ಬೆಂಗಳೂರು: ಲಾಕ್‍ಡೌನ್‍ನಿಂದ ಕಷ್ಟ ಅನುಭವಿಸುತ್ತಿರುವ ಮಂಗಳಮುಖಿಯರಿಗೆ ಸ್ಯಾಂಡಲ್‍ವುಡ್ ನಟ ಕಿಚ್ಚ ಸುದೀಪ್ ಫುಡ್ ಕಿಟ್ ನೀಡುವ ಮೂಲಕವಾಗಿ ನೆರವಾಗಿದ್ದಾರೆ.
Advertisement
ಒಂದುಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದ ಮಂಗಳಮುಖಿಯರು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಗೆ ಕರೆ ಮಾಡಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ತಕ್ಷಣವೇ ನೆರವಿಗೆ ಬಂದ ಕಿಚ್ಚನ ಚಾರಿಟೇಬಲ್ ಸೊಸೈಟಿ, ಚಿತ್ರದುರ್ಗದ ಮಂಗಳಮುಖಿಯರ ಮನೆಗೆ ದಿನಸಿ ಕಿಟ್‍ಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ: ಒಂದೊಳ್ಳೆ ಕಾರಣಕ್ಕೆ ಬೀದಿಗಿಳಿದಿದ್ದೇನೆ: ಸತೀಶ್ ನೀನಾಸಂ
Advertisement
Advertisement
ಕಿಚ್ಚ ಸರ್ ಕೊರೊನಾ ಸಂದರ್ಭದಲ್ಲಿ ಕಳೆದ ವರ್ಷದಿಂದ ಜನರ ಪರವಾಗಿ ನಿಂತಿದ್ದಾರೆ. ಮಂಗಳಮುಖಿಯರು ಖುಷಿಪಟ್ಟು ಧನ್ಯವಾದ ತಿಳಿಸಿದ್ದಾರೆ. ದಿನಸಿ ವ್ಯವಸ್ಥೆ ಮಾಡಿದ್ದು, ಮಾತ್ರವಲ್ಲದೇ, ಹಣಕಾಸಿನ ಸಹಾಯವನ್ನು ಕಿಚ್ಚ ಸುದೀಪ್ ಮಾಡಿದ್ದಾರೆ ಧನ್ಯವಾದಗಳು ಎಂದು ಮಂಗಳಮುಖಿಯರು ಹೇಳಿದ್ದಾರೆ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಪ್ರಣಿತಾ ಸುಭಾಷ್- ನಿತಿನ್ ರಾಜ್ ಯಾರು..?
Advertisement
ಮೊದಲು ಮಾನವನಾಗು ಅನ್ನೋ ಒಂದು ಧ್ಯೇಯ ವಾಕ್ಯವನ್ನು ಮೂಲ ಮಂತ್ರವಾಗಿಟ್ಟುಕೊಂಡು ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಸಾಕಷ್ಟು ಜನರಿಗೆ ಕಿಚ್ಚ ಸುದೀಪ್ ತಂಡ ನೆರವಿನ ಹಸ್ತ ಚಾಚಿದೆ. ಹಸಿವು ಅಂದವರಿಗೆ ಊಟ, ಕಷ್ಟ ಅಂದವರಿಗೆ ದಿನಸಿಕಿಟ್‍ಗಳನ್ನು ನೀಡುತ್ತಿದ್ದಾರೆ. ಇದನ್ನೂ ಓದಿ: ಗುರುಗಳಿಗೆ ಕಿಚ್ಚನ ನಮನ- ಗೌರವಧನ ನೀಡಲು ಮುಂದಾದ ನಟ
ಕೋವಿಡ್-19 ಎರಡನೇ ಅಲೆ ಮತ್ತು ಲಾಕ್‍ಡೌನ್‍ನಿಂದಾಗಿ ಅನೇಕ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಅಂತಹ ಶಿಕ್ಷಕರಿಗೆ ನೆರವಾಗಲು ಸುದೀಪ್ ಮನಸ್ಸು ಮಾಡಿದ್ದಾರೆ. ಗುರುಗಳಿಗೆ ಕಿಚ್ಚನ ನಮನ ಕಾರ್ಯಕ್ರಮದ ಮೊದಲ ಹಂತವಾಗಿ ಕಷ್ಟದಲ್ಲಿರುವ 50 ಜನ ಶಿಕ್ಷಕರಿಗೆ ಕಿಚ್ಚ ಸುದೀಪ್ ಚಾರಿಟೇಬಲ್ ಸೊಸೈಟಿ ತಲಾ ಎರಡು ಸಾವಿರ ರೂಪಾಯಿ ಗೌರವಧನ ನೀಡಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಕಿಚ್ಚ ಸುದೀಪ್ ಮತ್ತು ಅವರ ತಂಡದ ಈ ಕಾರ್ಯಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.