– ಯುವಕನ ಪತ್ನಿಯೂ ಬಂಧನ
ಮುಂಬೈ: ಭಾರತೀಯ ಸೇನಾಧಿಕಾರಿ ಎಂದು ಹೇಳಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದ 23 ವರ್ಷದ ಯುವಕನ್ನು ಮಹಾರಾಷ್ಟ್ರದ ಪುಣೆಯಲ್ಲಿ ಬಂಧಿಸಲಾಗಿದೆ.
Advertisement
ಇತ್ತೀಚೆಗೆ ಭಾರತೀಯ ಸೇನಾಧಿಕಾರಿಯಂತೆ ನಟಿಸಿ ಜನರನ್ನು ಮೋಸಗೊಳಿಸುತ್ತಿರವ ವ್ಯಕ್ತಿಯನ್ನು ಬಂಧಿಸಿದ್ದೇವೆ. ಮಿಲಿಟರಿ ಗುಪ್ತಚರ ಅಧಿಕಾರಿಗಳು ಆರೋಪಿಗಳನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯೊಬ್ಬಳನ್ನೂ ಬಂಧಿಸಲಾಗಿದೆ ಎಂದು ಪುಣೆ ಗ್ರಾಮೀಣ ಪೊಲೀಸ್ ಸ್ಥಳೀಯ ಅಪರಾಧ ಶಾಖೆಯ (ಎಲ್‍ಸಿಬಿ) ಹಿರಿಯ ಇನ್ಸ್‍ಪೆಕ್ಟರ್ ಪದ್ಮಕರ್ ಘನ್ವತ್ ತಿಳಿಸಿದ್ದಾರೆ.
Advertisement
Advertisement
ಪುಣೆ ನಗರದ ಹೊರವಲಯದಲ್ಲಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‍ಡಿಎ) ಬಳಿಯ ಕಿರ್ಕಾಟ್ವಾಡಿ ಪ್ರದೇಶದಲ್ಲಿ ಸೇನಾ ಅಧಿಕಾರಿಯಾಗಿ ನಟಿಸುತ್ತಿದ್ದ ಯುವಕನ್ನು ಬಂಧಿಸಿದ್ದಾರೆ. ಈ ವ್ಯಕ್ತಿ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಎಂದು ಹೇಳಿಕೊಂಡು ನಟಿಸುತ್ತಿದ್ದನು. ಪೊಲೀಸ್ ಅವರ ನಿವಾಸದಿಂದ ಹಲವಾರು ನಕಲಿ ಮತ್ತು ನಕಲಿ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
Advertisement
ಆರೋಪಿಯನ್ನು ಅಂಕಿತ್ ಕುಮಾರ್ ಸಿಂಗ್ (23) ಎಂದು ಗುರುತಿಸಲಾಗಿದೆ. ಈತ ಉತ್ತರ ಪ್ರದೇಶದ ಹಸನ್ಪುರ ಅಮ್ರೋಹ್ ಮೂಲದವನಾಗಿದ್ದಾನೆ. 10 ಗುರುತಿನ ಚೀಟಿಗಳು, ಎರಡು ಮೊಬೈಲ್‍ಗಳು, ಟ್ಯಾಬ್ಲೆಟ್, ಪ್ರಿಂಟರ್, ಲ್ಯಾಪ್‍ಟಾಪ್, ನಕಲಿ ದಾಖಲೆಗಳು ಮತ್ತು ಭಾರತೀಯ ಸೇನಾಧಿಕಾರಿ ಸಮವಸ್ತ್ರ, ಬೂಟುಗಳು, ಸೊಂಟದ ಬೆಲ್ಟ್ ಮತ್ತು ಕ್ಯಾಪ್ ಅನ್ನು ಪೊಲೀಸರು ಆರೋಪಿಯಿಂದ ವಶಪಡಿಸಿಕೊಂಡಿದ್ದಾರೆ.
ಪೊಲೀಸರಿಗೆ ಬಂದಿರುವ ಮಾಹಿತಿಯನ್ನು ಆಧರಿಸಿ ತನಿಖೆ ನಡೆಸುತ್ತಿದ್ದಾಗ ಲೆಫ್ಟಿನೆಂಟ್ ಕರ್ನಲ್ ಅಧಿಕಾರಿಯ ಸೋಗಿನಲ್ಲಿ ಆರೋಪಿ ಜನರನ್ನು ಯುವಕ ಮೋಸ ಮಾಡುತ್ತಿದ್ದನು. ಅರೋಪಿಯ ಹೆಂಡತಿ ಮೀನಾಕ್ಷಿ ಎಂಬ ಮಹಿಳೆಯನ್ನು ಬಂಧಿಸಿ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳು ಸೇನೆಯ ನೇಮಕಾತಿ ದಂಧೆಯ ಭಾಗವಾಗಿದ್ದಾರೆಯೇ ಎಂದು ತಿಳಿಯಲು ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡುತ್ತೇವೆ ಪೊಲೀಸರು ತಿಳಿಸಿದ್ದಾರೆ.