ಬೆಂಗಳೂರು: ಬೆಡ್ ಬ್ಲಾಕಿಂಗ್ ಪ್ರಕರಣದಲ್ಲಿ ಬಿಜೆಪಿ ಶಾಸಕ್ ಸತೀಶ್ ರೆಡ್ಡಿ ಆಪ್ತ ಬಾಬು ಬಂಧನಕ್ಕೆ ಸಿಸಿಬಿ ಸಕಲ ತಯಾರಿ ನಡೆಸಿದೆ.
ಶಾಸಕ ಸತೀಶ್ ರೆಡ್ಡಿ ಹಾಗೂ ಪಿಎ ಹರೀಶ್‍ಗೆ ಕಿಂಗ್‍ಪಿನ್ ಬಾಬು ಖಾಸಾ ದೋಸ್ತಿ ಹೊಂದಿದ್ದಾನೆ. ಸತೀಶ್ ರೆಡ್ಡಿ ಮಾತಿನಂತೆಯೇ ಬಾಬು ಬೆಡ್ ಬ್ಲಾಕ್ ಮಾಡಿಸುತ್ತಿದ್ದಾಗಿ ತಿಳಿದು ಬಂದಿದೆ. ಜೊತೆಗೆ ಕೆಲವರಲ್ಲಿ ಪ್ರತ್ಯೇಕವಾಗಿ ಹಣ ಪಡೆದು ಬೆಡ್ ಬ್ಲಾಕ್ ಮಾಡಿರುವ ಸಾಧ್ಯತೆಯೂ ಇದೆ. ಬಾಬುಗೆ ಸಿಸಿಬಿ ಡ್ರಿಲ್ ಮಾಡಿದ ಬೆನ್ನಲ್ಲೇ ಈಗ ಬಿಪಿ ಏರುಪೇರಾಗಿ ಆಸ್ಪತ್ರೆ ಪಾಲಾಗಿದ್ದಾನೆ. ಈ ಬೆನ್ನಲ್ಲೇ ಕೊರೋನಾ ಪಾಸಿಟಿವ್ ಆಗಿದ್ಯಂತೆ.
ತೇಜಸ್ವಿ ಸೂರ್ಯ ರೇಡ್ ಮಾಡಿದ್ದಾಗ ಸತೀಶ್ ರೆಡ್ಡಿ ಜೊತೆಯಲ್ಲೇ ಇದ್ದ ಬಾಬು, ವಾರ್‍ರೂಂ ಸಿಬ್ಬಂದಿಗೆ ಫುಲ್ ಅವಾಜ್ ಹಾಕಿದ್ದರು. ಸತೀಶ್ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಬೊಮ್ಮನಹಳ್ಳಿ ವಲಯದ ವಾರ್ ರೂಮ್‍ಗೆ ನುಗ್ಗಿ ಕರ್ತವ್ಯ ನಿರತ ವೈದ್ಯೆ ಪಲ್ಲವಿ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ, ನೊಡೇಲ್ ಆಫೀಸ್ ಯಶವಂತ್ ಅನ್ನೋವ್ರಿಗೆ ಬೆಡ್ ಹಂಚಿಕೆ ವಿಷಯವಾಗಿ ಹಲ್ಲೆಗೆ ಯತ್ನಿಸಿದ್ದಾರೆ. ಇದನ್ನೂ ಓದಿ: ಬೆಡ್ ದಂಧೆ ನಡೆಯೋದು ಹೇಗೆ ಅನ್ನೋದನ್ನ ವಿವರಿಸಿದ ತೇಜಸ್ವಿ ಸೂರ್ಯ
ಐಎಎಸ್ ಅಧಿಕಾರಿ ಕೈ ಮುಗಿದು ಮಾತನಾಡಲು ಅವಕಾಶ ಕೊಡಿ ಅಂದರೂ ಬಿಟ್ಟಿಲ್ಲ. ಈ ವೇಳೆ ನನಗೇನಾದರೂ ಆದರೆ ನಿಮ್ಮ ಮೇಲೆ ಎಫ್‍ಐಆರ್ ದಾಖಲಿಸ್ತೇನೆ ಅಂತ ಪೊಲೀಸರಿಗೆ ಯಶವಂತ್ ಹೇಳಿದ್ದಾರೆ. ಇದರಿಂದ ರೊಚ್ಚಿಗೆದ್ದ ಸತೀಶ್ ರೆಡ್ಡಿ ಬೆಂಬಲಿಗರು ಮತ್ತಷ್ಟು ರಾದ್ಧಾಂತ ಸೃಷ್ಟಿಸಿದ್ದಾರೆ. ತೇಜಸ್ವಿ ಸೂರ್ಯ ರೇಡ್‍ಗೆ ಮುಂಚೆ ಅಂದರೆ ಏಪ್ರಿಲ್ 30ರಂದು ಈ ಘಟನೆ ನಡೆದಿದ್ದು, ಈಗ ಬೆಳಕಿಗೆ ಬಂದಿದೆ.