ನವದೆಹಲಿ: ಲಸಿಕೆ ರಾಜಕೀಯದ ಮಧ್ಯೆ ಭಾರತಕ್ಕೆ ಮತ್ತೊಂದು ಸಿಹಿಸುದ್ದಿ ಸಿಕ್ಕಿದೆ. ಕೋವಿಶೀಲ್ಡ್ ಬೆನ್ನಲ್ಲೇ ದೇಶಿಯ ಲಸಿಕೆ ಭಾರತ್ ಬಯೋಟೆಕ್ ಕೊವ್ಯಾಕ್ಸಿನ್ ಲಸಿಕೆಯ ತುರ್ತು ಬಳಕೆಗೂ ಕೂಡ ವಿಷಯ ತಜ್ಞರ ಸಮಿತಿ(ಎಸ್ಇಸಿ) ಷರತ್ತುಬದ್ಧ ಅನುಮತಿ ನೀಡಿ ಕೇಂದ್ರಕ್ಕೆ ಶಿಫಾರಸು ಮಾಡಿದೆ.
ಒಂದೆರಡು ದಿನಗಳಲ್ಲಿ ಭಾರತೀಯ ಔಷಧ ನಿಯಂತ್ರಣ ನಿರ್ದೇಶನಾಲಯ(ಡಿಸಿಜಿಐ) ಎರಡು ಲಸಿಕೆಗಳಿಗೆ ಗ್ರೀನ್ ಸಿಗ್ನಲ್ ನೀಡಲಿದೆ. ನಿನ್ನೆ ನಡೆದ ಸಭೆಯಲ್ಲಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‍ನಿಂದ ಹೆಚ್ಚಿನ ಮಾಹಿತಿಯನ್ನು ವಿಷಯ ತಜ್ಞರ ಸಮಿತಿ ಕೇಳಿತ್ತು. ಇದನ್ನು ಭಾರತ್ ಬಯೋಟೆಕ್ ಕೂಡಲೇ ಒದಗಿಸಿದ ಹಿನ್ನೆಲೆಯಲ್ಲಿ ಇಂದು ತುರ್ತು ಸಭೆ ಸೇರಿದ ತಜ್ಞರು, ಕೊವ್ಯಾಕ್ಸಿನ್‍ಗೂ ಷರತ್ತುಬದ್ಧ ಹಸಿರುನಿಶಾನೆ ನೀಡಿದರು.
Advertisement
Advertisement
ಒಂದು ವೇಳೆ ಡಿಸಿಜಿಐ ಅಂತಿಮ ಮುದರೆ ಹಾಕಿದರೆ ಲಸಿಕೆ ಉತ್ಪಾದಕ ಸಂಸ್ಥೆಗಳು ಮಾರ್ಕೆಟ್ ಆಥರೈಸೇಷನ್, ಉತ್ಪಾದನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಲಿವೆ. ಈ ಪ್ರಕ್ರಿಯೆ ಪೂರ್ಣಗೊಂಡ ನಂತರ ಲಸಿಕೆಗಳು ಮಾರುಕಟ್ಟೆ ಪ್ರವೇಶಿಸಲಿವೆ. ಸದ್ಯ ದೇಶದಲ್ಲಿ 3ನೇ ಹಂತದ ಕೊವ್ಯಾಕ್ಸಿನ್ ಲಸಿಕೆಯ ಕ್ಲಿನಿಕಲ್ ಟ್ರಯಲ್ಸ್ ನಡೆಯುತ್ತಿವೆ.
Advertisement
ಲಸಿಕೆ ಕಂಪನಿಗಳಿಗೆ ತಜ್ಞರ ಸಮಿತಿ ಷರತ್ತುಗಳೇನು?
* 18 ವರ್ಷ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ನೀಡಬೇಕು
* ಇಂಜೆಕ್ಷನ್ ರೂಪದಲ್ಲಿ ಮಾನವನ ದೇಹಕ್ಕೆ ಔಷಧಿ ಸೇರಿಸಬೇಕು
* ಕ್ಲಿನಿಕಲ್ ಟ್ರಯಲ್ಸ್‌ನಲ್ಲಿ ಬಯಲಾಗುವ ಭದ್ರತೆ, ಸುರಕ್ಷತೆ,ಸಾಮರ್ಥ್ಯಕ್ಕೆ ಸಂಬಂಧಿಸಿದ ದತ್ತಾಂಶ ಸಲ್ಲಿಸಬೇಕು
* ಲಸಿಕೆ ಹಾಕಿದ ಬಳಿಕ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ 15 ದಿನಕ್ಕೊಮ್ಮೆ ವರದಿ ನೀಡಬೇಕು