ನವದೆಹಲಿ: ಭಾರತದ ಒಂದಿಂಚು ಭೂ ಭಾಗವನ್ನು ಚೀನಾ ಆಕ್ರಮಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸರ್ವ ಪಕ್ಷ ಸಭೆಯಲ್ಲಿ ಹೇಳಿದ್ದಾರೆ ಎನ್ನಲಾದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆದಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಜನ ಪ್ರಶ್ನಿಸಿ ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಇಂದು ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಚೀನಾ ಆಕ್ರಮಣಕ್ಕೆ ಪ್ರಧಾನಿ ಮೋದಿ ಭಾರತದ ಭೂ ಭಾಗವನ್ನು ಒಪ್ಪಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಚೀನಾ ಭಾರತದ ಭೂಭಾಗ ಆಕ್ರಮಣ ಮಾಡಿಕೊಳ್ಳದಿದ್ದರೇ ಸೈನಿಕರ ಹತ್ಯೆ ಆಗಿದ್ದು ಏಕೆ? ಮತ್ತು ನಮ್ಮವರು ಎಲ್ಲಿ ಕೊಲ್ಲಲ್ಪಟ್ಟರು ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
PM has surrendered Indian territory to Chinese aggression.
If the land was Chinese:
1. Why were our soldiers killed?
2. Where were they killed? pic.twitter.com/vZFVqtu3fD
— Rahul Gandhi (@RahulGandhi) June 20, 2020
ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಸೇನಾ ಮುಖ್ಯಸ್ಥರು ಮತ್ತು ವಿದೇಶಾಂಗ ಇಲಾಖೆ ಮತ್ತು ಸಚಿವರು ನೀಡಿದ ಮಾಹಿತಿಗೆ ವಿರುದ್ಧವಾಗಿದೆ ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವಿಡಿಯೋ ಕಾನ್ಫರೆನ್ಸ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಹೇಳಿಕೆ ಟ್ವಿಟ್ಟರ್ ನಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ. #ModiSurrendersToChina ಹೆಸರಿನಲ್ಲಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈವರೆಗೂ 72,600 ಟ್ವೀಟ್‍ಗಳಾಗಿದ್ದು ಭಾರತದಲ್ಲಿ ನಂಬರ್ ಒನ್ ಟ್ರೆಂಡಿಂಗ್ ನಲ್ಲಿದೆ.