ಬೆಂಗಳೂರು: ಅಂಡಮಾನ್ ಮತ್ತು ನಿಕೋಬರ್ ದ್ವೀಪ ವ್ಯಾಪ್ತಿಗೆ ಬರುವ ಬ್ಯಾರನ್ ಜ್ವಾಲಾಮುಖಿ ಇಂದು ಸ್ಪೋಟಗೊಂಡ ಪರಿಣಾಮ ದಕ್ಷಿಣ ಒಳನಾಡಿನಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಲಿದೆ.
ಈಗಾಗಲೇ ಬೆಂಗಳೂರಿನ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗುತ್ತಿದೆ. ಇಂದು ಬೆಳಗ್ಗೆ 6:45ಕ್ಕೆ ಜ್ವಾಲಾಮುಖಿ ಸ್ಫೋಟಗೊಂಡಿದ್ದರಿಂದ ಮಳೆಯಾಗುತ್ತಿದೆ ಎಂದು ಭೂ ವಿಜ್ಞಾನಿ ಪ್ರಕಾಶ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಬೆಂಗಳೂರು, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಇಂದು ರಾತ್ರಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
#Barren Island #volcano (Indian Ocean, India): explosive eruption today – After a one year calm period with little or no activity, it seems to have picked up again since around 6 November last year.
<b>Today at around 06:45 local t…https://t.co/WqAs9BYySr
— VolcanoDiscovery (@volcanodiscover) November 5, 2020
ಬ್ಯಾರನ್ ಜ್ವಾಲಾಮುಖಿ ಎಲ್ಲಿದೆ?
ಅಂಡಮಾನ್ ಮತ್ತು ನಿಕೋಬರ್ ದ್ವೀಪ ವ್ಯಾಪ್ತಿಯಲ್ಲಿರುವ ದೇಶದ ಏಕೈಕ ಜೀವಂತ ಜ್ವಾಲಾಮುಖಿ ಇದಾಗಿದ್ದು, ಪೋರ್ಟ್‌ಬ್ಲೇರ್‌ನಿಂದ 140 ಕಿ ಮೀ ದೂರದ ಬ್ಯಾರನ್ ದ್ವೀಪದಲ್ಲಿದೆ. ಸುಮಾರು 150 ವರ್ಷ ತಟಸ್ಥಗೊಂಡು, 1991ರಲ್ಲಿ ಒಮ್ಮೆ ಬುಸುಗುಟ್ಟಿದ್ದ ಈ ಜ್ವಾಲಾಮುಖಿ ಕಳೆದ ವರ್ಷ ನ.6 ರಿಂದ ಸಕ್ರಿಯವಾಗಿತ್ತು.
ಭಾರತ ಮತ್ತು ಬರ್ಮೀಸ್ ಭೂಪದರಗಳ ಕೂಡುವಿಕೆ ಪ್ರದೇಶದಲ್ಲಿರುವ ಈ ಜ್ವಾಲಾಮುಖಿ ಸುಮಾರು 18 ಲಕ್ಷ ವರ್ಷಗಳಷ್ಟು ಹಳೆಯದು. 1803ರಿಂದಲೂ ಈ ಜ್ವಾಲಾಮುಖಿ ತಟಸ್ಥವಾಗಿತ್ತು. 1991ರಲ್ಲಿ ಸುಮಾರು ಸುಮಾರು 6 ತಿಂಗಳ ಕಾಲ ಇದು ಸಕ್ರಿಯವಾಗಿತ್ತು.