಜಾ ಪತ್ನಿ, ಮೇಘನಾ ರಾಜ್ ತನ್ನ ಮಗನಿಗೆ ಪೋಲಿಯೋ ಲಸಿಕೆ ಹಾಕಿಸಿದ್ದಾರೆ. ಮಗುವಿನ ಬೆರಳಿಗೆ ಹಾಕಿರುವ ಇಂಕ್‍ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಖುಷಿ ವ್ಯಕ್ತಪಡಿಸಿದ್ದಾರೆ.
ಮೇಘನಾ ರಾಜ್ ತನ್ನ ಪುಟ್ಟ ಕಂದಮ್ಮನಿಗೆ ಪೋಲಿಯೋ ಹನಿ ಹಾಕಿಸಿಕೊಂಡು ತಮ್ಮ ಸಾಮಾಜಿಕ ಜಾಲತಾಣದಲ್ಲಿ, ಮಗುವಿನ ಪುಟ್ಟ ಕೈಗಳಿಗೆ ಮೊದಲ ಬಾರಿಗೆ ಇಂಕ್ ಸವರಲಾಗಿದ್ದು ಇದು ಪೋಲಿಯೋ ಹಾಕಿಸಿಕೊಂಡ ಗುರುತು ಎಂದು ಬರೆದುಕೊಂಡಿದ್ದಾರೆ.
2020ರ ಅಕ್ಟೋಬರ್ 22ರಂದು ಮೇಘನಾ ರಾಜ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
ಈ ಮೂಲಕ ಪತಿ ಕಳೆದುಕೊಂಡ ದುಃಖದಲ್ಲಿದ್ದ ಕುಟುಂಬಕ್ಕೆ ಸ್ವತಃ ಚಿರು ಮತ್ತೆ ಹುಟ್ಟಿ ಬಂದಷ್ಟು ಸಂತಸವಾಗಿತ್ತು. ಇದೀಗ ಮೇಘನಾ ರಾಜ್ ತಮ್ಮ ಗಂಡು ಮಗುವನ್ನು ಬಹಳ ಮುದ್ದಾಗಿ ಬೆಳೆಸುತ್ತಿದ್ದಾರೆ.