ಬೆಂಗಳೂರು: ಇತ್ತೀಚೆಗಷ್ಟೇ ಗೂಗಲ್‍ನಲ್ಲಿ ‘ಅಗ್ಲಿ ಲಾಂಗ್ವೇಜ್ ಆಫ್ ಇಂಡಿಯಾ’ ಎಂದು ಸರ್ಚ್ ಮಾಡಿದಾಗ ವೆಬ್‍ಸೈಟ್‍ವೊಂದು ಕನ್ನಡ ಎಂದು ತೋರಿಸುವ ಮೂಲಕ ಅವಮಾನಿಸಿತ್ತು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವೇ ನಡೆದು, ಕಡೆಗೂ ಗೂಗಲ್ ಕ್ಷಮೆಯಾಚಿಸಿತು. ಇದೀಗ ಮತ್ತೊಂದು ಅಚಾತುರ್ಯ ನಡೆದಿದ್ದು, ಕನ್ನಡದ ಲಾಂಛನ ಹಾಗೂ ಕನ್ನಡ ಬಾವುಟದ ಬಣ್ಣ ಇರುವ ಮಹಿಳೆಯರ ಬ್ರಾ ಹಾಗೂ ಪ್ಯಾಂಟಿಗಳನ್ನು ಮಾರಾಟಕ್ಕಿಡುವ ಮೂಲಕ ಅಮೇಜಾನ್ ಕನ್ನಡಕ್ಕೆ ಅವಮಾನಿಸಿದೆ.
Advertisement
ಕನ್ನಡದ ಲಾಂಛನ ಹಾಗೂ ಕನ್ನಡ ಬಾವುಟದ ಬಣ್ಣವಿರುವ ಮಹಿಳೆಯರ ಒಳ ಉಡುಪುಗಳನ್ನು ಅಮೇಜಾನ್ ಮಾರಾಟಕ್ಕಿಟ್ಟಿದೆ. ಇದನ್ನು ಕಂಡ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಅಮೇಜಾನ್ ಕಂಪನಿ ವಿರುದ್ಧ ದೂರು ನೀಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ ಅಭಿಯಾನವನ್ನೂ ಆರಂಭಿಸಿದ್ದಾರೆ. ಇದನ್ನೂ ಓದಿ: ಕನ್ನಡಿಗರಲ್ಲಿ ಕನ್ನಡದಲ್ಲೇ ಕ್ಷಮೆ ಕೇಳಿದ ಗೂಗಲ್
Advertisement
Advertisement
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಕಸ್ಟಮರ್ ಕೇರ್ ಗೆ ಕರೆ ಮಾಡಿ ಉಗಿಯಿರಿ, ಇಲ್ಲವೇ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿ ಎಂದು ಸಲಹೆ ನೀಡುತ್ತಿದ್ದಾರೆ. ಆದರೆ ಮಹಿಳೆಯರ ಈ ಒಳ ಉಡುಪುಗಳು ಭಾರತದಲ್ಲಿ ಸಿಗುತ್ತಿಲ್ಲ. ಕೆನಡಾದಲ್ಲಿ ಮಾರಾಟವಾಗುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಅಮೇಜಾನ್ ಕಂಪನಿ ವಿರುದ್ಧ ಕನ್ನಡ ಪರ ಸಂಘಟನೆಗಳು ಸಹ ಆಕ್ರೋಶ ವ್ಯಕ್ತಪಡಿಸುತ್ತಿವೆ. ಮಹಿಳೆಯರ ಒಳ ಉಡುಪುಗಳ ಮೇಲೆ ಕನ್ನಡದ ಬಾವುಟದ ಬಣ್ಣ ಹಾಗೂ ಕರ್ನಾಟಕದ ಲಾಂಛನ ಹಾಕಿದ್ದಕ್ಕೆ ಕಿಡಿಕಾರಿದ್ದಾರೆ.