Connect with us

Latest

ಕೇಂದ್ರ ಸಂಪುಟ ಸೇರಿದ ಸಂಸದರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ

Published

on

Share this

ನವದೆಹಲಿ: ಪ್ರಧಾನಿ ಮೋದಿ ಅವರ ಸಂಪುಟ ಪುನಾರಚನೆ ಇವತ್ತು ನಡೆಯಲಿದ್ದು, ಕರ್ನಾಟಕದ ಸಂಸದರಾದ ನಾರಾಯಣಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಅದೃಷ್ಟ ಒಲಿದು ಬಂದಿದೆ ಎಂದು ತಿಳಿದು ಬಂದಿದೆ. ಸಂಜೆ 6 ಗಂಟೆಗೆ ನೂತನ ಕೇಂದ್ರ ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ.

ಸದ್ಯ ಕೇಂದ್ರ ಸಂಪುಟದಲ್ಲಿರುವ ಡಿ.ವಿ.ಸದಾನಂದ ಗೌಡರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಶೋಭಾ ಕರಂದ್ಲಾಜೆ ಕೇಂದ್ರ ಸಂಪುಟ ಸೇರ್ಪಡೆಯಾದ್ರೆ ರಾಜ್ಯದ ಆರನೇ ಸಂಸದೆಯಾಗಲಿದ್ದಾರೆ. ಈ ಹಿಂದೆ ಸರೋಜಿನಿ ಮಹಿಷಿ, ಬಳ್ಳಾರಿ ಸಂಸದೆಯಾಗಿದ್ದ ಬಸವರಾಜೇಶ್ಚರಿ, ಚಿಕ್ಕಮಗಳೂರು ಸಂಸದೆಯಾಗಿದ್ದ ಡಿ.ಕೆ.ತಾರದೇವಿ, ಕೆನರಾ ಸಂಸದೆಯಾಗಿದ್ದ ಮಾರ್ಗರೇಟ್ ಅಳ್ವಾ ಕೇಂದ್ರ ಸಚಿವರಾಗಿದ್ದರು. ಈಗ ಮತ್ತೆ ಉಡುಪಿ-ಚಿಕ್ಕಮಗಳೂರಿಗೆ ಅದೃಷ್ಟ ಒಲಿದು ಬಂದಿದೆ.

ಸಂಸದ ನಾರಾಯಣಸ್ವಾಮಿಗೆ ಏಕೆ ಸ್ಥಾನ?
ಎಸ್‍ಸಿ ಎಡಗೈ ಸಮುದಾಯದ ಕೋಟಾ ಇತ್ತು. ಮೊದಲ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಸ್ಥಾನ ಕೊಡಲಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಸ್ಥಾನವನ್ನ ಕೊಟ್ಟಿರಲಿಲ್ಲ. ಹಾಗಾಗಿ ಆ ಕೋಟಾದಲ್ಲಿ ಚಿತ್ರದುರ್ಗ ಸಂಸದರಾದ ನಾರಾಯಣಸ್ವಾಮಿ ಅವರಿಗೆ ಸ್ಥಾನ ನೀಡಲಾಗಿದೆ. ಇನ್ನೂ ನಾರಾಯಣಸ್ವಾಮಿ ಅವರು ಬಿ.ಎಲ್.ಸಂತೋಷ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.

ಶೋಭಾ ಕರಂದ್ಲಾಜೆಗೆ ಏಕೆ ಸ್ಥಾನ?
ಜಾತಿ ಸಮೀಕರಣದಲ್ಲಿ ಶೋಭಾ ಕರಂದ್ಲಾಜೆಗೆ ಅವರಿಗೆ ಅದೃಷ್ಟ ಒಲಿದಿದೆ. ಡಿ.ವಿ.ಸದನಾಂದಗೌಡರ ಸ್ಥಾನಕ್ಕೆ ಎರಡು ರೀತಿಯಲ್ಲಿ ಸಮೀಕರಣ ರಚನೆ ಮಾಡಲಾಗಿತ್ತು. ಒಂದು ಜಾತಿ ಇನ್ನೊಂದು ಕರಾವಳಿ ಭಾಗದ ಸಮೀಕರಣದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಸ್ಥಾನ ಸಿಕ್ಕಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ದೂರ ಇರುವಂತೆ ಹೈಕಮಾಂಡ್, ಆರ್‍ಎಸ್‍ಎಸ್ ಸೂಚನೆ ನೀಡಿತ್ತು ಎನ್ನಲಾಗಿದೆ. ಇಬ್ಬರ ಆಜ್ಞೆಯನ್ನು ಶೋಭಾ ಕರಂದ್ಲಾಜೆ ಚಾಚೂತಪ್ಪದೇ ಪಾಲಿಸಿದ್ದಾರೆ.

ಕಳೆದ ಎರಡು ವರ್ಷಗಳಿಂದ ಶೋಭಾ ಕರಂದ್ಲಾಜೆ ಅವರು ವ್ಯಕ್ತಿ ನಿಷ್ಠೆಯಿಂದ ಅಂತರ ಕಾಯ್ದುಕೊಂಡಿದ್ದರು. ಪಕ್ಷ, ಸಂಘ ನಿಷ್ಠರಾಗಿ ಉಳಿದು ರಾಜ್ಯ ರಾಜಕಾರಣದಿಂದ ದೂರವಿದ್ದ ಲಾಭವೇ ಕೇಂದ್ರ ಸಂಪುಟದಲ್ಲಿ ಸ್ಥಾನ ಎನ್ನಲಾಗುತ್ತಿದೆ.

Click to comment

Leave a Reply

Your email address will not be published. Required fields are marked *

Advertisement