ಬೆಂಗಳೂರು: ಶಾಸಕ ಅಖಂಡ ಶ್ರೀನಿವಾಸ್ ಮೇಲೆ ದಾಳಿಗೆ ಹಿಂದೆಯೇ ಪ್ಲಾನ್ ಮಾಡಲಾಗಿತ್ತು. ಆದರೆ ಅವಕಾಶಕ್ಕಾಗಿ ಹುಡುಕುಲಾಗುತ್ತಿತ್ತು. ಈ ಅವಕಾಶ ನಿನ್ನೆ ಸಿಕ್ಕಿತ್ತು ಎಂಬ ಮಾತುಗಳು ಈಗ ಕೇಳಿ ಬಂದಿದೆ.
ಈ ಮಾತಿಗೆ ಪುಷ್ಟಿಎನ್ನುವಂತೆ ಕಂದಾಯ ಸಚಿವ ಅಶೋಕ್ ಹೇಳಿಕೆ ನೀಡಿದ್ದು ಈಗ ಭಾರೀ ಸಂಚಲನ ಮೂಡಿಸಿದೆ.ವಿಧಾನಸೌಧದಲ್ಲಿ ಕಂದಾಯ ಸಚಿವರನ್ನು ಅಖಂಡ ಶ್ರೀನಿವಾಸ ಮೂರ್ತಿ ಭೇಟಿ ಮಾಡಿ ರಾತ್ರಿಯ ಘಟನೆಯನ್ನು ವಿವರಿಸಿದರು. ಈ ವೇಳೆ ಸಿಎಂಗೆ ಕರೆ ಮಾಡಿದ ಸಚಿವರು, ಗಲಭೆಯಲ್ಲಿ ಮೂವರು ಪಾಲಿಕೆ ಸದಸ್ಯರ ಪಾತ್ರವಿದೆ ಎಂದು ಮಾಹಿತಿ ನೀಡಿದರು.
Advertisement
Advertisement
ಬೆಂಗಳೂರು ಗಲಭೆ ಹಿಂದೆ ಎಸ್‍ಡಿಪಿಐ, ಕೆಎಫ್‍ಡಿ ಸಂಘಟನೆಗಳ ಕೈವಾಡದ ಆರೋಪ ಕೇಳಿಬಂದಿದೆ. 9 ಪ್ರತ್ಯೇಕ ಎಫ್‍ಐಆರ್ ದಾಖಲಿಸಿರುವ ಪೊಲೀಸರು ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಶಾ, ಫಿರೋಜ್, ಮುದಾದ್ ಸೇರಿ ಒಟ್ಟು 145 ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇದನ್ನೂ ಓದಿ: ಒಂದು ರಾತ್ರಿಯ ಬೆಂಗಳೂರು ದಂಗೆ – ಎಷ್ಟು ಕೋಟಿ ನಷ್ಟ?
Advertisement
ಪಾಲಿಕೆ ಸದಸ್ಯೆ ಇರ್ಷಾದ್ ಬೇಗಂ ಪತಿ ಖಲೀಂ ಪಾಷಾ ಕೂಡ ಪ್ರಮುಖ ಆರೋಪಿಯಾಗಿದ್ದಾನೆ. ಗಲಭೆ ಬಳಿಕ ಖಲೀಂ ಪಾಶಾ ಓಡಿ ಹೋಗಿದ್ದು, ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಮಾಜಿ ಕಾರ್ಪೋರೇಟರ್ ಮುಜಾಮಿಲ್ ಪಾಶಾ ವಿರುದ್ಧ ಈಗಾಗಲೇ ಡಿಜೆ ಹಳ್ಳಿ ಠಾಣೆಯಲ್ಲಿ ಐದು ಪ್ರಕರಣಗಳಿವೆ.
Advertisement
ಎಸ್‍ಡಿಪಿಐನ ಮತ್ತೊಬ್ಬ ಕಾರ್ಯಕರ್ತ ಅಯಾಜ್ ಕೂಡ ಅರೆಸ್ಟ್ ಆಗಿದ್ದಾನೆ. ಆಯಾಜ್ ಗಲಭೆಗೂ ಮುನ್ನ ಠಾಣೆಗೂ ಬಂದಿದ್ದ. ಬಳಿಕ ಉದ್ರಿಕ್ತರನ್ನು ಪ್ರಚೋದಿಸಿ ಗಲಭೆ ಮಾಡಿಸಿದ್ದ ಎನ್ನಲಾಗ್ತಿದೆ. ಇದನ್ನೂ ಓದಿ: ನಿಮ್ಮ ಬಳಿ ಮದ್ದು, ಗುಂಡುಗಳು ಎಷ್ಟಿವೆ? ಬುಲೆಟ್ ಪ್ರೂಫ್ ಜಾಕೆಟ್ ಸರಿಯಾಗಿ ಹಾಕಿಕೊಳ್ಳಿ : ಅಲೋಕ್ ಕುಮಾರ್
ಗಲಭೆ ನಿಯಂತ್ರಣಕ್ಕೆ ಪೊಲೀಸರು ಮೌಲ್ವಿಯೊಬ್ಬರನ್ನು ಕರೆಸಿದರು. ಆದ್ರೆ ಮೌಲ್ವಿ ಮಾತನ್ನು ಯಾರು ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಾಗಿ ಇವತ್ತು ಮೌಲ್ವಿಯನ್ನು ಸ್ಟೇಷನ್‍ಗೆ ಕರೆಸಿ ವಿಚಾರಣೆ ನಡೆಸಲಾಗಿದೆ.
ಗಲಭೆಗೆ ನಾವು ಕಾರಣ ಅಲ್ಲ. ನಿಯಂತ್ರಿಸಲು ನಮ್ಮ ಕಾರ್ಯಕರ್ತರು ಸ್ಥಳಕ್ಕೆ ಹೋಗಿದ್ದರು. ಗಲಭೆಗೆ ಧರ್ಮನಿಂದನೆ ಮತ್ತು ಪೊಲೀಸ್ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಧರ್ಮ ನಿಂದನೆಗೆ ಕಾರಣನಾದ ನವೀನ್‍ನನ್ನು ಬಂಧಿಸಿದ್ರೆ ಹೀಗಾಗುತ್ತಿರಲಿಲ್ಲ ಅಂತ ಎಸ್‍ಡಿಪಿಐ ಹೇಳಿಕೊಂಡಿದೆ.