– ಎಸ್‍ಡಿಪಿಐ ಸಂಘಟನೆ ಬ್ಯಾನ್ ಆಗಬೇಕು
ಚಿಕ್ಕಬಳ್ಳಾಪುರ: ಬೆಂಗಳೂರಿನಲ್ಲಿ ನಡೆದ ಗಲಭೆಗೆ ಕಾರಣಕರ್ತರಾದ ಗಲಭೆಕೋರರು ಪಾತಾಳದಲ್ಲಿ ಅಡಗಿದ್ದರೂ ಅವರನ್ನ ಬಿಡೋದಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಹೇಳಿದರು.
Advertisement
ನಗರದಲ್ಲಿ ಮಾತನಾಡಿದ ಅವರು, ಗಲಭೆಕೋರರನ್ನು ಹಿಡಿಯುವ ಸಾಮರ್ಥ್ಯ ಸರ್ಕಾರಕ್ಕಿದ್ದು, ಸಮಾಜಘಾತುಕರನ್ನ ಸೆರೆಹಿಡಿಬೇಕೆಂಬ ಚೈತನ್ಯ ನಮ್ಮ ಪೊಲೀಸರಿಗಿದೆ ಎಂದರು. ಇದೇ ವೇಳೆ ಎಸ್‍ಡಿಪಿಐ ಸಂಘಟನೆ ಕ್ರೌರ್ಯ ಹಾಗೂ ಹಿಂಸೆಗೆ ದಾರಿ ಮಾಡಿಕೊಟ್ಟಿದ್ದು. ಇಂತಹ ಸಮಾಜಘಾತುಕ ಎಸ್‍ಡಿಪಿಐ ಸಂಘಟನೆ ಬ್ಯಾನ್ ಮಾಡಬೇಕು ಎಂದು ತನ್ನ ಅಭಿಪ್ರಾಯವನ್ನು ಹಂಚಿಕೊಂಡರು. ಇದನ್ನೂ ಓದಿ: ಗಲಭೆ ನಿಯಂತ್ರಿಸಲು ಗೃಹ ಸಚಿವರು ಸಂಪೂರ್ಣ ವಿಫಲರಾಗಿದ್ದಾರೆ: ಡಿಕೆಶಿ
Advertisement
Advertisement
ಕೊರೊನಾ ಸಂಬಂಧ ಪ್ರತಿಕ್ರಿಯಿಸಿ, ವೈಜ್ಞಾನಿಕವಾಗಿ ರಾಜ್ಯದಲ್ಲಿ ಇನ್ನೂ ಕೆಲ ವಾರಗಳು ಸೋಂಕಿತರ ಸಂಖ್ಯೆ ಜಾಸ್ತಿಯಾಗಲಿದ್ದು, ತದನಂತರ ಕಡಿಮೆಯಾಗಲಿದೆ. ಬೇರೆ ದೇಶಗಳಂತೆ ನಮ್ಮ ದೇಶದಲ್ಲಿ ಕಡಿಮೆ ಆಗಲಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಸಾವಿನ ಪ್ರಮಾಣ ಕಡಿಮೆಯಿದ್ದು, ಬೆಂಗಳೂರಿನಲ್ಲಿ ಸಾವಿನ ಪ್ರಮಾಣ ಶೇ1.7 ರಷ್ಟಿದೆ ಎಂದರು.
Advertisement
ಡಿಸೆಂಬರ್ ಹಾಗೂ ಜನವರಿಯೊಳಗೆ ಕೊರೊನಾ ವೈರಸ್ ಕಡಿವಾಣಕ್ಕೆ ಲಸಿಕೆ ಸಿಗುವ ವಿಶ್ವಾಸದ ನೀರೀಕ್ಷೆಯಲ್ಲಿದ್ದೇವೆ ಅಂತ ತಿಳಿಸಿದರು. ಇದನ್ನೂ ಓದಿ:ಯಾರನ್ನೂ ಬ್ಲಾಕ್‍ಮೇಲ್ ಮಾಡೋ ಪ್ರಶ್ನೆ ಇಲ್ಲ- ಡಿಕೆಶಿಗೆ ಬೊಮ್ಮಾಯಿ ತಿರುಗೇಟು