ನವದೆಹಲಿ: ಭಾರತ ಹಾಗೂ ಚೀನಾ ಗಡಿಪ್ರದೇಶದ ಬಳಿ ಪ್ರಮುಖ ಸೇತುವೆಯೊಂದು ನೋಡ ನೋಡುತ್ತಿದಂತೆ ಕುಸಿದು ಬಿದ್ದಿರುವ ಘಟನೆ ಉತ್ತರಾಖಂಡ ರಾಜ್ಯದ ಪಿಥೋರ್‍ಗಢ ಜಿಲ್ಲೆಯಲ್ಲಿ ನಡೆದಿದೆ.
ಭಾರೀ ಗಾತ್ರದ ನಿರ್ಮಾಣ ಯಂತ್ರವನ್ನು ಟ್ರಕ್‍ವೊಂದು ಹೊತ್ತು ಸಾಗುತ್ತಿದ್ದ ವೇಳೆ ಏಕಾಏಕಿ ಸೇತುವೆ ಕುಸಿದು ಬಿದ್ದಿದೆ. ಘಟನೆಯಲ್ಲಿ ವಾಹನದ ಚಾಲಕ ಹಾಗೂ ಸಹಾಯಕ ಗಂಭೀರವಾಗಿ ಗಾಯಗೊಂಡಿರುವ ಮಾಹಿತಿ ಲಭಿಸಿದೆ. ಲೀಲಾ ಜೋಹಾರ್ ಕಣಿವೆಯ ಧಾಪಾ-ಮಿಲಾಮ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ.
Advertisement
#WATCH Uttarakhand: A vehicle fell off Bailey Bridge in Pithoragarh as the bridge collapsed while the vehicle was crossing it. Two people who were injured were taken to Munsyari for medical treatment. pic.twitter.com/kcWYwyi1Ds
— ANI (@ANI) June 22, 2020
Advertisement
ಸದ್ಯ ಕುಸಿದು ಬಿದ್ದಿರುವ ಸೇತುವೆ ಭಾರತೀಯ ಸೇನೆ ಮತ್ತು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರ ನಡುವೆ ಸಂಪರ್ಕ ಕಲ್ಪಿಸಲು ಇರುವ ಏಕೈಕ ಮಾರ್ಗ ಎನ್ನಲಾಗಿದೆ. ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ರಸ್ತೆ ನಿರ್ಮಾಣ ಕಾರ್ಯಗಳಲ್ಲಿ ಬಳಸಲು ಭಾರೀ ನಿರ್ಮಾಣ ಯಂತ್ರವನ್ನು ಟ್ರಕ್ ಮೂಲಕ ಸಾಗಿಸಲಾಗುತ್ತಿತ್ತು. ಸೇತುವೆ ಕುಸಿದ ಪರಿಣಾಮ ಈ ಮಾರ್ಗದ ಸಂಪರ್ಕ ಕಡಿತಗೊಂಡಿದೆ.
Advertisement
ಸೇತುವೆ ಕುಸಿದು ಬೀಳುವ ದೃಶ್ಯ ಸೆರೆಯಾಗಿದ್ದು, ಟ್ರಕ್ ಸೇತುವೆಯ ಅರ್ಧ ಭಾಗಕ್ಕೆ ಆಗಮಿಸಿದ್ದ ವೇಳೆ ಅವಘಡ ಸಂಭವಿಸಿದೆ. ಗಡಿ ಪ್ರದೇಶದಿಂದ ಸುಮಾರು 65 ಕಿಮೀ ದೂರದಲ್ಲಿ ಘಟನೆ ಜರುಗಿದ್ದು, 25 ವರ್ಷ ಹಿಂದಿನ ಹಳೆಯ ಸೇತುವೆ ಎಂಬ ಮಾಹಿತಿ ಲಭಿಸಿದೆ. ಸೇತುವೆ ಮರು ನಿರ್ಮಾಣವಾಗದ ಹೊರತು ಸುಮಾರು 7 ಸಾವಿರ ಜನಸಂಖ್ಯೆ ಹೊಂದಿರುವ ಹಳ್ಳಿಗಳಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಬಾರ್ಡರ್ ರೋಡ್ ಆರ್ಗನೈಜೇಶನ್ (ಬಿಆರ್‍ಒ) ಸದ್ಯ ಸೇತುವೆ ಮರು ನಿರ್ಮಾಣದ ಕಾರ್ಯಕ್ಕೆ ಮುಂದಾಗಿದೆ. ಇತ್ತೀಚೆಗೆ ವಾಸ್ತವಿಕ ನಿಯಂತ್ರಣ ರೇಖೆ (ಎಲ್‍ಎಸಿ) ಬಳಿ ಭಾರೀ ವಾಹನಗಳನ್ನು ರಸ್ತೆ ನಿರ್ಮಾಣದ ಕಾಮಗಾರಿಗೆ ಸಾಗಿಸಲಾಗಿತ್ತು. ಮಿಲಾಮ್‍ನಿಂದ ಚೀನಾ ಗಡಿ ಪ್ರದೇಶವರೆಗೂ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದೆ.