ನವದೆಹಲಿ: ಪಾಕಿಸ್ತಾನದ ಕ್ರಿಕೆಟ್ ಆಟಗಾರರು ಭಾರತೀಯ ಕ್ರಿಕೆಟ್ ಆಟಗಾರರಿಗಿಂತ ಹೆಚ್ಚು ಪ್ರತಿಭಾನ್ವಿತರು ಅವರನ್ನು ಭಾರತೀಯ ಆಟಗಾರರೊಂದಿಗೆ ಹೋಲಿಕೆ ಮಾಡಬೇಡಿ ಎಂದು ಪಾಕಿಸ್ತಾನದ ಮಾಜಿ ಆಲ್‍ರೌಂಡರ್ ಆಟಗಾರ ಅಬ್ದುಲ್ ರಜಾಕ್ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ.
ಪಾಕಿಸ್ತಾನದ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಬ್ದುಲ್ ರಜಾಕ್ ಮೊದಲ ವಿರಾಟ್ ಕೊಹ್ಲಿ ಮತ್ತು ಬಾಬರ್ ಅಜಾಮ್ ಅವರನ್ನು ಹೋಲಿಕೆ ಮಾಡಬೇಡಿ ಪಾಕಿಸ್ತಾನದ ಆಟಗಾರರು ಭಾರತೀಯ ಆಟಗಾರಿಂದ ಹೆಚ್ಚು ಪ್ರತಿಭಾನ್ವಿತರು ಎಂದು ಹೇಳಿದ್ದಾರೆ.
ಪಾಕಿಸ್ತಾನ ತಂಡದ ಇತಿಹಾಸ ಗಮನಿಸಿದಾಗ ಮೊಹಮ್ಮದ್ ಯೂಸುಫ್, ಇಂಜಮಾಮ್ ಉಲ್ ಹಕ್, ಸಯೀದ್ ಅನ್ವರ್, ಜಾವೇದ್ ಮಿಯಾಂದಾದ್, ಜಹೀರ್ ಅಬ್ಬಾಸ್ ಮೊದಲಾದ ಆಟಗಾರರು ಭಾರತದ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಆಡಿ ತೋರಿಸಿದ್ದಾರೆ ಎಂದು ರಜಾಕ್ ಅಭಿಪ್ರಾಯಪಟ್ಟಿದ್ದಾರೆ.
ಕೊಹ್ಲಿ ಹಾಗೂ ಬಾಬರ್ ಅಜಾಮ್ ನಡುವೆ ಹೋಲಿಕೆ ಮಾಡಬೇಕಾದರೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕ್ರಿಕೆಟ್ ಪಂದ್ಯ ನಡೆಯಬೇಕು. ಆ ಸಂದರ್ಭ ಕೊಹ್ಲಿ ಮತ್ತು ಬಾಬರ್ ಅವರ ನಡುವೆ ಯಾರು ಉತ್ತಮ ಆಟಗಾರ ಎಂಬುದನ್ನು ಗಮನಿಸಬಹುದು ಎಂದಿದ್ದಾರೆ.
ವಿರಾಟ್ ಕೊಹ್ಲಿ ಒಬ್ಬ ಒತ್ತಮ ಆಟಗಾರ ಪಾಕಿಸ್ತಾನ ವಿರುದ್ಧ ಉತ್ತಮ ದಾಖಲೆ ಹೊಂದಿದ್ದಾರೆ. ಆದರೆ ಇವರೊಂದಿಗೆ ಪಾಕಿಸ್ತಾನದ ಆಟಗಾರರನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.