ಉಡುಪಿ: ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ ಶಿವಕುಮಾರ್ ಉಡುಪಿ ಜಿಲ್ಲೆಯ ಪ್ರವಾಸ ಮಾಡಿ ಉತ್ತರ ಕನ್ನಡ ಜಿಲ್ಲೆಗೆ ತೆರಳಿದ್ದಾರೆ. ಜಿಲ್ಲಾ ಕಾಂಗ್ರೆಸ್ಸಿನಲ್ಲಿ ಡಿಕೆಶಿಗೆ ಸನ್ಮಾನ ಮಾಡುವ ಸಂದರ್ಭ ಕಾಂಗ್ರೆಸ್ ನಾಯಕರು ಎಡವಟ್ಟು ಮಾಡಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕರಾವಳಿಯ ಮೂರು ಜಿಲ್ಲೆಗಳ ಪ್ರವಾಸದಲ್ಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಪ್ತವಾಸ ಮಾಡಿ ಉತ್ತರ ಕನ್ನಡಕ್ಕೆ ತೆರಳಿದ್ದಾರೆ. ಉಡುಪಿ ಪ್ರವಾಸದ ವೇಳೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆಯನ್ನು ನಡೆಸಿದ್ದಾರೆ. ಈ ಸಂದರ್ಭ ಡಿ.ಕೆ ಶಿವಕುಮಾರ್ ಅವರಿಗೆ ಬೆಳ್ಳಿಯ ಕತ್ತಿಯನ್ನು ನೀಡಿ ಸನ್ಮಾನಿಸಲಾಯ್ತು. ಇದನ್ನೂ ಓದಿ: ಕೇಂದ್ರ ಸಂಪುಟ ಸೇರಿದ ಸಂಸದರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ
ಈ ಸನ್ಮಾನ ಜಿಲ್ಲೆಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಡಿಕೆಶಿಗೆ ಬೆಳ್ಳಿ ಕತ್ತಿ ನೀಡುವ ಬದಲು ದೈವಗಳಿಗೆ ಹರಕೆಯಾಗಿ ನೀಡುವ ಕಡ್ಸಲೆಯನ್ನು ನೀಡಲಾಗಿತ್ತು. ದೈವ ಪಾತ್ರಿ, ಭೂತಾರಾಧನೆ ಸಂದರ್ಭ ದೈವ ನರ್ತಕರು ಮಾತ್ರ ಕಡ್ಸಲೆ ಹಿಡಿದುಕೊಳ್ಳಲಾಗುತ್ತದೆ. ಧಾರ್ಮಿಕವಾಗಿ ಬಹಳ ಪವಿತ್ರವಾಗಿರುವ ಕಡ್ಸಲೆಯನ್ನು ಉಡುಗೊರೆಯಾಗಿ ನೀಡಿದ್ದು ಸರಿಯಲ್ಲ ಎಂದು ದೈವಾರಾಧಕರು ಭೂತರಾದನೆಯ ಮೇಲೆ ನಂಬಿಕೆ ಇರುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೈವಗಳ ಕಡ್ಸಲೆಯನ್ನ ಡಿಕೆ ಶಿವಕುಮಾರ್ ಗೆ ಉಡುಗೊರೆಯಾಗಿ ನೀಡಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ಕೇಳಿಬರುತ್ತಿದೆ. ದೈವಾರಾಧಕ ಸುದೀಪ್ ಪೂಜಾರಿ ಮಾತನಾಡಿ, ಕಡ್ಸಲೆ ಅಂದ್ರೆ ಭಯ ಭಕ್ತಿಯ ಸಂಕೇತ. ದೈವ ದೇವರ ಮೂರ್ತಿಯ ಬದಲು ಕಡ್ಸಲೆಗೆ ಕೈಮುಗಿದು ಪೂಜೆ ಪರ್ವ ಸಲ್ಲಿಸಲಾಗುತ್ತದೆ. ಕರಾವಳಿಯ ಸಂಸ್ಕೃತಿ ಗೊತ್ತಿದ್ದವರೇ ಹೀಗೆ ಮಾಡಿದ್ರೆ ಹೇಗೆ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ: ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ: ಭಾವುಕರಾದ ನಾರಾಯಣಸ್ವಾಮಿ