ಬೆಂಗ್ಳೂರು ನಿವಾಸಿಗಳಿಗೆ ಕಹಿ ಸುದ್ದಿ – ಕಸಕ್ಕೂ ಶುಲ್ಕ ಪಾವತಿಸಿ

Public TV
1 Min Read
garbage 5

ಬೆಂಗಳೂರು: ಬೆಂಗಳೂರಿನ ನಿವಾಸಿಗಳಿಗೆ ಕಹಿ ಸುದ್ದಿ. ಮುಂದಿನ ತಿಂಗಳಿಂದ ನೀವು ಮನೆ ಖರ್ಚುಗಳ ಜೊತೆ ಕಸದ ಬಿಲ್‍ಗೆ ಹಣ ಹೊಂದಿಸಬೇಕಾಗುತ್ತದೆ. ಲಾಕ್‍ಡೌನ್ ಕಷ್ಟಗಳ ನಡುವೆ ಕಸಕ್ಕೆ ಬಿಲ್ ಹಾಕಲು ಬಿಬಿಎಂಪಿ ಮುಂದಾಗಿದೆ.

2019ರ ಆಗಸ್ಟ್‍ನಲ್ಲಿ ಬಿಬಿಎಂಪಿ ಅನುಮೋದಿಸಿದ್ದ ನಿರ್ಣಯಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ದೂ, ಅಧಿಸೂಚನೆ ಹೊರಡಿಸಿದೆ. ಇಲ್ಲಿಯ ತನಕ ತ್ಯಾಜ್ಯ ನಿರ್ವಹಣೆಗೆ ಶೇ.5 ರಷ್ಟು ಉಪಶುಲ್ಕ ಸಂಗ್ರಹ ಮಾಡ್ತಿದ್ದ ಬಿಬಿಎಂಪಿ, ಇನ್ಮುಂದೆ ಪ್ರತಿ ಮನೆಗಳಿಗೆ 200 ರೂಪಾಯಿ ಕರ ವಿಧಿಸಲಿದೆ.

garbage 4

ಇದರ ಜೊತೆ ಸಾರ್ವಜನಿಕ ಸ್ಥಳಗಳಲ್ಲಿ ಕಸ ಬಿಸಾಡುವವರಿಗೆ ಸ್ಥಳದಲ್ಲೇ ದಂಡ ವಿಧಿಸಲಿದೆ. ಇದಲ್ಲದೇ ಹಸಿ ಕಸ ಒಣ ಕಸ ಬೇರ್ಪಡಿಸದೆ ಕೊಟ್ಟರೂ ದಂಡ ಹಾಕಲಿದೆ. ಪ್ಲಾಸ್ಟಿಕ್ ಬಳಕೆ ಮಾಡಿದ್ರೂ 500 ರೂ. ವರೆಗೂ ದಂಡ ಕಟ್ಟಬೇಕಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಇನ್ನು ಯಾವುದೇ ಕಾರ್ಯಕ್ರಮಗಳನ್ನು ನಡೆಸುವುದಾದರೆ ಅದಕ್ಕೆ ಪ್ರತ್ಯೇಕವಾಗಿ ಕಸ ನಿರ್ವಹಣೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸಮುದಾಯ ಭವನ, ಹೋಟೆಲ್, ಖಾಲಿ ನಿವೇಶನಗಳಲ್ಲಿ ನಡೆಯುವ ಕಾರ್ಯಕ್ರಮ, ವಸ್ತು ಪ್ರದರ್ಶನ ಮತ್ತು ಕಲ್ಯಾಣ ಮಂಟಪಗಳಲ್ಲಿ ತಾತ್ಕಾಲಿಕ ಮನರಂಜನಾ ಕಾರ್ಯಕ್ರಮಕ್ಕೆ ವಾರಕ್ಕೆ 1,500 ರೂ., ಒಂದು ವಾರದಿಂದ ಒಂದು ತಿಂಗಳವರೆಗಿನ ಕಾರ್ಯಕ್ರಮಗಳಿಗೆ 3 ಸಾವಿರ ರೂ., ಒಂದು ತಿಂಗಳಿಗಿಂತ ಹೆಚ್ಚು ಅವಧಿಯ ಕಾರ್ಯಕ್ರಮಗಳಿಗೆ 6 ಸಾವಿರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *