ವಾಷಿಂಗ್ಟ್ನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದ ಉದ್ಘಾಟನಾ ಸಮಿತಿಯಲ್ಲಿ ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ.
ಜೋ ಬೈಡನ್ ಮತ್ತು ಕಮಲಾ ಹ್ಯಾರಿಸ್ ಅವರ ಅಧ್ಯಕ್ಷೀಯ ಪ್ರಮಾಣವಚನ ಉದ್ಘಾಟನಾ ಸಮಿತಿಯನ್ನು ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಅಮೆರಿಕಾದ ಇತಿಹಾಸದಲ್ಲಿ ಮೊದಲನೇ ಬಾರಿಗೆ ಭಾರತ ಮೂಲದ ಮಹಿಳೆಯೊಬ್ಬರು ಉಪಾಧ್ಯಕ್ಷ ಸ್ಥಾನಕ್ಕೆ ಏರಲು ಸಿದ್ಧತೆ ನಡೆಯುತ್ತಿದೆ. ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮದಲ್ಲಿ ಭಾರತದ ಕಂಪು ಕಾಣಿಸಿಕೊಳ್ಳುತ್ತದೆ.
Advertisement
Family, faith, hope and kindness. These two heroes provided a daily lesson. I can’t thank my parents enough for everything. We found this photo from around 1984, about a decade into their American journey. Miss my Dad but that hope….it never dies. pic.twitter.com/lUFjC3Zj5l
— Maju Varghese (@moojv77) December 16, 2019
Advertisement
2021ರ ಜನವರಿಯಲ್ಲಿ ನಡೆಯಲಿರುವ ಪ್ರಮಾಣ ವಚನ ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿಯನ್ನು ಭಾರತದ ಮೂದಲ ಮಜು ವರ್ಗೀಸ್ ವಹಿಸಿಕೊಳ್ಳಲಿದ್ದಾರೆ. ಇವರ ತಾಯಿ ಭಾರತದ ಕೇರಳದಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದರು. ತಂದೆ ನ್ಯೂಯಾರ್ಕ್‍ನಲ್ಲಿ ಕ್ಯಾಬ್ ಡ್ರೈವರ್ ಆಗಿದ್ದರು. ಈ ದಂಪತಿ ಮಗ ಮಜು ವೃತ್ತಿಯಲ್ಲಿ ವಕೀಲರಾಗಿದ್ದಾರೆ.
Advertisement
Mom,a nurse from India,logging long hours. Dad drove a cab in NYC, later worked long hours as a hospital security guard.Although we lost Dad to illness before this, our Mom got to cross the threshold to the Oval Office to meet the Boss, @BarackObama in 2017.Eternally grateful ???????? pic.twitter.com/5t0qwhrQHS
— Maju Varghese (@moojv77) August 14, 2019
Advertisement
ಅಧ್ಯಕ್ಷೀಯ ಚುನಾವಣಾ ಸಮಯದಲ್ಲಿ ಬೈಡೆನ್ ಮತ್ತು ಕಮಲಾ ಅವರ ಪರವಾಗಿ ಮಜು ಕೆಲಸ ಮಾಡಿದ್ದರು. ಸಾಕಷ್ಟು ಜನ ಸ್ವಯಂ ಸೇವಕರನ್ನು ಒಗ್ಗೂಡಿಸಿ, ಅವರ ಗೆಲುವಿಗೆ ಕಾರಣರಾಗಿದ್ದಾರೆ. ಇದೀಗ ಮಜು ವರ್ಗಿಸ್ ಅವರನ್ನು ಗುರುತಿಸಿರುವ ಅಧ್ಯಕ್ಷರು, ಅವರಿಗೆ ಅಧ್ಯಕ್ಷ ಉದ್ಘಾಟನಾ ಸಮಿತಿಯ ಕಾರ್ಯನಿರ್ವಾಹಕ ಮತ್ತು ನಿರ್ದೇಶಕರ ಸ್ಥಾನವನ್ನು ಕೊಟ್ಟಿದ್ದಾರೆ.
ಮಜು ವರ್ಗೀಸ್ ಈ ಹಿಂದೆ ಬರಾಕ್ ಒಬಾಮಾ ಅವರು ಅಧ್ಯಕ್ಷರಾಗಿದ್ದಾಗ ಅವರ ವಿಶೇಷ ಸಹಾಯಕ ಮತ್ತು ಉಪನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಇದೀಗ ಅಧ್ಯಕ್ಷಿಯ ಉದ್ಘಾಟನಾ ಸಮಿತಿಯಲ್ಲಿ ಭಾರತೀಯರಾದ ಮಜು ವರ್ಗೀಸ್ ಅವರು ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾಣಿಸಿಕೊಳ್ಳಲಿದ್ದಾರೆ.