– ಇದು ಸಿದ್ಧಾಂತವಲ್ಲ, ಮನಸ್ಥಿತಿಯಾಗಿದೆ
ನವದೆಹಲಿ: ವಿಶ್ವದಲ್ಲಿ ಭಯೋತ್ಪಾದನೆ ಹಾಗೂ ಗಲಭೆ ಸೃಷ್ಟಿಸುತ್ತಿರುವವರಲ್ಲಿ ಬಹುತೇಕರು ಸುಶಿಕ್ಷಿತರೇ ಆಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
Addressing the Visva-Bharati. Watch. https://t.co/HDxyZLMVc7
— Narendra Modi (@narendramodi) February 19, 2021
ವಿಶ್ವ ಭಾರತಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾಗಿ ಮಾತನಾಡಿದ ಅವರು, ವಿಶ್ವದಲ್ಲಿ ಭಯೋತ್ಪಾದನೆ ಹಾಗೂ ಗಲಭೆ ಎಬ್ಬಿಸುತ್ತಿರುವವರಲ್ಲಿ ಬಹುತೇಕರು ಸುಶಿಕ್ಷಿತರೇ ಆಗಿದ್ದಾರೆ. ಇನ್ನೊಂದೆಡೆ ಕೊರೊನಾ ಸಮಯದಲ್ಲಿ ಜನರನ್ನು ಕಾಪಾಡಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟವರು ಸಹ ಇದ್ದಾರೆ. ಇದು ಸಿದ್ಧಾಂತವಲ್ಲ, ಅವರ ಮನಸ್ಥಿತಿಯಾಗಿದೆ ಎಂದು ತಿಳಿಸಿದ್ದಾರೆ.
ಶಿಕ್ಷಣದ ಮೂಲಕ ಉಗ್ರವಾದವನ್ನು ಹತ್ತಿಕ್ಕಬಹುದು ಎಂದು ನಾಗರಿಕ ಸಮಾಜ ಹೇಳುತ್ತಿದ್ದರೆ, ಇನ್ನೊಂದೆಡೆ ಜಸ್ಟ್ ಸೆಕ್ಯುರಿಟಿಯ ವರದಿ ಪ್ರಕಾರ ಭಯೋತ್ಪಾದಕರಲ್ಲಿ ಬಹುತೇಕರು ಸುಶಿಕ್ಷತರೇ ಆಗಿದ್ದಾರೆ ಎಂದು ಹೇಳಲಾಗಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಸಹ ಇದನ್ನೇ ಉಚ್ಚರಿಸಿದ್ದು, ಭಯೋತ್ಪಾದಕರ ಪೈಕಿ ಬಹುತೇಕರು ಶಿಕ್ಷಿತರು ಎಂದು ಹೇಳಿದ್ದಾರೆ.