– ತಕ್ಷಣ ಪೊಲೀಸರಿಗೆ ದೂರು ನೀಡಿದ್ಳು
ಲಕ್ನೋ: ಕೆಲವು ದಿನಗಳ ಹಿಂದೆ 16 ವರ್ಷದ ಹುಡುಗಿ ಬ್ಯಾಂಕ್ ಖಾತೆಗೆ ಬರೋಬ್ಬರಿ 10 ಕೋಟಿ ರೂಪಾಯಿ ಜಮೆಯಾಗಿದ್ದು, ಈ ಬಗ್ಗೆ ತಿಳಿದು ಆಕೆ ಶಾಕ್ ಆಗಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ನಡೆದಿದೆ.
ಸರೋಜಾ ಎಂಬಾಕೆಯ ಅಕೌಂಟ್‍ಗೆ ಬರೋಬ್ಬರಿ 10 ಕೋಟಿ ರೂಪಾಯಿ ಹಣ ಜಮೆಯಾಗಿದೆ. ಸದ್ಯಕ್ಕೆ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
Advertisement
Advertisement
ಸರೋಜಾ ಅನಕ್ಷರಸ್ಥಳಾಗಿದ್ದು, 2018 ರಿಂದ ಅಲಹಾಬಾದ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿದ್ದಾಳೆ. ಆದರೆ ಸರೋಜಾ ಸೋಮವಾರ ಬ್ಯಾಂಕಿಗೆ ಹಣ ಡ್ರಾ ಮಾಡಲು ಹೋಗಿದ್ದಾಳೆ. ಆಗ ಅಲ್ಲಿನ ಅಧಿಕಾರಿಗಳು ಆಕೆಯ ಖಾತೆಯಲ್ಲಿ 9.99 ಕೋಟಿ ರೂಪಾಯಿ ಇರುವುದನ್ನು ತಿಳಿಸಿದ್ದಾಳೆ. ಇದರಿಂದ ಗಾಬರಿಯಾದ ಸರೋಜಾ ತಕ್ಷಣ ಪೊಲೀಸ್ ಠಾಣೆಗೆ ಹೋಗಿ ಈ ಬಗ್ಗೆ ದೂರು ನೀಡಿದ್ದಾಳೆ.
Advertisement
Advertisement
ಕಾನ್ಪುರ್ ದೇಹತ್ ಜಿಲ್ಲೆಯ ನೀಲೇಶ್ ಕುಮಾರ್ ಎಂಬಾತ ಎರಡು ವರ್ಷಗಳ ಹಿಂದೆ ಸರೋಜಾ ಬಳಿ ವೈಯಕ್ತಿಕ ವಿವರಗಳನ್ನು ಕೇಳಿದ್ದನು. ಪ್ರಧಾನ್ ಮಂತ್ರಿ ಆವಾಸ್ ಯೋಜನೆಯಡಿ ಮನೆ ಇಲ್ಲದವರಿಗೆ ಹಣ ನೀಡಲು ಆಧಾರ್ ಕಾರ್ಡ್ ಮತ್ತು ಫೋಟೋ ಬೇಕು ಎಂದು ಕೇಳಿದ್ದನು. ಆತನ ಮಾತು ನಂಬಿದ ಸರೋಜಾ ಎಲ್ಲ ವಿವರಗಳನ್ನು ನೀಡಿದ್ದಾಳೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆ.
ಸರೋಜ್ ಹಲವಾರು ಬಾರಿ 10,000 ರಿಂದ 20,000 ರೂಪಾಯಿಯನ್ನು ಬ್ಯಾಂಕಿನಲ್ಲಿಟ್ಟಿದ್ದಳು. ಆಗಾಗ ಬಂದು ಆ ಹಣವನ್ನು ವಾಪಸ್ ಪಡೆಯುತ್ತಿದ್ದಳು ಎಂದು ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.
ಹಣ ಎಲ್ಲಿಂದ ಬಂತು ಎಂದು ತನಗೆ ತಿಳಿದಿಲ್ಲ ಎಂದು ಸರೋಜ್ ಹೇಳಿದ್ದಾಳೆ. ನಂತರ ನೀಲೇಶ್ ಕುಮಾರ್‌ನ ನಂಬರನ್ನು ನೀಡಿದ್ದಾಳೆ. ಆದರೆ ಆ ನಂಬರಿಗೆ ಫೋನ್ ಮಾಡಿದರೆ ಸ್ವಿಚ್ ಆಫ್ ಎಂದು ಬರುತ್ತಿದೆ. ಸದ್ಯಕ್ಕೆ ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.