– ಇಂದು 12,545 ಮಂದಿ ಗುಣಮುಖ
ಬೆಂಗಳೂರು: ರಾಜ್ಯದಲ್ಲಿ ಇಂದು 9,464 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 4,40,41ಕ್ಕೆ ಏರಿಕೆಯಾಗಿದೆ.
ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 130 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7067 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇಂದು ರಾಜ್ಯದಲ್ಲಿ 12,545 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 4,40,411 ಸೋಂಕಿತರ ಪೈಕಿ 98,326 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 12,545 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 770 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು 28,350 ರ್ಯಾಪಿಡ್ ಟೆಸ್ಟ್ ನಲ್ಲಿ 36,319 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 64,669 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 1208996 ಮಂದಿಗೆ ರ್ಯಾಪಿಡ್ ಟೆಸ್ಟ್, 2441823 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 26,50,819 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.
ಬೆಂಗಳೂರಿನಲ್ಲಿ ಇಂದು 3,426 ಮಂದಿಗೆ ಸೋಂಕು ದೃಢವಾಗಿದ್ದು, 30 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 163631ಕ್ಕೆ ಏರಿಕೆ ಆಗಿದೆ. ಬಳ್ಳಾರಿ 382, ಬೆಳಗಾವಿ 244, ಚಿತ್ರದುರ್ಗ 247, ದಕ್ಷಿಣ ಕನ್ನಡ 446, ದಾವಣಗೆರೆ 297, ಧಾರವಾಡ 203, ಹಾಸನ 305, ಹಾವೇರಿ 240, ಕಲಬುರಗಿ 261, ಮೈಸೂರು 676, ಶಿವಮೊಗ್ಗ 349, ತುಮಕೂರು 395 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ.
ಬಾಗಲಕೋಟೆ 129, ಬಳ್ಳಾರಿ 359, ಬೆಳಗಾವಿ 608, ಬೆಂಗಳೂರು ಗ್ರಾಮಾಂತರ 89, ಬೆಂಗಳೂರು ನಗರ 6116, ಬೀದರ್ 94, ಚಾಮರಾಜನಗರ 60, ಚಿಕ್ಕಬಳ್ಳಾಪುರ 86, ಚಿಕ್ಕಮಗಳೂರು 170, ಚಿತ್ರದುರ್ಗ 643, ದಕ್ಷಿಣ ಕನ್ನಡ 197, ದಾಬಣಗೆರೆ 274, ಧಾರವಾಡ 266, ಗದಗ 530, ಹಾಸನ 443, ಹಾವೇರಿ 86, ಕಲಬುರಗಿ 144, ಕೋಲಾರ 61, ಕೊಪ್ಪಳ 137, ಮಂಡ್ಯ 105, ಮೈಸೂರು 517, ರಾಯಚೂರು 206, ರಾಮನಗರ 163, ಶಿವಮೊಗ್ಗ 391, ತುಮಕೂರು 136, ಉಡುಪಿ 116, ಉತ್ತರ ಕನ್ನಡ 182, ವಿಜಯಪುರ 96, ಯಾದಗಿರಿ 30 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇಂದಿನ 11/09/2020 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿ.@CMofKarnataka @BSYBJP @DVSadanandGowda @SureshAngadi_ @MoHFW_INDIA @UNDP_India @WHOSEARO @UNICEFIndia @sriramulubjp @drashwathcn @BSBommaihttps://t.co/M8PSMazNQ4 pic.twitter.com/XEEuO99Gy8
— K'taka Health Dept (@DHFWKA) September 11, 2020