ಬೆಂಗಳೂರು: ರಾಜ್ಯಕ್ಕೆ ಗಡಿ ಜಿಲ್ಲೆಗಳು ಡೇಂಜರ್ ಝೋನ್ ಅದರೆ ಬೆಂಗಳೂರಿಗೆ ಗಡಿ ವಾರ್ಡುಗಳೇ ಡೇಂಜರ್ ಝೋನ್ ಆಗಿವೆ. ಬೆಂಗಳೂರು ನಗರದ ಕೇಂದ್ರ ಭಾಗಗಳಲ್ಲಿ ಕೊರೊನಾ ಸಂಖ್ಯೆ ಇಳಿಮುಖವಾಗಿದೆ. ಜನಸಂಖ್ಯೆ ಹೆಚ್ಚಿರುವ ಮತ್ತು ಹೆಚ್ಚು ವ್ಯಾಪಾರ ವ್ಯವಹಾರ ನಡೆಯುವ ಸಿಟಿ ಸೆಂಟರ್ ನಲ್ಲಿ ಕೊರೊನಾ ಇಳಿಮುಖವಾಗಿದೆ. ಜನಸಂಖ್ಯೆ ವಿರಳವಾಗಿರುವ ಬೆಂಗಳೂರಿನ ಹೊರ ವಲಯದಲ್ಲಿರೋ ವಾರ್ಡ್ ಗಳಲ್ಲಿ ಕೊರೊನಾ ಸ್ಫೋಟವಾಗುತ್ತಿದೆ. ನಗರ ಕೇಂದ್ರದಲ್ಲಿರೋ 10 ವಾರ್ಡ್ ಗಳಲ್ಲಿ ಕಳೆದ 10 ದಿನಗಳಿಂದ ಶೂನ್ಯ ಕೊರೊನಾ ಕೇಸ್ ದಾಖಲಾಗಿದೆ.
Advertisement
ಶೂನ್ಯ ಪ್ರಕರಣ ದಾಖಲಾದ ವಾರ್ಡ್:
ಕುಶಾಲ ನಗರ, ಲಕ್ಷ್ಮೀದೇವಿ ನಗರ, ಮುನೇಶ್ವರ ನಗರ, ಸಗಾಯ್ ಪುರ, ಛಲವಾದಿಪಾಲ್ಯ, ಜಗಜೀವನ್ ರಾಮ್ ನಗರ, ರಾಯ್ ಪುರ, ಮಲ್ಲಸಂದ್ರ, ಭೈರಸಂದ್ರ ಮತ್ತು ಗುರಪ್ಪನ ಪಾಳ್ಯ
Advertisement
ಡೇಂಜರ್ ವಾರ್ಡ್ ಗಳು:
ಬೇಗೂರು, ಬೆಳ್ಳಂದೂರು, ರಾಜರಾಜೇಶ್ವರಿ ನಗರ, ಹೂಡಿ, ಹಗದೂರು, ವರ್ತೂರು, ಹೊರಮಾವು, ಬಸವನಪುರ, ವಿಜ್ಞಾನ ನಗರ್ ಮತ್ತು ವಿದ್ಯಾರಣ್ಯಪುರ
Advertisement
Advertisement
ಆ್ಯಕ್ಟಿವ್ ಕಂಟೈನ್‍ಮೆಂಟ್ ಝೋನ್:
ಬೆಂಗಳೂರಿನಲ್ಲಿ ಕೊರೊನಾ ಕಂಟೈನ್‍ಮೆಂಟ್ ಝೋನ್ ಸಂಖ್ಯೆ 172ಕ್ಕೆ ಏರಿಕೆಯಾಗಿದ್ದು, ಆತಂಕ ಹೆಚ್ಚು ಮಾಡಿದೆ. ಒಟ್ಟು 81 ಪ್ರತ್ಯೇಕ ಮನೆಗಳಲ್ಲಿ ಕೊರೊನಾ ಸೋಂಕು ಹರಡಿದೆ. 9 ಹೋಟೆಲ್ ಹಾಗೂ ಕ್ವಾಟ್ರರ್ಸ್ ಗಳಲ್ಲಿ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಮಹದೇವಪುರದಲ್ಲಿ ಅತಿ ಹೆಚ್ಚು ಕಂಟೈನ್‍ಮೆಂಟ್ ಝೋನ್ ಗಳಿವೆ. ಮಹದೇವಪುರ ವಲಯದಲ್ಲಿ ಒಟ್ಟು 49 ಕಂಟೈನ್‍ಮೆಂಟ್ ಗಳನ್ನ ಬಿಬಿಎಂಪಿ ಗುರುತು ಮಾಡಿದೆ.
1. ಬೊಮ್ಮನಹಳ್ಳಿ 24 ಕಂಟೈನ್‍ಮೆಂಟ್ ಝೋನ್ – 24 ಅಪಾರ್ಟ್ ಮೆಂಟ್
2. ಪಶ್ಚಿಮ ವಲಯದಲ್ಲಿ 36 ಕಂಟೈನ್‍ಮೆಂಟ್ ಝೋನ್ – 13 ಅಪಾರ್ಟ್ ಮೆಂಟ್
3. ಮಹದೇವಪುರದಲ್ಲಿ 49 ಕಂಟೈನ್‍ಮೆಂಟ್ ಝೋನ್ – 28 ಅಪಾರ್ಟ್ ಮೆಂಟ್
4. ದಕ್ಷಿಣದಲ್ಲಿ 21 ಕಂಟೈನ್‍ಮೆಂಟ್ ಝೋನ್ – 8 ಅಪಾರ್ಟ್ ಮೆಂಟ್
5. ಪಶ್ಚಿಮ ವಲಯದಲ್ಲಿ 11 ಕಂಟೈನ್‍ಮೆಂಟ್ ಝೋನ್ – 2 ಅಪಾರ್ಟ್ ಮೆಂಟ್
6. ಯಲಹಂಕದಲ್ಲಿ 25 ಕಂಟೈನ್‍ಮೆಂಟ್ ಝೋನ್ – 11 ಅಪಾರ್ಟ್ ಮೆಂಟ್
7. ಆರ್.ಆರ್.ನಗರದಲ್ಲಿ 5 ಕಂಟೈನ್‍ಮೆಂಟ್ ಝೋನ್ – 2 ಅಪಾರ್ಟ್ ಮೆಂಟ್
8. ದಾಸರಹಳ್ಳಿಯಲ್ಲಿ 1 ಪ್ರತ್ಯೇಕ ಮನೆಯಲ್ಲಿ ಪಾಸಿಟಿವ್ ಕೇಸ್ ದಾಖಲಾಗಿದೆ