ಬೆಂಗಳೂರು: ಸಂಜೆ ಆಗುತ್ತಿದ್ದಂತೆ ಸಿಲಿಕಾನ್ ಸಿಟಿಯಲ್ಲಿ ಜೋರು ಮಳೆಯಾಗಿದ್ದು, ಮೋಡ ಕವಿದ ವಾತಾವರಣವಿದೆ. ಸಂಜೆ ಮಳೆಗೆ ವಾಹನ ಸವಾರರು ಸಿಲುಕಿ ಪರದಾಡುವಂತಾಯ್ತು. ಜಯನಗರದ ಏಳನೇ ಬ್ಲಾಕ್ ಮೆಟ್ರೊ ಪಿಲ್ಲರ್ ಬಳಿ ಮರವೊಂದು ಧರೆಗುರುಳಿದೆ.
ಮೆಜೆಸ್ಟಿಕ್, ಮಲ್ಲೇಶ್ವರಂ, ಕಾಟನ್ ಪೇಟೆ, ಬಿನ್ನಿ ಮಿಲ್, ಓಕಳಿಪುರಂ, ವಿಧಾನಸೌದ, ಶಿವಾಜಿನಗರ, ಆನಂದ್ ರಾವ್ ಸರ್ಕಲ್, ಕಾರ್ಪೋರೇಷನ್, ಹೆಬ್ಬಾಳ, ನಾಗವಾರ, ಯಲಹಂಕ, ಸಂಜಯ್ ನಗರ, ಗಂಗೇನಹಳ್ಳಿ, ಆರ್ ಟಿ ನಗರ, ಕೆಜಿ ಹಳ್ಳಿ, ಹೆಣ್ಣೂರು ಸೇರಿದಂತೆ ಹಲವೆಡೆ ಅಬ್ಬರದ ಮಳೆಯಾಗಿದೆ.
ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನ ಟ್ರಾಫಿಕ್ ನಲ್ಲಿ ಸಿಲುಕುವಂತಾಯ್ತು. ಮಳೆಯಿಂದಾಗಿ ಬಸ್ ನಿಲ್ದಾಣ, ಫ್ಲೈಓವರ್ ಕೆಳೆಗೆ ಜನರು ಸಾಮಾಜಿಕ ಅಂತರ ಮರೆತು ನಿಂತಿರುವ ದೃಶ್ಯಗಳ ಕಂಡು ಬಂದವು. ಎಂ.ಎಸ್. ಬಿಲ್ಡಿಂಗ್ ಬಳಿ ಮತ್ತು ವಿಧಾನಸೌಧದ ಮುಂದಿನ ರಸ್ತೆಯಲ್ಲಿ ಎರಡು ಅಡಿಗಳಷ್ಟು ನೀರು ನಿಂತಿತ್ತು.