ಬೈಕ್‍ಗಳ ಮುಖಾಮುಖಿ ಡಿಕ್ಕಿ- ತಂದೆ, ಮಗ ಸ್ಥಳದಲ್ಲೇ ಸಾವು

Public TV
1 Min Read
DVG Hadadi Police a

– ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸದೇ ನೋಡುತ್ತಾ ನಿಂತ ಜನ

ದಾವಣಗೆರೆ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಂದೆ-ಮಗ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ದಾವಣಗೆರೆ ನಗರದ ಕೈಗಾರಿಕಾ ಪ್ರದೇಶದ ಸಮೀಪದಲ್ಲಿ ನಡೆದಿದೆ.

ತುರ್ಚಗಟ್ಟ ನಿವಾಸಿ ಸಿದ್ದೇಶ್ (30), 3 ವರ್ಷದ ಮಗ ಮೃತ ದುರ್ದೈವಿಗಳು. ತಂದೆ-ಮಗ ಇಂದು ತುರ್ಚಗಟ್ಟದಿಂದ ದಾವಣಗೆರೆಗೆ ಬರುತ್ತಿದ್ದರು. ಈ ವೇಳೆ ಮತ್ತೊಂದು ಬೈಕ್‍ನಲ್ಲಿ ವೇಗವಾಗಿ ಬಂದ ಯುವಕರು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಎರಡೂ ಬೈಕ್‍ಗಳು ನುಜ್ಜುಗುಜ್ಜಾಗಿದ್ದು, ಕೆಳಗೆ ಬಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Police Jeep 1 1

ಮತ್ತೊಂದು ಬೈಕ್‍ನಲ್ಲಿದ್ದ ಯುವಕರು ಗಂಭೀರವಾಗಿ ಗಾಯಗೊಂಡು ಬಿದ್ದು ಒದ್ದಾಡುತ್ತಿದ್ದರೂ ಸ್ಥಳದಲ್ಲಿದ್ದವರು ಸುಮ್ಮನೆ ನೋಡುತ್ತಲೇ ನಿಂತಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಹದಡಿ ಠಾಣೆಯ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಯುವಕರು ಅತಿ ವೇಗದಲ್ಲಿ ಬೈಕ್ ಓಡಿಸಿದ್ದೇ ಘಟನೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಈ ಸಂಬಂಧ ಹದಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

DVG Hadadi Police B

Share This Article
Leave a Comment

Leave a Reply

Your email address will not be published. Required fields are marked *