ದುಬೈ: ತಾನು ಆಡಿದ ಮೊದಲ ಐಪಿಎಲ್ ಪಂದ್ಯದಲ್ಲಿ ಅರ್ಧಶತಕ ಸಿಡಿಸುವ ಮೂಲಕ ಭಾರತದ ಕ್ರಿಕೆಟ್ ಇತಿಹಾಸದಲ್ಲಿ ಕರ್ನಾಟಕದ ರಣಜಿ ಆಟಗಾರ ದೇವದತ್ ಪಡಿಕಲ್ ಅಪರೂಪದ ಸಾಧನೆ ನಿರ್ಮಿಸಿದ್ದಾರೆ.
ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ 20 ವರ್ಷದ ಯುವ ಆರ್‌ಸಿಬಿ ಆಟಗಾರ ಪಡಿಕ್ಕಲ್ 36 ಎಸೆತದಲ್ಲಿ ಅರ್ಧಶತಕ ಚಚ್ಚಿ ಅಂತಿಮವಾಗಿ 56 ರನ್(42 ಎಸೆತ, 8 ಬೌಂಡರಿ) ಹೊಡೆದು ಔಟಾದರು.
Advertisement
His fine innings comes to an end as Devdutt Padikkal departs for 56.#Dream11IPL #SRHvRCB pic.twitter.com/sRKmCAq8b8
— IndianPremierLeague (@IPL) September 21, 2020
Advertisement
ಈ ಮೂಲಕ ತಾನು ಆಡಿದ ಪ್ರಥಮ ದರ್ಜೆ, ಲಿಸ್ಟ್ ಎ, ಟಿ 20, ಐಪಿಎಲ್‌ನ ಎಲ್ಲ ಮೊದಲ ಪಂದ್ಯದಲ್ಲಿ ಅರ್ಧಶತಕ ಹೊಡೆದ ಅಪರೂಪದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.
Advertisement
ಪಡಿಕಲ್ 2019-20 ರ ವಿಜಯ್ ಹಜಾರೆ ಮತ್ತು ಸೈಯದ್ ಮುಸ್ತಾಕ್ ಆಲಿ ಟ್ರೋಫಿಯಲ್ಲಿ ಅತಿ ಹೆಚ್ಚು ರನ್ ಹೊಡೆದಿದ್ದರು.
Advertisement
ವಿಜಯ್ ಹಜಾರೆ ಟ್ರೋಫಿಯಲ್ಲಿ 11 ಇನ್ನಿಂಗ್ಸ್ ಆಡಿ 609 ರನ್ ಚಚ್ಚಿದ್ದರು. 81.09 ಸ್ಟ್ರೈಕ್ ರೇಟ್‌ನಲ್ಲಿ 2 ಶತಕ 5 ಅರ್ಧಶತಕ ಹೊಡೆದಿದ್ದರು.
ಮುಸ್ತಾಕ್ ಆಲಿ ಟ್ರೋಫಿಯಲ್ಲಿ 12 ಇನ್ನಿಂಗ್ಸ್ ಗಳಿಂದ 580 ರನ್ ಭಾರಿಸಿದ್ದರು. 175.75 ಸ್ಟ್ರೈಕ್ ರೇಟ್‌ನಲ್ಲಿ 1 ಶತಕ, 5 ಅರ್ಧಶತಕ ಸಿಡಿಸಿದ್ದರು.
ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬೆಂಗಳೂರು ಪರ ಪಡಿಕ್ಕಲ್ ಮತ್ತು ಫಿಂಚ್ ಉತ್ತಮ ಆರಂಭ ನೀಡಿದರು. ಇವರಿಬ್ಬರು 67 ಎಸೆತಗಳಲ್ಲಿ 90 ರನ್ ಜೊತೆಯಾಟವಾಡಿದರು. ಪಡಿಕ್ಕಲ್ ಔಟಾದ ಬೆನ್ನಲ್ಲೇ 29 ರನ್(27 ಎಸೆತ, 2 ಬೌಂಡರಿ) ಹೊಡೆದಿದ್ದ ಫಿಂಚ್ ಎಲ್‌ಬಿಗೆ ಔಟಾದರು. ಕೊಹ್ಲಿ 13 ಎಸೆತಕ್ಕೆ 14 ರನ್ ಹೊಡೆದು ಔಟಾದರು.