– ಪೋಷಕರು ವಾಸವಿರುವ ಮನೆಗೆ ಪೊಲೀಸ್ ಭದ್ರತೆ
ಬೆಳಗಾವಿ: ಎಸ್‍ಐಟಿ ವಿಚಾರಣೆ ಬಳಿಕ ಸಿಡಿ ಲೇಡಿಯ ಪೋಷಕರು ಇಂದು ಬೆಳಗಿನ ಜಾವ ಸುಮಾರು 3.30ಕ್ಕೆ ಬೆಳಗಾವಿ ತಲುಪಿದ್ದಾರೆ. ಎಸಿಪಿ ಪರಮೇಶ್ವರ್ ನೇತೃತ್ವದ 16 ಸಿಬ್ಬಂದಿಯ ಎಸ್‍ಐಟಿ ಟೀಂ ಜತೆ ಆಗಮಿಸಿದ ಪೋಷಕರನ್ನ ಎಪಿಎಂಸಿ ಠಾಣೆ ಪೊಲೀಸರಿಗೆ ಹಸ್ತಾಂತರಿಸಲಾಯ್ತು.
ಒಂದು ಗಂಟೆಗೂ ಹೆಚ್ಚು ಕಾಲ ಯುವತಿ ಪೋಷಕರು ಪೊಲೀಸ್ ಠಾಣೆಯಲ್ಲಿ ಕುಳಿತಿದ್ದರು. ಈ ವೇಳೆ ತಮ್ಮ ಸ್ಥಿತಿ ಮತ್ತು ಮಗಳ ಬಗ್ಗೆ ಚಿಂತಿಸಿ ತಾಯಿ ಕಣ್ಣೀರು ಹಾಕಿದರು. ಎಪಿಎಂಸಿ ಠಾಣೆಯ ಸಿಪಿಐ ದಿಲೀಪ್‍ಕುಮಾರ್ ಕುಟುಂಬಸ್ಥರ ಜೊತೆ ಮಾತನಾಡಿ ಕೆಲ ಮಾಹಿತಿ ಪಡೆದುಕೊಂಡಿದ್ದಾರೆ.
ಪೊಲೀಸ್ ಠಾಣೆ ಬಳಿ ಮಾಧ್ಯಮಗಳ ಜೊತೆ ಮಾತನಾಡಿದ ಯುವತಿ ತಂದೆ, ಹೇಳಬೇಕಾದ ವಿಷಯಗಳನ್ನ ಬೆಂಗಳೂರಿನ ಪೊಲೀಸರ ಮುಂದೆ ಹೇಳಿದ್ದೇವೆ. ಸದ್ಯ ಏನು ಹೇಳದ ಪರಿಸ್ಥಿತಿಯಲ್ಲಿದ್ದೇವೆ. ನಮ್ಮ ಹೇಳಿಕೆ ನಂತ್ರ ಬಿಡುಗಡೆಯಾಗಿರುವ ಮಗಳ ವೀಡಿಯೋ ನನ್ನ ಗಮನಕ್ಕೂ ಬಂದಿದೆ. ಸದ್ಯ ಬೆಳಗಾವಿಯಲ್ಲಿಯೇ ಇರಲಿದ್ದು, ಒಂದೆರಡು ದಿನಗಳಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಭಾವ ಬೀರಿ ನಮ್ಮ ತಂದೆ, ತಾಯಿಯಿಂದ ಹೇಳಿಕೆ ಕೊಡಿಸಿದ್ದಾರೆ: ಸಿಡಿ ಲೇಡಿ 5ನೇ ವೀಡಿಯೋ ಹೇಳಿಕೆ
ಅಲ್ಲಿಂದ ಪೊಲೀಸ್ ಭದ್ರತೆಯೊಂದಿಗೆ ವಾಸವಿದ್ದ ಬಾಡಿಗೆ ಮನೆಗೆ ಯುವತಿ ಪೋಷಕರು ತೆರಳಿದ್ದರು. ಆದ್ರೆ ಮನೆಯ ಮಾಲೀಕರು ಯುವತಿ ಪೋಷಕರಿಗೆ ಒಳಗೆ ಪ್ರವೇಶಿಸಲು ವಿರೋಧ ವ್ಯಕ್ತಪಡಿಸಿದ್ದರು. ನೀವು ಇಲ್ಲಿಂದ ತೆರಳಿದ ನಂತರ ಪೊಲೀಸರು ಮತ್ತು ಮಾಧ್ಯಮದ ಸಿಬ್ಬಂದಿ ಮನೆಗೆ ಬಂದಿದ್ದರು. ಈ ಘಟನೆಯಿಂದಾಗಿ ನಮಗೆ ಮುಜುಗರ ಉಂಟಾಗುತ್ತಿದೆ. ದಯವಿಟ್ಟು ನಿಮ್ಮ ಸ್ವಂತ ಊರಿಗೆ ತೆರಳುವಂತೆ ಮನವಿ ಮಾಡಿಕೊಂಡಿದ್ದರು. ಪೊಲೀಸರು ಮಾಲೀಕರಿಗೆ ತಿಳಿ ಹೇಳಿದ್ದರಿಂದ ಮನೆಯಲ್ಲಿರಲು ಅವಕಾಶ ಕಲ್ಪಿಸಿಕೊಟ್ಟರು. ಇದನ್ನೂ ಓದಿ: ಚಿನ್ನೀ, ಡಿಕೆ ಶಿವಕುಮಾರ್ ರೊಕ್ಕ ಕೊಟ್ಟಿದ್ದಾರೆ, ಗೋವಾಗೆ ಹೋಗ್ತಿದ್ದೀವಿ – ಸಹೋದರನ ಜೊತೆ ಸಿಡಿ ಲೇಡಿ ಟಾಕ್