ಸಿಡ್ನಿ: ಆಸ್ಟ್ರೇಲಿಯಾದ ಕ್ರಿಕೆಟ್ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತನ್ನ ಮುದ್ದಾದ ಮಕ್ಕಳಿಗಾಗಿ ಸೂಪರ್ ಡ್ಯಾಡಿ ಆಗುವ ಮೂಲಕ ವಿಶೇಷ ತಿಂಡಿಯನ್ನು ತಯಾರಿಸಿ ಕೊಟ್ಟು ಗಮನಸೆಳೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಒಂದನ್ನು ಪೋಸ್ಟ್ ಮಾಡಿರುವ ವಾರ್ನರ್ ಅವರ ಪತ್ನಿ ಕ್ಯಾಂಡಿಸ್ ವಾರ್ನರ್, ಪತಿ ಮನೆಗೆ ಬಂದಾಗಿದೆ ಇನ್ನು ಮಕ್ಕಳ ಸೂಪರ್ ಡ್ಯಾಡಿ ಆಗಿ ಅಡುಗೆ ಮನೆಯಲ್ಲಿ ವಿವಿಧ ತಿಂಡಿ ತಿನಿಸುಗಳನ್ನು ಮಕ್ಕಳಿಗಾಗಿ ತಯಾರಿ ಮಾಡಿ ಕೊಡಲು ವಾರ್ನರ್ ರೆಡಿ ಎಂದು ಬರೆದುಕೊಂಡಿದ್ದಾರೆ.
ಇಷ್ಟುದಿನ ಮನೆಯಲ್ಲಿ ವಾರಾಂತ್ಯದಲ್ಲಿ ಮಕ್ಕಳು ವಾರ್ನರ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ವಾರ್ನರ್ ಮರಳಿ ಮನೆಗೆ ಬಂದಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಮನೆಯಲ್ಲಿ ಏನೆಲ್ಲಾ ನಡೆಯಲಿದೆಯೋ ಎಂದು ಬರೆದುಕೊಂಡಿದ್ದಾರೆ.
ವಾರ್ನರ್ ಕಳೆದ ಒಂದು ತಿಂಗಳ ಹಿಂದೆ ಐಪಿಎಲ್‍ಗಾಗಿ ಭಾರತಕ್ಕೆ ಬಂದಿದ್ದರು. ಬಳಿಕ ಐಪಿಎಲ್ ಕೊರೊನಾದಿಂದಾಗಿ ರದ್ದುಗೊಂಡ ಬಳಿಕ ಆಸ್ಟ್ರೇಲಿಯಾದ ಆಟಗಾರರು ಮಾಲ್ಡೀಸ್ ತೆರಳಿ ಅಲ್ಲಿ ಕ್ವಾರಂಟೈನ್ ಆಗಿ ನಂತರ ಇದೀಗ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ.
View this post on Instagram
ಐಪಿಎಲ್‍ನಲ್ಲಿ ಸನ್‍ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದ ವಾರ್ನರ್ ಅವರನ್ನು ಟೂರ್ನಿಯ ಮಧ್ಯದಲ್ಲಿ ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಸಿ, ಕೇನ್ ವಿಲಿಯಮ್ಸ್ ಅವರನ್ನು ನಾಯಕನಾಗಿ ನೇಮಕ ಮಾಡಲಾಗಿತ್ತು.
ಇದೀಗ ವಾರ್ನರ್ ಮನೆಗೆ ತಲುಪಿದ್ದು ಕೆಲದಿನಗಳನ್ನು ಮನೆಯಲ್ಲಿ ಕಳೆದ ಬಳಿಕ ಜುಲೈನಲ್ಲಿ ಆಸ್ಟ್ರೇಲಿಯಾ ತಂಡ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಹಾಗಾಗಿ ವಾರ್ನರ್ ತನ್ನ ಮುಂದಿನ ಗುರಿಯನ್ನು ವೆಸ್ಟ್ ಇಂಡೀಸ್ ಪ್ರವಾಸದ ಮೇಲೆ ನೆಟ್ಟಿದ್ದಾರೆ.