ಹಾವೇರಿ: ಭಾರೀ ಗಾಳಿಗೆ ಅಡಿಕೆ ಮರಗಳು ನೆಲಕ್ಕೆ ಉರುಳಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿರುವ ಘಟನೆ ಜಿಲ್ಲೆಯ ರಟ್ಟೀಹಳ್ಳಿ ತಾಲೂಕಿನ ಚಿಕ್ಕಮೊರಬ ಗ್ರಾಮದಲ್ಲಿ ನಡೆದಿದೆ.
Advertisement
ರೈತರಾದ ಶಿವನಗೌಡ ಮಲಗಿನಹಳ್ಳಿ ಮತ್ತು ಬಸನಗೌಡ ಮನಗಿನಹಳ್ಳಿ ಅವರಿಗೆ ಸೇರಿದ ಅಡಿಕೆ ತೋಟ ಇದಾಗಿದ್ದು, ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಫಸಲಿಗೆ ಬಂದಿದ್ದ ಅಡಿಕೆ ಮರಗಳು ನೆಲಕ್ಕೆ ಉರುಳಿವೆ. ಬರೋಬ್ಬರಿ 150 ಕ್ಕೂ ಅಧಿಕ ಅಡಿಕೆ ಮರಗಳು ನೆಲಕಚ್ಚಿದ್ದು, ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ಇದರಿಂದಾಗಿ ರೈತ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
Advertisement
Advertisement
ಇಷ್ಟು ದಿನ ಗಿಡಗಳನ್ನು ಬೆಳೆಸಿ ಈಗ ಫಸಲಿಗೆ ಬಂದಿದ್ದ ಮರಗಳು ನೆಲ ಕಚ್ಚಿರುವುದಕ್ಕೆ ತೀವ್ರ ಬೇಸರವಾಗಿದ್ದು, ಆತಂಕದಲ್ಲಿದ್ದಾರೆ. ಭಾರೀ ಗಾಳಿಗೆ ಬೇರು ಸಮೇತ ಅಡಿಕೆ ಗಿಡಗಳು ನೆಲ್ಲಕ್ಕುರುಳಿವೆ. ಒಂದಲ್ಲ ಎರಡಲ್ಲ ಬರೋಬ್ಬರಿ 150ಕ್ಕೂ ಅಧಿಕ ಮರಗಳು ನೆಲಕ್ಕುರುಳಿರುವುದಕ್ಕೆ ರೈತ ತೆಲೆ ಮೇಲೆ ಕೈ ಹೊತ್ತು ಕೂರುವಂತಾಗಿದೆ.